ಲೋಕದರ್ಶನ ವರದಿ
ಬೆಟಗೇರಿ(ತಾ.ಗೋಕಾಕ) 4: ಗ್ರಾಮದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಇವರ ಆಶ್ರಯದಲ್ಲಿ ಇದೇ ಶುಕ್ರವಾರ ಜ.4ರಂದು 21 ನೇ ವರ್ಷದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇಲ್ಲಿಯ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಖಾಸಗಿ ವಾಹನಗಳ ಮೂಲಕ ಶಬರಿಮಲೆಗೆ ಯಾತ್ರೆ ಕೈಗೊಂಡರು.
ಸಾಯಂಕಾಲ ಅಯ್ಯಪ್ಪಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ ಪೂಜೆ ನಡೆದ ಬಳಿಕ ಮಮದಾಪೂರದ ಮೌನ ಮಲ್ಲಿಕಾಜರ್ುನ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ, ಅಯ್ಯಪ್ಪಸ್ವಾಮಿ ಮಾಲಾಧಾರಿ ಗುರುಸ್ವಾಮಿಗಳಾದ ವೀರನಾಯ್ಕ ನಾಯ್ಕರ, ಬಸವರಾಜ ಬೆಟಗೇರಿ ಸೇರಿದಂತೆ ಹಿರಿಯ ಮಾಲಾಧಾರಿ ಗುರುಸ್ವಾಮಿಗಳ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆದ ನಂತರ ದರ್ಶನ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಸಡಗರದಿಂದ ನಡೆಯಿತು.
ವೀರನಾಯ್ಕ ನಾಯ್ಕರ ಗುರುಸ್ವಾಮಿ ಮಾತನಾಡಿ, ಇಲ್ಲಿಯ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಅಯ್ಯಪ್ಪಸ್ವಾಮಿ ಗುರುಸ್ವಾಮಿಗಳು, ಮಾಲಾಧಾರಿಗಳು 45 ದಿನಗಳ ಕಾಲ ಕಠಿಣ ವೃತಾಚರಣೆ ಕೈಗೊಂಡು, ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸುಮಾರು 8 ದಿನಗಳ ಕಾಲ ಶಬರಿಮಲೆಗೆ ಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಗ್ರಾಮದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಕುಟುಂಬದವರು, ಭಕ್ತರು, ಗ್ರಾಮಸ್ಥರು ಸ್ಥಳೀಯ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಆಗಮಿಸಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಯಾತ್ರೆ ಕೈಗೊಂಡ ಮಾಲಾಧಾರಿ ಸ್ವಾಮಿಗಳಿಗೆ ಶುಭ ಹಾರೈಸಿದರು. ಸುಭಾಷ ಕರೆಣ್ಣವರ, ಸುಭಾಷ ಜಂಬಗಿ, ಸುರೇಶ ಬಾನಸಿ, ವಿಠಲ ಚಂದರಗಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಇತರರು ಇದ್ದರು.