ಶಂಕರಲಿಂಗ ಜಾತ್ರೆಯ ನಿಮಿತ್ತ ಅಟೋರಿಕ್ಷಾ ಸ್ಪರ್ಧೆ
ಸಂಕೇಶ್ವರ 9: ಶಂಕರಲಿಂಗ ಜಾತ್ರೆಯ ನಿಮಿತ್ತ ಹಮ್ಮಿಕೊಳ್ಳಲಾದ ಭವ್ಯ ಅಟೋರಿಕ್ಷಾ ಸ್ಪರ್ಧೆ ದಿ: 6 ರಂದು ಜರುಗಿತು, ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಗಡಹಿಂಗ್ಲಜದ ತಾನಾಜಿ ದೇವರಾಡೆ ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ, ಇದರಂತೆಯೇ ಮಹಾರಾಷ್ಟ್ರದ ಕೊಲ್ಹಾಪೂರದ ಶಿವಶಂಭು ರಿಕ್ಷಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ, ರತ್ನಾಗಿರಿಯ ಸಮಿರ ಡೋಲೆ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ, ರಾಜಾ ಪಂಢರಿಬಾ ಇವರು ನಾಲ್ಕನೇಯ ಸ್ಥಾನವನ್ನು ಪಡೆದಿರುತ್ತಾರೆ, ಇದರಂತೆಯೇ ಕರ್ನಾಟಕದ ಅಟೋರಿಕ್ಷಾ ಸ್ಪರ್ಧೆಯಲ್ಲಿ ಚಿಕ್ಕೋಡಿಯ ರೋಲೆಕ್ಸ ಅಟೋರಿಕ್ಷಾ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದ್ದಾರೆ, ಗೋಲ್ಡ ಕ್ವೀನ ಎರಡನೇಯ ಸ್ಥಾನ ಪಡೆದಿದ್ದು, ಮೂರನೆಯ ಸ್ಥಾನವನ್ನು ಬೆಳಗಾವಿಯ ಟಾಯಗರ್ ಅಟೋರಿಕ್ಷಾ ಪಡೆದಿದ್ದು, ನಾಲ್ಕನೇಯ ಸ್ಥಾನವನ್ನು ಸಂತೋಷ ದೇವಕರ ಇವರು ಪಡೆದುಕೊಂಡಿದ್ದಾರೆ.
ಈ ಬಹುಮಾನ ಸಮಾರಂಭದಲ್ಲಿ ಸುಕ್ಷೇತ್ರ ಹುಕ್ಕೇರಿ ತಾಲೂಕಿನ ಕ್ಯಾರೆಗುಡ್ಡಮಠದ ಅವಜಿಕರ ಜ್ಞಾನಯೋಗಾಶ್ರಮದ ಅಭಿನವ ಮಂಜುನಾಥ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮಗಳು ಜರುಗಿದವು, ಕಾರ್ಯಕ್ರಮಕ್ಕೆ ಮಾಜಿ ಸಂಸದ ರಮೇಶ ವಿಶ್ವನಾಥ ಕತ್ತಿ ಉಪಸ್ಥಿತರಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರದ ಹಿರಿಯ ನಾಯಕ ಅಪ್ಪಾಸಾಹೇಬ ಶಿರಕೋಳಿ ಇವರು ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಪುರಸಭೆಯ ಉಪಾಧ್ಯಕ್ಷ ವಿವೇಕ್ ರಾಮಚಂದ್ರ ಕ್ವಳ್ಳಿ, ಕುಮಾರಿ. ಶೀತಲ ಮಠಪತಿ, ಕೆ.ಪಿ.ಸಿ. ಪ್ರಧಾನ ಕಾರ್ಯದರ್ಶಿ, ಮಾಜಿ ಪುರಸಭೆಯ ಅಧ್ಯಕ್ಷ ಬಂಡು ಹತನೂರೆ, ಹಿಡಕಲ್ ಡ್ಯಾಂ ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಎಮ್. ಪಾಟೀಲ, ರಾಜೇಂದ್ರ ಬೋರಗಾಂವಿ, ಶಂಕರರಾವ ಹೆಗಡೆ, ಸಂಜಯ ಶಿರಕೋಳಿ, ಪುರಸಭೆಯ ನಾಮನಿರ್ದೇಶಿತ ಸದಸ್ಯರ ಪುಟ್ಟು ನೇಸರಿ, ಶ್ರೀಕಾಂತ ಪರೀಟ, ಅಟೋರಿಕ್ಷಾ ಯುನಿಯನ್ ಅಧ್ಯಕ್ಷ ಶೇಕರ ಸೂರ್ಯವಂಶಿ, ಉಪಾಧ್ಯಕ್ಷರಾದ ಅಮೋಲ ಗೋಂಧಳಿ, ಈ ಸಮಾರಂಭವು ಛತ್ರಪತಿ ಶಿವಾಜಿ ವೃತ್ತ ಲಿಂಕ್ ರೋಡ ಸಂಕೇಶ್ವರ ಇಲ್ಲಿ ನಡೆಯಿತು.