ಮುಗಳಖೋಡ 01: ಪಟ್ಟಣದ ವಾರ್ಡ ನಂ 2ರ ಈ ಹಿಂದಿನ ಪುರಸಭೆೆಯ ಸದಸ್ಯರಾದ ಸಂಗಪ್ಪ ಖೇತಗೌಡರ ಅವರ ಆಕಸ್ಮಿಕ ಮರಣದಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಮೇ 29ರಂದು ಉಪಚುನಾವಣೆ ನಡೆದದ್ದು ಅದರಲ್ಲಿ ಮೂರು ಜನರ ಮಧ್ಯ ಬಾರಿ ಪೈಪೋಟಿ ಏರ್ಪಟ್ಟು ತೀವ್ರ ಕೂತಹಲ ಕೆರಳಿಸಿತ್ತು. ಅಂದರೆ ಸ್ವತಂತ್ರ ಅಭ್ಯಥರ್ಿಗಳಾಗಿ ರಮೇಶ ಯಡವಣ್ಣವರ ಮತ್ತು ಕವಿತಾ ಭೀ. ಬನಶಂಕರಿ ಅವರು ಕಣಕ್ಕಿಳಿದಿದ್ದರೆ, ಬಿಜೆಪಿ ಅಭ್ಯಥರ್ಿಯಾಗಿ ರಮೇಶ ಖೇತಗೌಡರ ಅವರು ಕಣಕ್ಕಿಳಿದಿದ್ದರು. ಹೀಗೆ ಈ ಬಾರಿ ಉಪಚುನಾವಣೆ ಪೈಪೋಟಿಯಿಂದ ಕೂಡಿತ್ತು.
ಈ ಚುನಾವಣೆಯ ಫಲಿತಾಂಶ 31ರಂದು ಹೊರಬಿದ್ದಿದ್ದು ಅದರಲ್ಲಿ ಬಿಜೆಪಿ ಅಭ್ಯಥರ್ಿ ರಮೇಶ ಖೇತಗೌಡರ 49 ಮತಗಳ ಅಂತರದಿಂದ 213 ಮತಗಳನ್ನು ಪಡೆಯುವದರೊಂದಿಗೆ ಜಯಗಳಿಸಿದ್ದಾರೆ. ಸ್ವತಂತ್ರ ಅಭ್ಯಥರ್ಿಗಳಾದ ರಮೇಶ ಯಡವಣ್ಣವರ ಅವರು 164 ಮತಗಳನ್ನು ಪಡೆದರೆ ಕವಿತಾ ಬನಶಂಕರಿ ಅವರು 31 ಮತಗಳನ್ನು ಪಡೆದಿದ್ದಾರೆಂದು ತಿಳಿದುಬಂದಿದೆ.
ವಿಜಯಶಾಲಿ ಅಭ್ಯಥರ್ಿಯಾದ ರಮೇಶ ಖೇತಗೌಡರ ಹಿರಿಯರಾದ ಎಂ.ಎಸ್.ಗೋಕಾಕ, ಗೌಡಪ್ಪ ಖೇತಗೌಡರ, ಹನಮಂತ ಶೇಗುಣಶಿ, ಮುತ್ತಪ್ಪ ಬಾಳೋಜಿ, ಶಿವಬಸು ಕಾಪ್ಸಿ, ಲಕ್ಷ್ಮಣ ಗೋಕಾಕ, ಮಹಾದೇವ ಹುಕ್ಕೇರಿ, ಮಹಾದೇವ ಶೇಗುಣಸಿ, ಅಣ್ಣಪೂಣರ್ಾ ಯರಡತ್ತಿ, ಶಿವು ಗೋಕಾಕ. ಲತಾ ಹುದ್ದಾರ, ರವಿ ಖೇತಗೌಡರ, ಮಲ್ಲು ಖೇತಗೌಡರ, ಮಾಂತು ಯರಡತ್ತಿ, ಸಂಗಪ್ಪ ತೇಲಿ, ಮುತ್ತು ಕುಲಿಗೋಡ, ಮುಂತಾದ ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಾ ಯಲ್ಲಾಲಿಂಗೇಶ್ವರ ಮಠಕ್ಕೆ ಹೋಗಿ ಯಲ್ಲಾಲಿಂಗೇಶ್ವರ ದರ್ಶನ ಪಡೆದುಕೊಂಡರು.