ಮಹಿಳಾ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ತಡೆಗಟ್ಟಲು ಜನರಲ್ಲಿ ಜಾಗೃತಿ ಜಾಥಾ

Awareness rally to prevent cancer as part of Women's Day

ಮಹಿಳಾ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ತಡೆಗಟ್ಟಲು ಜನರಲ್ಲಿ ಜಾಗೃತಿ ಜಾಥಾ 

ಕೊಪ್ಪಳ  12: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಲ್ಲಿ ಹಾಗೂ ಜನರಲ್ಲಿ ಕ್ಯಾನ್ಸರ್ ರೋಗ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ವನ್ನು ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ನಗರದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ನಗರದ ಬಸ್ ಸ್ಟ್ಯಾಂಡ್ ನಿಂದ ಅಶೋಕ್ ಸರ್ಕಲ್ ವರೆಗೆ ಬೃಹತ್ ಜಾಥಾ ಹಮ್ಮಿಕೊಂಡು ಮಾರಕ ರೋಗ ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಘೋಷಣೆ ಕೂಗುತ್ತಾ ಜನರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ರಾಲಿ ನಡೆಯಿತು, ಸದರಿ ಜಾಥಾ ದಲ್ಲಿ ತಜ್ಞ ವೈದ್ಯ ಡಾ, ಅನಿರುದ್ಧ ಕುಷ್ಟಗಿ, ಲೈನ್ಸ್‌ ಕಣ್ಣಿನ ಆಸ್ಪತ್ರೆಯ ಪ್ರದೀಪ್ ಸೋಮಲಾಪುರ ಹಿರಿಯ ವೈದ್ಯರಾದ ಡಾ, ರಾಧಾ ಕುಲಕರ್ಣಿ , ಮುಂದಾಳತ್ವ ವಹಿಸಿ ಭಾಗವಹಿಸಿದ್ದರು, ಅಲ್ಲದೆ ಕೊಪ್ಪಳದ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಗೀತಾ ರವರ ನೇತೃತ್ವದಲ್ಲಿ ಕಾಲೇಜಿನ ಸುಮಾರು 70 ವಿದ್ಯಾರ್ಥಿಗಳು ಸಹ ್ಯಲಿಯಲ್ಲಿ ಪಾಲ್ಗೊಂಡಿದ್ದರು,  ಬೃಹತ್ ರಾಲಿಯ ನೇತೃತ್ವ ವಹಿಸಿದ್ದ ಕೊಪ್ಪಳ ಇನ್ನರ್ ವೀಲ್ ಕ್ಲಬ್ಬಿನ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅವರು ಮಾತನಾಡಿ ಕ್ಯಾನ್ಸರ್ ದಂತಹ ಮಾರಕ ರೋಗ ಗುಣಪಡಿಸಲು ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಇದನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮ ವಹಿಸಿಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬೃಹತ್ ರಾಲಿ ಹಮ್ಮಿಕೊಳ್ಳಲಾಗಿದೆ ಇದರಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಗೂ ಅವರು ಅಭಿನಂದಿಸಿದರು,  ಈ ಸಂದರ್ಭದಲ್ಲಿ ಕ್ಲಬ್ಬಿನ ಉಪಾಧ್ಯಕ್ಷರಾದ ಮಧು ಶೆಟ್ಟರ್, ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಖಜಾಂಚಿ ಆಶಾ ಕವಲೂರ್, ಐ ಎಸ್ ಓ ಮಧು ನಿಲೋಗಲ್, ಎಡಿಟರ್ ನಾಗವೇಣಿ ಗರೂರ, ಕಾರ್ಯಕಾರಣಿ ಸಮಿತಿ ಸದಸ್ಯರಾದ ಸುಜಾತ ಪಟ್ಟಣಶೆಟ್ಟಿ, ಪಾರ್ವತಿ ಪಾಟೀಲ್ ನಿತಾ ತಂಬ್ರಳ್ಳಿ, ಸುಧಾ ಶೆಟ್ಟರ್ ವಿಜಯಲಕ್ಷ್ಮಿ ಹಂಚಾಟಿ ಸದಸ್ಯರಾದ ವಿದ್ಯಾ ಬೆಟಿಗೇರಿ, ಕವಿತಾ ಶೆಟ್ಟರ್ ,ಹೇಮಾ ಬಳ್ಳಾರಿ, ಜ್ಯೋತಿಮಟ್ಟಿ, ತ್ರಿವೇಣಿ ,ಶೋಭಾ ಹಮ್ಮಿಗಿ ಸೇರಿದಂತೆ ಮಹಿಳೆಯರು ಅನೇಕರು ಜಾಥಾದಲ್ಲಿ ಪಾಲ್ಗೊಂಡು ರಾಲಿಯನ್ನು ಯಶಸ್ವಿಗೊಳಿಸಿದರು.