ಲೋಕದರ್ಶನ ವರದಿ
ಕುಕನೂರ 7: ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಹಾಲಪ್ಪ ಆಚಾರವರು ದೇಶದಲ್ಲಿ ನರೇಂದ್ರ ಮೋದಿಯವರ ಸಾಧನೆ ಮೆಚ್ಚಿ ಮತ್ತೊಮ್ಮೆ ಅವರನ್ನು ಮತ್ತೆ ದೇಶದ ಪ್ರಧಾನಿ ಮಂತ್ರಿಯನ್ನಾಗಿ ಮಾಡಿದ್ದಾರೆ, ಶ್ಯಾಮ್ ಪ್ರಸಾಧ ಮುಖಜರ್ಿಯವರ ಜನ್ಮದಿನದ ಅಂಗವಾಗಿ 6 ರಿಂದ ಅಗಷ್ಟ 11ರವರಿಗೆ ವಾರಾಣಾಸಿಯಲ್ಲಿ ದೇಶದ ಪ್ರಧಾನಿಯವರು ಭಾರತೀಯ ಜನತಾ ಪಾಟರ್ಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಕಳೆದ ಬಾರಿ 45 ಸಾವಿರ ಸದಸ್ಯರು ಭಾಜಪಕ್ಕೆ ನೊಂದಣಿ ಮಾಡಿಸಿದ್ದ ಕೀತರ್ಿ ಕಾರ್ಯಕರ್ತರಿಗೆ ಸಲ್ಲುತ್ತೆದೆ, ಬಿಜೆಪಿಯು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೀರಿಕ್ಷೇಗಿಂತಲೂ ಮೀರಿ 303 ಸ್ಥಾನಗಳನ್ನು ಪಡೆಯುವುದರ ಮೂಲಕ ದೇಶದ ನಾಯಕನನ್ನು ಆಯ್ಕೆ ಮಾಡಿದ್ದಾರೆ, ಕನರ್ಾಟಕದಲ್ಲಿ ಸರಿಸುಮಾರು ಶೇಕಢಾ 51ರಷ್ಟು, ದೇಶದಲ್ಲಿ 84% ರಷ್ಟು ಒಟು ನಮ್ಮ ಬಿಜೆಪಿ ಪಕ್ಷವು ಪಡೆದಿದೆ, ಆದರೆ ಕಳೆದ ಕಾಂಗ್ರೇಸ್ ಸರಕಾರ ಸುಮಾರು 52ವರ್ಷಗಳ ಕಾಲ ಆಡಳಿತ ಮಾಡಿದರು ಅವರ ದುರಾಡಳಿತದಿಂದ ಬೇಸತ್ತ ದೇಶದ ಜನ ಅವರನ್ನು ಅಧಿಕಾರದಿಂದ ದೂರವಿಟ್ಟು, ಕುಟಂಬವೇ ತನ್ನ ದೇಶವೆಂದು ಪ್ರಮಾಣಿಕ ಸೇವೆ ಮಾಡುವ ನರೇಂದ್ರ ಮೋದಿಯವರಿಗೆ ಮತ್ತೋಮ್ಮೆ ಅಧಿಕಾರವನ್ನು ಕೊಟ್ಟಿದ್ದಾರೆ. ಚುನಾವಣೆಗಳು ಬರುತ್ತವೆ, ಹೋಗುತ್ತೆವೆ ಆದರೆ ಪಕ್ಷದ ಕಾರ್ಯಕರ್ತನಾಗಿ ನಾನೇನು ಮಾಡಿದೆ ಎಂಬುದು ಮುಖ್ಯವಾಗುತ್ತಿದೆ ಯಾಕೆಂದರೆ, ಪಕ್ಷ ಇದ್ದರೆ ನಾವು ಪಕ್ಷ ಬೆಳಿಸದರೆ ಅಧಿಕಾರ, ಯಾರಿಗೂ ಅಧಿಕಾರ ಶಾಶ್ವತವಲ್ಲ ಅಧಿಕಾರ ಇದ್ದಾಗ ಮಾತ್ರ ಸಂಘಟನೆಯಲ್ಲಿ ತೊಡುಗುವುದಲ್ಲ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರರಾಗಿ ದುಡಿದ್ದರಿಂದಲೆ ಇವತ್ತು ಯಲಬುಗರ್ಾ ಮಂಡಳದಲ್ಲಿ 252 ಬೂತಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು 80ಸಾವಿರ ಸದಸ್ಯರನ್ನು ಹೊಂದಿದೆ, ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೂ ನರೇಂದ್ರ ಮೋದಿಯವರ ಕಾರ್ಯವನ್ನು ತಿಳಿಸಿ ಇನ್ನೂ ಹೆಚ್ಚಿನ ಸದಸ್ಯರರನ್ನಾಗಿ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷ ರತನ್ ದೇಸಾಯಿ,ಜಿಲ್ಲ ಸಂಚಾಲಕ ಅಮರೇಶ ಕೂಳಗಿ,ಸಹ ಸಂಚಾಲಕ ಈರಪ್ಪ ಕುಡಗುಂಟಿ, ಮಾರುತಿ ಗಾವರಾಳ,ನವೀನ್ ಗುಳಗಣ್ಣವರ, ಬಸಲಿಂಗಪ್ಪ ಬೂತೆ,ರಾಮಣ್ಣ ಬಜೇಂತ್ರಿ, ಶಿವಶಂಕರ ದೇಸಾಯಿ, ವಿಶ್ವನಾಥ ಮರಿಬಸಪ್ಪನವರ, ಶಿವಕುಮಾರ ನಾಗಾಲೂಪುರ ಮಠ, ಪ್ರಭು ಕಲಬುರ್ಗಿ ಇನ್ನಿತರರು ಇದ್ದರು.