ಲೋಕದರ್ಶನ ವರದಿ
ಅಥಣಿ 17: ದಿ.21 ರಂದು ಆಚರಿಸಲ್ಪಡುವ ವಿಶ್ವ ಯೋಗದಿನಾಚರಣೆಯನ್ನು ಶಿಬಿರಾಥರ್ಿಗಳು ಶಿಕ್ಷರೂ, ಕೂಡಿ ಯಶಸ್ವಿಗೋಳಿಸಲು ಜೆ ಇ ಸಂಸ್ಥೆಯ ಕಾಯರ್ಾಧ್ಯಕ್ಷರು ಹಾಗೂ ಯೋಗ ಪಟುಗಳಾದ ಅರವಿಂದರಾವ ದೇಶಪಾಂಡೆಯವರು ಕರೆಕೊಟ್ಟರು.
ಸ್ಥಳಿಯ ಜೆ ಇ ಸಂಸ್ಥೆಯ ಸಭಾಗಂಣದಲ್ಲಿ ಆಯೋಜಿಸಲಾಗಿದ್ದ ಯೋಗಾಭಿಮಾನಿಗಳ ಮತ್ತು ಯೋಗ ಶಿಕ್ಷರ ಸಭೇಯಲ್ಲಿ ಮಾತನಾಡುತ್ತ ಯೋಗವು ಎಲ್ಲ ವರ್ಗ ವಯಸ್ಸಿನ ಜನರಿಗೆ ದಿವ್ಯಔಷದ, ಇದರ ಬಗ್ಗೆ ಇಡೀ ವಿಶ್ವವೇ ತೆಲೆಬಾಗಿದ್ದು ಇದನ್ನು ಕಲಿಯಲು ಜನ ಹಾತೋರೆಯುತ್ತಿದೆ. ಈಗ ಜೂನ 21 ರಂದು, ಭೋಜರಾಜ ಕ್ರೀಡಾಂಗಣದಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆ ನಿಮಿತ್ತ ಪೂರ್ವಭಾವಿಯಾಗಿ ಏರ್ಪಡಿಸಿರುವ ಯೋಗ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಗೊಳ್ಳುವಂತೆ ಯೋಗ ಶಿಕ್ಷಕರು ಕಾರ್ಯಕರ್ತರು ಪ್ರಯತ್ನಿಸಬೇಕೆಂದರು.
ಪತಂಜಲಿ ಪೀಠದ ಹಿರಿಯ ಯೋಗ ಗುರುಗಳಾದ ಎ.ಬಿ ಪಾಟಿಲ ಮತ್ತು ಪತಂಜಲಿ ಪೀಠದ ಆಜೀವ ಸದಸ್ಯರಾದ ಶಿವಪುತ್ರ ಯಾದವಾಡರು ಯೋಗದ ಬಗ್ಗೆ ಮತ್ತು ಶಿಬಿರ ಯಶಸ್ವಿಗೋಳ್ಳಲು ಮಾತನಾಡಿದರು. ಯೋಗ ಶಿಕ್ಷಕರಾದ ಎಸ್ ಕೆ ಹೋಳೆಪ್ಪನವರ, ಎಂ ಡಿ ಬಸಗೌಡರ. ಡಾ. ದೊಡ್ಡಲಿಂಗಪ್ಪಗೋಳ, ಎಂ ಎ ಕೋಳಲಿ, ಡಾ.ವಿ ಎಂ, ಚಿಂಚೋಳಿಮಠ, ಶ್ರೀಶೈಲ ಪಾಟೀಲ, ಮತ್ತು ವಿವಿಧ ಶಾಲಾ ಹಾಯಸ್ಕೂಲ ಕಾಲೇಜುಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.