ಯಡೂರ ಗ್ರಾಮದಲ್ಲಿ ವಿಶಾಳಿ ಜಾತ್ರಾ ಮಹೋತ್ಸವದ ಅಂಗವಾಗಿ ಅನೀಲ ಕುಂಬ್ಳೆರಿಗೆ ವಿಶ್ವ ಚೇತನ ಪ್ರಶಸ್ತಿ

ಲೋಕದರ್ಶನ ವರದಿ

ಮಾಂಜರಿ 05:  ನಾನು ಭಾರತದ ತಂಡದಲ್ಲಿ 18 ವರ್ಷ ಆಟವಾಡಿದ್ದು 619 ವಿಕೆಟ್ ಪಡೆಯಲು 42000 ಬಾಲ್ ಮಾಡಿದ್ದೇನೆಂದು ಹೇಳಿದರು. ಯುವಕರು ಮೊಬೈಲ ಹಾವಳಿಯಿಂದಾಗಿ ಆಟಗಳನ್ನು ಆಡುವುದನ್ನೆ ಬಿಟ್ಟಿದ್ದಾರೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ತಂಡದಲ್ಲಿ ಬಹಳಷ್ಟು ಆಟಗಾರರು ಗ್ರಾಮೀಣ ಪ್ರದೇಶದವರಾಗಿದ್ದಾರೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಟಗಾರರ ಸಂಖ್ಯೆ ಹೆಚ್ಚಿದ್ದು ಪ್ರೋತ್ಸಾಹನ ನೀಡುವ ಅಗ್ಯತವಿದೆ ಯುವಕರು ಸತತ ಪರಿಶ್ರಮ ಪಡಬೇಕು ಎದೆಗುಂದದೆ ಮುನ್ನುಗ್ಗಬೇಕು ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಡಾ. ಪ್ರಭಾಕರ ಕೋರೆ ಅವರ ಮುಂದಾಳತ್ವದ ಕೆಎಲ್ಇ ಸಂಸ್ಥೆಯು ಆರೋಗ್ಯ ಮತ್ತು ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಪ್ರಖ್ಯಾತ ಕ್ರಿಕೆಟ್ ಆಟಗಾರ ಅನಿಲ ಕುಂಬ್ಳೆ ಹೇಳಿದರು.

ಮಕ್ಕಳು ಓದಿನ ಜೊತೆಗೆ ಆಟವು ಮುಖ್ಯ ಪ್ರತಿಯೊಬ್ಬರಿಗೆ ದೇವರ ಆಶೀವರ್ಾದದ ಜೊತೆಗೆ ತಂದೆತಾಯಿ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು. ಯುವಕರು ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಪರಿಶ್ರಮವಿಲ್ಲದೆ ಏನೂ ಸಿಗುವುದಿಲ್ಲ ಅದಕ್ಕಾಗಿ ನಿರಂತರ ಪರಿಶ್ರಮ ಪಡಬೇಕೆಂದು ಹೇಳಿದರು.

ಈ ಸಮಾರಂಭದ ದಿವ್ಯಸಾನಿಧ್ಯವನ್ನು ಡಾ.ಚನ್ನಸಿದ್ದರಾಮ ಫಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದರು ನೇತತ್ವವನ್ನು ಕಾಶಿಯ ಜಗ್ಗುರುಗಳಾದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ,  ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು, ಚಿಕ್ಕೋಡಿ  ಸಂಪಾದನಾ ಮಹಾಸ್ವಾಮೀಜಿಗಳು, ಬೆಂಗಳೂರಿನ ಮಹಂತಲಿಂಗ ಮಹಾಸ್ವಾಮಿಜಿಗಳು ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ವಿಧಾನ ಸಭೆಯ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಡಾ.ವೆಂಕಟರಮಣ ಹೆಗಡೆ ನಾಟಿ ಔಷದದ ಕುರಿತು ಹೇಳಿದರು. ಈ ಕಾರ್ಯಕ್ರಮಕ್ಕೆ ಶ್ರಿಕಾಂತ ಉಮರಾಣೆ, ಭಿಮಗೌಡಾ ಪಾಟೀಲ, ಭೀಮಾಂಬಿಕಾ ನಶಿಬಿ, ಕುಮಾರ ಜ್ಞಾನೇಶ, ಅಜಿತರಾವ ದೇಸಾಯಿ, ಮಹೇಶ ಭಾತೆ, ಬಸವಪ್ರಸಾದ ಜೊಲ್ಲೆ, ಪ್ರೀತಿ ದೋಡವಾಡ ಹಾಜರಿದ್ದರು ಸ್ವಾಗತ ಸೂಗುರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಮಾಡಿ ನಿರೂಪಣೆ ಸಿ.ಜಿಮಠಪತಿ ಮಾಡಿದರು.

***