ಅಥಣಿ 29: ವಚನ ಸಾಹಿತ್ಯ ಅವರವರ ಜೀವನ ಕ್ರಮ ಬದುಕಿನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಶರಣರ ಬದುಕನ್ನು ಕೇವಲ ಪವಾಡವಾಗಿ ಸ್ವೀಕರಿಸದೆ ಅವರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶರಣ ವಿಚಾರ ವಾಹಿನಿ, ಹಾರೂಗೇರಿ ಅಧ್ಯಕ್ಷ ಆಯ್.ಆರ್. ಮಠಪತಿ ಹೇಳಿದರು.
ಅವರು ಸ್ಥಳೀಯ ಕೆ.ಎ. ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೆ.ಎ. ಲೋಕಾಪೂರ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಲಿಂ ಶರಣೆ ನೀಲಮ್ಮ ಮತ್ತು ಶರಣ ಮಲಕಪ್ಪ ಅಲಿಬಾದಿ, ಲಿಂ ಶರಣೆ ಹೊನ್ನಮ್ಮ ಬಸಪ್ಪ ಉತ್ನಾಳ, ಲಿಂ ಶರಣ ಚನ್ನಯ್ಯ ಬಸವಂತಯ್ಯ ಹಿರೇಮಠ ಹಾಗೂ ಲಿಂ ಶರಣೆ ಗಂಗಮ್ಮ ಹಟಪದ ಹಲಗಲಿ ಅವರ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶರಣರ ಸಾಹಿತ್ಯ ಮಾನವನಲ್ಲಿರುವ ಅಸುರೀಗುಣಗಳನ್ನು ದೈವೀಗುಣಗಳನ್ನಾಗಿ ಪರಿವತರ್ಿಸುವ ಶಕ್ತಿ ಹೊಂದಿವೆ. ಮಾನವನನ್ನು ದೈವತ್ವದೆಡೆಗೆ ಕರೆದುಕೊಂಡು ಹೋಗುವಂತಹ ಸುಲಭದ ಸಾದನಗಳೇ ಶರಣರ ವಚನಗಳು, ಅವುಗಳನ್ನು ದಿನನಿತ್ಯದ ಜೀವನಕ್ರಮದಲ್ಲಿ ಅಳವಡಿಸಿಕೊಂಡು ನಿಜವಾದ ಜ್ಞಾನ ಪ್ರಾಪ್ತಿಯಾಘುವಂತೆ ಮಾಡಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತ ಬೆಳಗಾವಿ ಜಿಲ್ಲಾಧ್ಯಕ್ಷ ಡಾ.ವಿ.ಎಸ್. ಮಾಳಿ ಶರಣರ ತತ್ವಗಳನ್ನು ನೆನಪಿಸುವ ಕಾರ್ಯಕ್ರಮ ಇದಾಗಿದ್ದು, ಇದರ ಮೂಲಕ ವಚನ ಸಾಹಿತ್ಯವನ್ನು ಮತ್ತೆ ಮತ್ತೆ ಓದಿ ಅಳವಡಿಸಿಕೊಂಡು ಜ್ಞಾನದ ಬೆಳಕನ್ನು ಪಡೆದು ಹೊಸ ಚಿಂತನೆಗಳಿಗೆ ವಿದ್ಯಾಥರ್ಿಗಳಿಗೆ ದಾರಿಯಾಗುವಂತಾಗಬೇಕು ಎಂದರು.
ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್.ಪಾಟೀಲ, ಡಾ.ರಾಮ.ಕುಲಕಣರ್ಿ ಮಾತನಾಡಿದರು. ಸಾಹಿತಿಗಳಾದ ಎ.ಎಮ್. ಅಲಿಬಾದಿ, ಅಥಣಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಅನೀಲ ಸುಣಧೋಳಿ, ಪ್ರಾಚಾರ್ಯ ಆರ್.ಎಮ್. ದೇವರಡ್ಡಿ .ಕೇಂದ್ರ ಸಾಹಿತ್ಯ ಅಕಾಡೇಮಿ ಸದಸ್ಯ ಬಾಳಾಸಾಹೇಬ ಲೋಕಾಪೂರ, ಎಸ್. ಕೆ. ಹೊಳೆಪ್ಪನವರ, ಮುಂತಾದವರು ಉಪಸ್ಥಿತರಿದ್ದರು.
ಎನ್.ಬಿ.ಝರೆ ನಿರೂಪಿಸಿದರು, ವಿ. ಪಿ. ಜಾಲಿಹಾಳ ವಂದಿಸಿದರು.