50ನೇ ಜನ್ಮ ವರ್ಷಾಚರಣೆ ಅಂಗವಾಗಿ ವರ್ಷವೀಡೀ ಆಯೋಜಿಸಿರುವ ಸಮಾಜೋಪಯೋಗಿ ಕಾರ್ಯಕ್ರಮಗಳಡಿ ಜ.11 ರಂದು ಇಲ್ಲಿನ ಗುರುಭವನದಲ್ಲಿ ಬೃಹತ್ ಉದ್ಯೋಗ ಮೇಳ
ಹಾನಗಲ್ 03 : ಶಾಸಕ ಶ್ರೀನಿವಾಸ ಮಾನೆ ಅವರ 50ನೇ ಜನ್ಮ ವರ್ಷಾಚರಣೆ ಅಂಗವಾಗಿ ವರ್ಷವೀಡೀ ಆಯೋಜಿಸಿರುವ ಸಮಾಜೋಪಯೋಗಿ ಕಾರ್ಯಕ್ರಮಗಳಡಿ ಜ.11 ರಂದು ಇಲ್ಲಿನ ಗುರುಭವನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಲೊಯಲಾ ವಿಕಾಸ ಕೇಂದ್ರದ ನಿರ್ದೇಶಕ ಫಾದರ್ ಜೆಲಾರ್ಡ, ರೋಶನಿ ಟ್ರಸ್ಟ್ ಸಿಸ್ಟರ್ ಅನಿತಾ ಡಿಸೋಜಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಗ್ಗೆ 8.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆಯುವ ಮೇಳದಲ್ಲಿ ಅಮೆಜಾನ್, ಎಲ್ ಆಂಡ್ ಟಿ ಫೈನಾನ್ಸಿಯಲ್ ಸರ್ವಿಸಸ್, ಮುತ್ತೂಟ್ ಫೈನಾನ್ಸ್, ಫ್ಲಿಪ್‌ಕಾರ್ಟ್, ಪಿವಿಆರ್ ಸಿನೆಮಾಸ್, ಟಿಬಿಇಎ, ಡಿಮಾರ್ಟ್, ಈಜಿ, ಎಕೆಇ ಇನ್ಫ್ರಾಸ್ಟ್ರೆಕ್ಷರಸ್ಸ್, ವರುಣ ಮೋಟರ್ಸ, ಇಂಡಸ್‌ಲ್ಯಾಂಡ್ ಬ್ಯಾಂಕ್, ಇಎಸ್‌ಎಸ್‌ವಿಇಇ, ಬಿಗ್ ಮಾರ್ಕೇಟ್, ಮೆಡ್‌ಪ್ಲಸ್, ಸ್ಟಾರ್, ಪೇ ಎಟಿಎಂ, ಅಪೋಲೊ, ಸನ್‌ಬಿಜ್, ಟೊಯೊಟಾ ಡಿಎಂಸಿಎಫ್‌ಎಸ್, ಸನ್ ಬ್ರೈಟ್, ಹೊಂಡಾ, ಟೊಯೊಟಾ, ಜಸ್ಟ್ ಡಯಲ್ ಸೇರಿದಂತೆ ದೇಶದ ಪ್ರತಿಷ್ಠಿತ ಸುಮಾರು 25 ಕ್ಕೂ ಹೆಚ್ಚು ಕಾರ್ೋರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು 1500 ಕ್ಕೂ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಲಿವೆ ಎಂದು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜನೀಯರಿಂಗ್, ಬಿಇ, ಬಿಎ, ಬಿಕಾಂ, ಬಿಸಿಎ, ಡಿ ಫಾರ್ಮ, ಬಿ ಫಾರ್ಮ, ನಸಿಂರ್ಗ್, ಎಂಎ, ಎಂಕಾಂ, ಎಂಬಿಎ, ಎಂಎಸ್ಸಿ ಪೂರ್ಣಗೊಳಿಸಿರುವ ಯುವಕ, ಯುವತಿಯರು ಮೇಳದಲ್ಲಿ ಭಾಗವಹಿಸಿ ಉದ್ಯೋಗಾವಕಾಶ ಪಡೆದುಕೊಳ್ಳಬಹುದಾಗಿದೆ. ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಕರಪತ್ರಗಳಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅದರಲ್ಲಿನ ಗೂಗಲ್ ಫಾರ್ಮ್ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ನೇರವಾಗಿ ಮೇಳಕ್ಕೆ ಆಗಮಿಸಿದವರೂ ಸಹ ನೋಂದಣಿ ಮಾಡಿಕೊಳ್ಳಬಹುದು. ಮೇಳಕ್ಕೆ ಆಗಮಿಸುವ ಸಂದರ್ಭದಲ್ಲಿ ಇತ್ತೀಚಿನ ಭಾವಚಿತ್ರ, ಬಯೊಡೆಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರದ ಐದು ನಕಲು ಪ್ರತಿ ತರಬೇಕು. ಹೆಚ್ಚಿನ ಮಾಹಿತಿಗೆ ಮೊ. 9632471821, 9945368152 ಇಲ್ಲವೇ 8120781217 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಲೋಯಲ ವಿಕಾಸ ಕೇಂದ್ರ, ರೋಶನಿ ಟ್ರಸ್ಟ್, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಟೀಂ ಆಪತ್ಬಾಂಧವ, ಉದ್ಯೋಗ ಸಮೃದ್ಧಿ ಕೇಂದ್ರ ಸೇರಿದಂತೆ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿರುವ ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕೋರಿದ್ದಾರೆ.