ಬಾಗಲಕೋಟೆ: ಜಿಲ್ಲೆಯ ಇಲಕಲ್ಲ, ಅಮೀನಗಡ ಮತ್ತು ಬಾಗಲಕೋಟೆ ನಗರ ಸೇರಿದಂತೆ ವಿವಿದೆಡೆ ಮನೆ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಓರ್ವ ಕಳ್ಳನನ್ನು ಜಿಲ್ಲಾ ಪೊಲೀಸ್ ತಂಡ ಬಂಧಿಸಿ ಪ್ರಕರಣ ದಾಖಲಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಅವರು ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆ ಮೀರಜ ತಾಲೂಕಿನ ಬೆಳವಂಕಿ ಗ್ರಾಮದ ಲೇಮಲ್ಕಾ @ ಶಿನು ಬಂದಿತ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಇಲಕಲ್ಲ ನಗರದ ಮಹಾಂತೇಶ ಯಲಗಾರ, ಹುಸೇಬಸಾಬ ಸಾಲಿಮನಿ ಎಂಬುವವರ ಮನೆಗಳಲ್ಲಿ 40 ಗ್ರಾಂ ಬಂಗಾರ, 27 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು 1,50,800 ರೂ.ಗಳ ಬೆಲೆಬಾಳುವ ವಸ್ತುಗಳು ಕಳುವಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಕಳೆದ ಹಲವು ದಿನಗಳಿಂದ ಜಿಲ್ಲೆಯ ಇಲಕಲ್ಲ, ಅಮೀನಗಡ ಹಾಗೂ ಬಾಗಲಕೋಟ ಸೇರಿದಂತೆ ಅನೇಕ ಭಾಗಗಳಲ್ಲಿ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು, ಅನೇಕ ಮನೆಗಳ ಕಳ್ಳತನದ ವರದಿಗಳು ಬಂದಿದ್ದು, ಕೂಡಲೇ ಜಾಗೃತರಾದ ಪೊಲೀಸ್ ಇಲಾಖೆ ಬಾಗಲಕೋಟ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್.ಬಿ.ಗಿರೀಶ, ಹಾಗೂ ಹುನಗುಂದ ಸಿಪಿಐ ಸಂಜೀವ ಬಳಿಗಾರ ಅವರ ತಂಡವು ಮಹಾರಾಷ್ಟ್ರ ರಾಜ್ಯದಲ್ಲಿ ಯಶಸ್ವಿ ಕಾಯರ್ಾಚರಣೆ ನಡೆಸಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಯು ಕನರ್ಾಟಕ ಹಾಗೂ ಹೊರ ರಾಜ್ಯಗಳಲ್ಲಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇಲಕಲ್ಲ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಎಸ್.ಎಮ್.ಶಿರಗುಪ್ಪಿ, ಸಿಬ್ಬಂದಿಗಳಾದ ಆನಂದ ಗೋಲಪ್ಪನವರ, ರಂಗನಾಥ ಲಮಾಣಿ, ಬಿ.ಆರ್.ವಾಲಿಕಾರ, ಎ.ಎಚ್.ಸುತಗುಂಡಾರ, ಆರ್.ಬಿ.ಕಂಬಳಿ, ಡಿ.ಆರ್.ಚೌದರಿ, ಪಿ.ಎಮ್.ಅಂಬಿಗೇರ, ನಾಗೇಶ ರಾಠೋಡ, ಶರಣಪ್ಪ ಹುಲ್ಯಾಳ, ಸಿ.ಬಿ.ಜವಳಗೇರಿ, ನಾಗರಾಜ ಅಂಕೋಲೆ ಅವರ ಕಾರ್ಯವನ್ನು ಕಾರ್ಯವನ್ನು ಪ್ರಸಂಶಿಸಿದರು.