ಶೇಡಬಾಳ 29: ಇತ್ತೀಚಿಗೆ ಮುಂಬೈಯಲ್ಲಿ ನಡೆದ 4 ಏಷಿಯನ್ ಕಪ್ ಒಪನ್ ಕರಾಟೆ ಸ್ಪಧರ್ೆಯಲ್ಲಿ (20 ರಿಂದ 40 ಕೆ.ಜಿ.) ವಿಭಾಗದಲ್ಲಿ ಕಾಗವಾಡ ಗ್ರಾಮದ ಎಸ್.ಎಮ್.ಎ. ಟ್ರಸ್ಟ್ನ ಶಿವಾನಂದ ಪ್ರಾಥಮಿಕ ಶಾಲೆಯ 2 ನೇ ತರಗತಿಯ ವಿದ್ಯಾಥರ್ಿನಿ ವಿಸ್ಮಯ ವಿಶಾಲ ಮಾಳವದಕರ ಕುಮತಿ ವಿಭಾಗದಲ್ಲಿ ಬೆಳ್ಳಿ ಮತ್ತು ಕಾಠಾ ವಿಭಾಗದಲ್ಲಿ ಕಂಚಿನ ಪದಕ ಹಾಗೂ 3 ತರಗತಿ ವಿದ್ಯಾಥರ್ಿನಿ ಆಯುಷಿ ಶಂಕರ ನಾಯಕ ಇವರು ಕುಮತಿ ವಿಭಾಗದಲ್ಲಿ ಸುವರ್ಣ ಪದಕ ಮತ್ತು ಕಾಠಾ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾಳೆ.
ಎಸ್.ಎಮ್.ಎ. ಟ್ರಸ್ಟ್ನ ಏಕನ್ಯಾಸಧಾರಿ ಯತೀಶ್ವರಾನಂದ ಸ್ವಾಮಿಜಿ, ಆಡಳಿತ ಮಂಡಳಿ ಸದಸ್ಯರು, ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ, ಶಿಕ್ಷಕಿಯರು ವಿದ್ಯಾಥರ್ಿಗಳ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.