ನೂತನ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ


ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ20 : ಹಗರಿಬೊಮ್ಮನಹಳ್ಳಿಯ ಹಾಲುಸ್ವಾಮಿ ಮಠದ ಆವರಣದಲ್ಲಿ ಶುಕ್ರವಾರ ಕನರ್ಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಬಳ್ಳಾರಿ ಜಿಲ್ಲೆ ನಾಮ ನಿದರ್ೇಶನ ಸದಸ್ಯರೊಂದಿಗೆ ತಾಲೂಕು ವಿಶ್ವಕರ್ಮ ಸಮುದಾಯದವರ ಮುಖಂಡರ ಜೊತೆ ಸಮಾಲೋಚನೆ ಹಾಗೂ ಸಕರ್ಾರದಿಂದ ಮಂಜೂರಾಗಿರುವ ನೂತನ ಯೋಜನೆಗಳ ಬಗ್ಗೆ ಚಚರ್ೆ ಹಾಗೂ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. 

     ಬಳ್ಳಾರಿ ಜಿಲ್ಲಾ ನಾಮ ನಿದರ್ೇಶನ ಸದಸ್ಯ ಎಂ. ಮಂಜುನಾಥ ಜಾಗೃತಿ ಸಭೆಯ ಅಧ್ಯಕ್ಷತೆವಹಿಸಿ, ನಾನಾ ಯೋಜನೆಗಳನ್ನು ಅರಿತು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಶ್ವಕರ್ಮ ಸಮುದಾಯದವರು ಮತ್ತು ಉಪ ಪಂಗಡದವರು ಜಾಗೃತಿ ಹೊಂದಬೇಕು. ಈ ಹಿಂದೆ ನೀಡಲಾಗುತ್ತಿರುವ ಯೋಜನೆಗಳ ಜೊತೆಗೆ ನೂತನ ಯೋಜನೆಗಳಾದ ಮಹಿಳೆಯರಿಗೆ ಕಿರು ಸಾಲ ಯೋಜನೆ, ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್ ಇದ್ದು ಅರಿತು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. 

   ಕನರ್ಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಿಂದ 2018-19ನೇ ಸಾಲಿಗೆ ರಾಜ್ಯ ಸಕರ್ಾರ ಹಾಗೂ ಎನ್.ಬಿ.ಸಿ.ಎಫ್.ಡಿ.ಸಿ. ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಚಿಸುವವರು ಭತರ್ಿ ಮಾಡಿದ ನಿಗಧಿತ ಅಜರ್ಿ ನಮೂನೆಗಳನ್ನು ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಇಲ್ಲವೇ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಜುಲೈ 25ರೊಳಗಾಗಿ ಸಲ್ಲಿಸಬೇಕು ಎಂದು ಹೇಳಿದರು. ಜೊತೆಗೆ ವಿಶ್ವಕರ್ಮ ಸಮುದಾಯದ ಜನತೆಗೆ, ವಿಶ್ವಕರ್ಮ ಅಭಿವೃದ್ದಿ ನಿಗಮದ ಪರಿಚಯ ಪತ್ರ, ವಿಶ್ವಕರ್ಮ ಸಮುದಾಯಗಳ ಸಾಂಪ್ರದಾಯಿಕ ಪಂಚ ಕಸುಬುಗಳ ಪಕ್ಷಿ ನೋಟದ ಕರ ಪತ್ರ, ನಾನಾ ಯೋಜನೆಗಳ ವಿವರ ಪತ್ರಿಕೆಗಳನ್ನು ವಿತರಿಸಿ ಸವಿವರ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ  ಡಾಟ್ ಕಾಮ್ ಕೆವಿಸಿಡಿಸಿಎಲ್.ಕಾಮ್ ನ್ನು ಸಂಪಕರ್ಿಸುವಂತೆ ಕೋರಿದರು.    

    ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾದ ಹೈದ್ರಾಬಾದ್ ಕನರ್ಾಟಕ ಪ್ರಧಾನ ಕಾರ್ಯದಶರ್ಿ ವೈದ್ಯಂ ಜಂಬುನಾಥ ಮಾತನಾಡಿ, ನಾನಾ ಯೋಜನೆಗಳಿಗೆ ಪ್ರತ್ಯೇಕ ಅಜರ್ಿಗಳನ್ನು ರೂಪಿಸಿದ್ದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.  

   ವಿಶ್ವಕರ್ಮ ಕುಶಲಕಮರ್ಿಗಳ ಸಂಘದ ಅಧ್ಯಕ್ಷ ಸಿದ್ದಪ್ಪ ಬಡಿಗೇರ ಮಾತನಾಡಿ, ಸಮುದಾಯದ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಜಾಗೃತರಾಗಬೇಕು ಎಂದು ಹೇಳಿದರು. 

   ಜಾಗೃತಿ ಸಭೆಯಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ನಾಗಪ್ಪ ಚಿಂತ್ರಪಳ್ಳಿ, ಸಿದ್ದರಾಮಾಚಾರಿ, ವೀರೇಶ್, ಎ.ಎಸ್.ಈರಣ್ಣ, ಕೆ.ಬಿ.ವೀರಾಚಾರಿ ಹಗರನೂರು, ಕಡ್ಲೆಬಾಳ್ ವೀರೇಶ್, ವಿಶ್ವಕರ್ಮ ಸ್ತ್ರೀಶಕ್ತಿ ಸಂಘದ ಮೊದಲ ಪ್ರತಿನಿಧಿ ನಿರ್ಮಲ, ಎರಡನೇ ಪ್ರತಿನಿಧಿ ರಾಜೇಶ್ವರಿ, ಶಾಂತಲಾ, ಸುವರ್ಣಮ್ಮ, ಕಾಳಮ್ಮ, ರತ್ನಮ,್ಮ ಲಕ್ಷ್ಮಿ ಸೇರಿ ತಾಲ್ಲೂಕಿನ ನಾನಾ ಗ್ರಾಮಗಳ ವಿಶ್ವಕರ್ಮ ಸಮುದಾಯದವರು ಪಾಲ್ಗೊಂಡಿದ್ದರು.