ಅಥಣಿ 28: ಕನ್ನಡ ರಂಗಭೂಮಿಯ ಕುರಿತು ಗಂಭೀರವಾದ ಚಚರ್ೆ ಸಂವಾದಗಳನ್ನು ಹುಟ್ಟು ಹಾಕಲು ರಂಗ ಪ್ರಯೋಗಗಳ ಕುರಿತು ವಸ್ತುನಿಷ್ಠ ವಿಮಶರ್ೆಗಳನ್ನು ದಾಖಲಿಸಲು "ಕನರ್ಾಟಕ ನಾಟಕ ಪರಂಪರೆ" ಯಂತಹ ವಿಚಾರ ಸಂಕಿರಣಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹಿರಿಯ ರಂಗ ಕಲಾವಿದೆ ಪದ್ಮಶ್ರೀ ಬಿ. ಜಯಶ್ರೀ ಹೇಳಿದರು.
ಅವರು ಕನರ್ಾಟಕ ಸರಕಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಹಾಗೂ ಕೆ.ಎಲ್.ಇ. ಸಂಸ್ಥೆಯ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಅಥಣಿ ಇವುಗಳ ಸಹಯೋಗದಲ್ಲಿ "ಕನರ್ಾಟಕ ನಾಟಕ ಪರಂಪರೆ" ವಿಷಯ ಕುರಿತು ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಟಿ.ವ್ಹಿ. ಇಂಟರನೆಟ್ನಂತಹ ಆಧುನಿಕ ತಾಂತ್ರಿಕತೆಗಳು ಜನರ ಮೆದುಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿತ್ತುತ್ತಿವೆ. ನಮ್ಮ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಪಾಶ್ಚಾತ್ಯ ಸಂಸ್ಕೃತಿಯ ಸುನಾಮಿ ಹೊಡೆತಕ್ಕೆ ಸಿಕ್ಕು ಸಾವಕಾಶವಾಗಿ ವಿನಾಶದತ್ತ ಸಾಗುತ್ತಿವೆ. ರಂಗಭೂಮಿಯೂ ಇದಕ್ಕೆ ಹೊರತಾಗಿಲ್ಲವೆಂದು ಬಿ. ಜಯಶ್ರೀ ವಿಷಾದ ವ್ಯಕ್ತಪಡಿಸಿದ ಅವರು ಯುವಕರಲ್ಲಿ ಕಲೆ, ಕಲಾವಿದರ ಬಗೆಗೆ ಯುವಕರಿಗೆ ತಿಳಿಯುವಂತಹ ಪಠ್ಯಗಳನ್ನು ಅಳವಡಿಸಬೇಕು ಹಾಗೂ ಅವರಿಗೂ ಸಹ ನಾಟಕಗಳಲ್ಲಿ ಭಾಗವಹಿಸುವಂತೆ ಶಿಬಿರಗಳನ್ನು ಆಯೋಜಿಸಬೇಕು, ಇದರಿಂದ ರಂಗಭೂಮಿಗೆ ಮತ್ತೆ ಜೀವಂತಿಕೆ ಮರುಕಳಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿದರ್ೆಶಕರಾದ ಶ್ರೀಮತಿ ನಿರ್ಮಲಾ ಪಠಪತಿ ಮಾತನಾಡಿ ವಿಶ್ವವೇ ಹೆಮ್ಮೆ ಪಡುವಂಥ ನಮ್ಮ ಸಂಸ್ಕೃತಿ ಪರಂಪರೆಯಾಗಿದ್ದು ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಸಾಂಸ್ಕೃತಿಕ ಪರಿವಾರದ ಮೇಲೆ ಅವಲಂಬನೆಯಾಗಿದೆ. ವಿದ್ಯಾಥರ್ಿಗಳು ಅಂಕಗಳ ಬೆನ್ನು ಹತ್ತಿದೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಕ್ರೀಯವಾಗಿ ಮೈಗೂಡಿಸಿಕೊಂಡರೆ ಸೃಜನಶೀಲ ವ್ಯಕ್ತಿತ್ವ ನಿಮರ್ಾಣ ಮಾಡಿಕೊಳ್ಳಬಹುದೆಂದು ಹೇಳಿದರು.
ಕನರ್ಾಟಕ ನಾಟಕ ಪರಂಪರೆ ವಿಚಾರ ಸಂಕಿರಣದ ಕುರಿತು ದಿಕ್ಸೂಚಿ ಭಾಷಣ ಮಾಡಿದ ಬೆಳಗಾವಿ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಭಾರತೀಯ ರಂಗಭೂಮಿಯು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಸರ್ವಕಾಲಿಕವಾಗಿ ಮಾನವನ ಪರಸ್ಪರ ಮನೋವ್ಯಾಕುಲತೆಗಳನ್ನು ವಿನೋದ ಹಾಗೂ ರಂಜನೆಗಳ ಮೂಲಕ ಕಳೆಯುವಂಥ ಒಂದು ವಿಶೇಷ ಕಲೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಡಾ. ಮಲ್ಲಿಕಾಜರ್ುನ ಹಂಜಿ , ಪುರಾತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತೋರ್ವ ಉಪನಿದರ್ೆಶಕ(ಪ್ರ)ರಾದ ವಾಸುದೇವ್ ಎಸ್.ಕೆ. ಮಾತನಾಡಿದರು.
ಪ್ರಾರಂಭದಲ್ಲಿ ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆ ತರಲಾಯತು. ವಿದ್ಯಾಥರ್ಿಗಳು ನಾಡಗೀತೆ ಹಾಡಿದರು. ಪ್ರಾಚಾರ್ಯ ಡಾ.ಆರ್.ಎಫ್. ಇಂಚಲ ಸ್ವಾಗತಿಸಿದರು, ಡಾ. ಕೆ.ಆರ್. ಸಿದ್ದಗಂಗಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಡಾ. ಬಿ.ಎಸ್. ಗದ್ದಿ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಬಿ. ಜಯಶ್ರೀ, ನಿರ್ಮಲಾ ಮಠಪತಿ, ವಾಸುದೇವ್ ಎಸ್.ಕೆ, ಡಾ. ರಾಮಕೃಷ್ಣ ಮರಾಠೆ, ಡಾ. ಮಲ್ಲಿಕಾಜರ್ುನ ಹಂಜಿ ಅವರನ್ನು ಸನ್ಮಾನಿಸಲಾಯಿತು. ಆಶಾ ಪಾಟೀಲ ನಿರೂಪಿಸಿದರು, ಡಾ. ವಿಜಯ ಕಾಂಬಳೆ ವಂದಿಸಿದರು.
ಕಾರ್ಯಕ್ರಮದಲ್ಲಿ ಹೆಚ್.ಆರ್. ಚಮಕೇರಿ, ಶಂಭುಲಿಂಗ ಮಮದಾಪೂರ, ಪ್ರಕಾಶ ಪಾಟೀಲ, ವಿಜಯಕುಮಾರ ಬುಲರ್ಿ, ಅಲ್ಲಪಣ್ಣಾ ನಿಡೋಣಿ, ಬಿ.ಆರ್. ಕಂಟಿಕರ, ಕೆ.ಎಲ್. ಕುಂದರಗಿ, ಡಾ. ಬಾಳಾಸಾಬ ಲೋಕಾಪೂರ, ಡಾ.ಆರ್.ಎಸ್. ದೊಡ್ಡನಿಂಗಪ್ಪಗೋಳ ಸಿಬ್ಬಂದಿ, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.