ಲೋಕದರ್ಶನ ವರದಿ
ಕೊಪ್ಪಳ 11: ತಾಲೂಕಿನಾದ್ಯಂತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಂಜೆಂಟಾ ಇಂಡಿಯಾ ಲಿಮಿಟೆಡ್ ಮತ್ತು ಕಿಲರ್ೋಸ್ಕರ್ ಫೆರಸ್ ಇಂಡಸ್ಟ್ರೀಜ್ ಲಿಮಿಟೆಡ್ ಹಾಗೂ ಸವರ್ೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ನೊವೇಲ್ ಕೊರೊನಾ ವೈರಸ್ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಪ್ರತಿ ಓಣಿ ಮತ್ತು ಗಲ್ಲಿ ಗಲ್ಲಿಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಹಾಗೂ ಧ್ವನಿವರ್ಧಕದ ಮೂಲಕ ಕೊರೊನಾ ವೈರಸ್ ಕುರಿತಂತೆ ಜಾಗೃತಿಯನ್ನು ಮೂಡಿಸಿ, ಮಾಸ್ಕ್ಗಳ ಉಪಯೋಗ ಹಾಗೂ ಸ್ಯಾನಿಟೆಜರಗಳ ಉಪಯೋಗ ಹಾಗೂ ಮಹತ್ವದ ಕುರಿತು ಗ್ರಾಮಸ್ಥರಿಗೆ ತಿಳಿ ಹೇಳಲಾಯಿತು.
ವೈರಸ್ನ ಕುರಿತು ಭಯ ಪಡುವ ಜನರಿಗೆ ಸಾಂತ್ವನ ಹೇಳಿ ಮುಂದೆ ಆಗುವಂತಹ ಕರೋನ ವೈರಸ್ ಹರಡುವ ಅನಾಹುತಗಳ ಕುರಿತು ಮನವರಿಕೆ ಮಾಡಲಾಯಿತು. ಪ್ರತಿಯೊಬ್ಬರು ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಲಾಯಿತು. ಜಾಗೃತಿ ಕಾರ್ಯಕ್ರಮದ ಮುತ್ತುವಜರ್ಿ ವಹಿಸಿ ಸವರ್ೋದಯ ಸಂಸ್ಥೆಯ ಯೋಜನೆ ನಿದರ್ೇಶಕಿ ದೀಪಾ ಮತ್ತು ಶರಣಪ್ಪ ಸಿಂಗನಾಳ ಮಕ್ಕಳ ಸಹಾಯವಾಣಿ-1098 ಹಾಗೂ ಅಕ್ಕಮ್ಮ ಕೊಟಗಿ ಇವರುಗಳು ಜಾಗೃತಿಯ ನೇತೃತ್ವವಹಿಸಿ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಜಾಗೃತಿಗೊಳಿಸಲು ಹೆಚ್ಚಿನ ಕಾಳಜಿಯನ್ನು ವಹಿಸಿದ್ದರು.
ಇದೇ ಸಂದರ್ಭಗಳಲ್ಲಿ ಕೊಪ್ಪಳ ನಗರದ ಪೊಲೀಸ್ ಚೇಕ್ ಪೊಸ್ಟ್ನಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಸವರ್ೋದಯ ಸಂಸ್ಥೆಯ ಅಧ್ಯಕ್ಷ ನಾಗರಾಜ ದೇಸಾಯಿ ನೇತೃತ್ವದಲ್ಲಿ ನೊವೇಲ್ ಕೊರೊನಾ ವೈರಸ್ ನಿಯಂತ್ರಣ ಮತ್ತು ಸುರಕ್ಷತೆಗಾಗಿ ಸ್ಯಾನಿಟೆಜರಗಳನ್ನು ವಿತರಣೆ ಮಾಡಿದರು.
ಕಿಲರ್ೋಸ್ಕರ್ ಫೆರಸ್ ಇಂಡಸ್ಟ್ರೀಜ ಲಿಮಿಟೆಡ್ ಕಾಖರ್ಾನೆ ವತಿಯಿಂದ ಬಡವರಿಗೆ ನಿರಾಶ್ರಿತರಿಗೆ ಮತ್ತು ಹಕ್ಕಿಪಿಕ್ಕಿ ಸಮುದಾಯದವರಿಗೆ ರೂಪಾಯಿ 300 ಬೆಲೆಯ ಅಡುಗೆ ಸಾಮಾಗ್ರಿಗಳನ್ನು ಸುಮಾರು 150 ಪಾಕೇಟ್ಗಳನ್ನು ನಗರದ ವಾರ್ಡ ನಂ 5, 12, ಮತ್ತು 22 ರಲ್ಲಿ ಉಚಿತವಾಗಿ ವಿತರಿಸಿದರು. ಸಂದರ್ಭದಲ್ಲಿ ಕಿಲರ್ೋಸ್ಕರ್ ಕಂಪನಿಯ ವತಿಯಿಂದ ಕಾರ್ಯನಿರತ ಪೊಲೀಸ್ ಸಿಬ್ಬಂದಿಯವರಿಗೆ ನಗರದ ವ್ಯಾಪ್ತಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು. ಕಂಪನಿಯ ಸಿ.ಎಸ್.ಆರ್. ವ್ಯವಸ್ಥಾಪಕರಾದ ಉದ್ದವ್ ಕುಲಕಣರ್ಿ ಮತ್ತು ಮನೋಜ ಶ್ರೀನಿವಾಸ್, ನಗರ ಠಾಣೆ ಆರಕ್ಷಕ ನಿರಕ್ಷಕರು ಮೌನೇಶ ಮಾಲಿಪಾಟೀಲ್, ಸವರ್ೋದಯ ಭಾಗಿ ಸಂಸ್ಥೆಯ ಅಧ್ಯಕ್ಷರು ನಾಗರಾಜ ದೇಸಾಯಿ, ಸಂಸ್ಥೆ ಯೋಜನಾ ನಿರ್ದೇಶಕಿ ದೀಪಾ ಯಲ್ಲಾಲಿಂಗೇಶ್ ವಜ್ಜಲ್, ಪತ್ರಕರ್ತ ಮಂಜುನಾಥ ಗೊಂಡಬಾಳ, ಸುನೀಲ್ ಹೆಸರುರೂ ಇತರರ ಭಾಗವಹಿಸಿದ್ದರು.