ಸಂಬರಗಿ 15: ತಾಂವಶಿ ಗ್ರಾಮದ ಹೋರವಲಯದ ತೋಟದ ವಸತಿಯ ಯಲ್ಲಪ್ಪ ದುಂಡಪ್ಪಾ ಉಪ್ಪಾರ ಸೇರು ಒಟ್ಟು ಮೂರು ಕುಟುಂಬಗಳು ವಾಸವಾಗಿದ್ದವು. ಇವರ ಗುಡಿಸಿನಲ್ಲಿ ಗುರುವಾರ ಬೆಳಗಿನ ಜಾವ ಆಕಸ್ಮಿಕವಾಗಿ ಗ್ಯಾಸ ಸಿಲಿಂಡರ್ ಸ್ಪೋಟಗೊಂಡು ಲಕ್ಷಾಂತರ ರೂಪಾಯಿ ಹಾನಿಗೊಳಗಾದ ಕುಟುಂಬಕ್ಕೆ ಎಲ್ಲ ಗ್ರಾಮಸ್ಥರು ಕೂಡಿಕೊಂಡು ಸಹಾಯಧನವನ್ನು ಸಂಗ್ರಹಮಾಡಿ ಆ ಕುಟುಂಬಕ್ಕೆ ಸಾಂಸಾರಿಕ ಉಪಯೋಗ ವಸ್ತುಗಳು ಹಾಗೂ ವಾಸಿಸಲು ಬೇಕಾಗುವ ಸಲಕರಣೆಗಳನ್ನು ಸಹಾಯಹಸ್ತವಾಗಿ ನೀಡಿದರು.
ಗ್ರಾಮದ ಗಣ್ಯರಾದ ರಾಮಗೌಡಾ ಲಖಗೌಡರ, ಅಣ್ಣಪ್ಪಾ ಇಮಗೌಡರ್, ರಾಜು ಪರಸಗೌಡಾ ಪಾಟೀಲ, ಭೀಮಗೌಡ ಪೀರಗೌಡಾ ಪಾಟೀಲ, ಶಿವಯ್ಯ ಹೀರೆಮಠ, ಜಗದೀಶ ಲಖಗೌಡರ ಸೇರಿದಂತೆ ಅನೇಕರು ಸೇರಿ ಹಣವನ್ನು ಸಂಗ್ರಹ ಮಾಡಿ ಜೀವನೋಪಾಯದ ವಸ್ತುಗಳನ್ನು ಖರೀದಿಸಿ ನೊಂದ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಾಂವಶಿ ಗ್ರಾಮದ ಹೊರ ವಲಯದ ಯಲ್ಲಪ್ಪಾ ಉಪ್ಪಾರ ಇವರ ಗುಡಿಸಲು ಗ್ಯಾಸ ಸಿಲಿಂಡರ್ ಸ್ಪೋಟಗೊಡ ಕುಟುಂಬಕ್ಕೆ : ಶುಕ್ರವಾರ ಅಥಣಿ ಶುಗರ್ಸ್ ಕಾರ್ಯಕಾರಿ ನಿದರ್ೆಶಕ ಶ್ರಿನಿವಾಸ ಪಾಟೀಲ, ಅನಂತಪೂರ ಬ್ಲಾಕ್ ಅಧ್ಯಕ್ಷ ಮಹಾದೇವ ಕರೆ, ಕಾಂಗ್ರೆಸ್ ಮುಖಂಡರಾದ ಆರ್.ಎಮ್.ಪಾಟೀಲ ಭೇಟ್ಟಿ ನೀಡಿ ಸಾಂತ್ವನ ಹೇಳಿದರು.