ಬೈಲಹೊಂಗಲ 02: ಏಡ್ಸ ಒಂದು ಮಾರಣಾಂತಿಕ ರೋಗವಾಗಿದು, ಇದನ್ನು ತಡೆಗಟ್ಟಲು ಜನತೆಯಲ್ಲಿ ಅದರ ಕುರಿತು ಅರಿವು ಮೂಡಿಸುವದು ಮಹತ್ವದ್ದಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಕಾವೇರಿ ಕಲ್ಮಠ ಹೇಳಿದರು.
ಅವರು ಶನಿವಾರ ಪಟ್ಟಣದ ಚನ್ನಮ್ಮ ಐಕ್ಯ ಸ್ಥಳದ ಹತ್ತಿರ ನಡೆದ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನ್ಯಾಯವಾದಿಗಳ ಸಂಘ, ತಾಲೂಕಾ ಕಾನೂನು ಸೇವಾ ಸಮಿತಿ, ಶಿಶು ಅಭಿವೃದ್ದಿ ಇಲಾಖೆ ಇವುರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ ಏಡ್ಸ್ ದಿನಾಚಾರಣೆ ನಿಮಿತ್ಯ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಏಡ್ಸ ಪೀಡಿತ ರೋಗಿಯ ಮಾನವೀಯ ಮನೊಭಾವನೆ ಹೊಂದಿ, ಆತನಿಗೆ ಸಮರ್ಪಕ ಉಪಚಾರ ಲಭಿಸುವಂತೆ ಶ್ರಮಿಸಬೇಕೆಂದರು.
ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಚೈತ್ರಾ ಎ.ಎಂ ಸೌಭಾಗ್ಯ ಬೋಸೇರ, ನ್ಯಾಯವಾದಿಗಳಾದ ದೀಪಕ ಸಂಗೋಳ್ಳಿ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್. ಕುಲಕಣರ್ಿ, ಎಸ್.ಎನ್ ಸಿದ್ಧಮನಿ, ಎಸ್. ವಾಯ್. ಪಾಟೀಲ, ಬಿ. ವಾಯ್. ದೋತ್ರದ, ಎ.ಬಿ. ಪಾಟೀಲ ಬಿ.ಕೆ. ಪತ್ತಾರ, ಡಿವಾಯ್ಎಸ್ಪಿ ಕರುಣಾಕರಶೆಟ್ಟಿ, ಪಿಸೈ ಎಮ್.ಎಸ್.ಹೂಗಾರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಮುತ್ನಾಲ, ಹಿರಿಯ ಆರೋಗ್ಯ ಸಹಾಯಕ ನಾಗರಾಜ ಖಾಡೆ, ಹಾಗೂ ತಂಡದ ವೈದ್ಯರು, ಸಿಬ್ಬಂದಿ ವರ್ಗ, ಮತ್ತು ಕಿತ್ತೂರ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಬಿ. ತಲ್ಲೂರ ಹಾಗೂ ಸಹ ಪ್ರಾದ್ಯಾಪಕರಾದ ಪಿ.ಎಂ. ಆಯಾಚಿತ, ಪಿ.ಬಿ. ಹೂಲಿ, ಬಿ.ಎನ್ ಮುದೆನ್ನವರ. ಎಸ್, ಬಿ. ಕರಡಿಗುದ್ದಿ, ಬಿ.ಎಂ. ಕಾಡೇಶನವರ, ಮಹಾಂತೇಶ ಗಡೆನ್ನವರ, ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು
ಜಾಗೃತಿ ಜಾಥಾದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಾಣಾಥರ್ಿಗಳು ಭಾಗವಹಿಸಿದ್ದರು.