ಮುಂಬೈ 20: ಭಾರತ ಕಬಡ್ಡಿ ತಂಡ ತೀರಾ ತೀಕ್ಷ್ಣವಾಗಿರುವುದು ಮಾತ್ರವಲ್ಲದೇ ಯಾವ ಸವಾಲು ಬೇಕಾದರೂ ಎದುರಿಸಲೂ ಸದಾ ಸಿದ್ಧವಾಗಿದೆ ಮತ್ತು ಮುಂದಿನ ಏಷ್ಯನ್ಗೇಮ್ಸ್ನಲ್ಲೂ ಭಾರತವೇ ಚಿನ್ನ ಗೆಲ್ಲಲಿದೆ ಎಂದು ಸ್ಟಾರ್ ಆಟಗಾರ ಮನು ಗೋಯತ್ ಹೇಳಿದ್ದಾರೆ.
ಭಾರತವು ಆಗಸ್ಟ್ 8 ರಿಂದ ಸಪ್ಟೆಂಬರ್ ಎರಡರವರೆಗೆ ಇಂಡೋನೇಷ್ಯಾ ಆಯೋಜಿಸಲಿರುವ ಕಾಂಟಿನೆಂಟಲ್ ಕ್ವಾಡ್ರೆನಿಯಲ್ ಶೋ-ಪಿಯೆಟ್ಗೆ ಹೋಗುತ್ತಿದ್ದು ಇದರಲ್ಲಿ ತಂಡ ಎಂಟನೇ ಚಿನ್ನದ ಪದಕವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತ ತಂಡ ಈ ಟೂನರ್ಿಯಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಗೋಯಲ್ ಪ್ರತಿ ಬಾರಿಯ ಕಬಡ್ಡಿ ಟೂನರ್ಿಗಳಲ್ಲೂ ಚಿನ್ನ ಗೆಲ್ಲುವ ನಮ್ಮ ಸಂಪ್ರದಾಯವನ್ನೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ನಮಗಿದೆ. ಪ್ರಥಮ ಸ್ಥಾನ ಬಿಟ್ಟು ಬೇರೆಯದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.