ಹಲವು ಕಾಮಗಾರಿಗಳಿಗೆ ಅನುಮೋದನೆ

Approval for many works

ಹಲವು ಕಾಮಗಾರಿಗಳಿಗೆ ಅನುಮೋದನೆ

ಶಿಗ್ಗಾವಿ 16: ಪಟ್ಟಣದ ಪುರಸಭೆಯಲ್ಲಿ ತುರ್ತು ಸಭೆಯ ಮೂಲಕ ಹಲವಾರು ಬಾಕಿ ಉಳಿದಿರುವ ಹಾಗೂ ಬಿಬಿಎಂಪಿ ಅನುದಾನದಲ್ಲಿ ನೀರಿನ ಕಾಮಗಾರಿಗಳಿಗೆ ಅನುಮೋದನೆ.   ಪುರಸಭೆಯ ಇಂಜಿನಿಯರ್ ರಾಜು ಮಿರ್ಜಿ ಅವರು ಮಾಹಿತಿ ಪ್ರಕಾರ 2022-23, 23-24, 24-25 ರಲ್ಲಿ ಅನೇಕ ಸಣ್ಣಪುಟ್ಟ ಕಾಮಗಾರಿಗಳಿಗೆ ಕರೆದಿರುವು ಟೆಂಡರ್ ದರಗಳನ್ನು ಪರೀಶೀಲನೆ ಮಾಡಲಾಗಿ ತಾಂತ್ರಿಕ ಅರ್ಹತೆ ಮತ್ತು ಕಡಿಮೆ ಮೊತ್ತ ಟೆಂಡರ್ ಹಾಕಿದವರಿಗೆ ಎಲ್ಲಾ ನಿಯಮಗಳನ್ನು ಒಳಪಟ್ಟು ಪರೀಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದಾಗ ಕೆಲವು ಆಡಳಿತ ಪಕ್ಷದ ಸದಸ್ಯರೇ ಮಾಹಿತಿಯನ್ನು ಸಂಪೂರ್ಣವಾಗಿ ಕೊಡಬೇಕು ಅಂತ ಹೇಳಿದಾಗ ಕೆಲವರು, ಅನೇಕ ಕೆಲಸಗಳು ಒಬ್ಬರು ಮತ್ತು ಇಬ್ಬರಿಗೂ ಮಾತ್ರ ಲಭಿಸುತ್ತಿದ್ದು ಎಲ್ಲರಿಗೆ ಅನುಕೂಲವಾಗುವಂತೆ ಕೆಲಸಗಳನ್ನು ವಿತರಿಸಬೇಕೆಂದು ಹೇಳಿದರು.   ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ ಮಣ್ಣಣ್ಣವರ ಎಲ್ಲಾ ಟೆಂಡರಗಳ ತಾಂತ್ರಿಕ ಹಾಗೂ ಆರ್ಥಿಕ ಮಾಹಿತಿಯೊಂದಿಗೆ ಗುತ್ತೇದಾರರ ಮಾಹಿತಿ ಕಾಮಗಾರಿಗಳ ಹೆಸರು ಮತ್ತು ಸ್ಥಳಗಳನ್ನು ಪಟ್ಟಿ ಮಾಡಿ ಎಲ್ಲ ಸದಸ್ಯರಿಗೂ ಒದಗಿಸಬೇಕು ನಾಮ ನಿರ್ದೇಶಕ ಸದಸ್ಯರಿಗೂ ಕೊಡಬೇಕು ಈ ಮಾಹಿತಿ ಮಾನ್ಯ ಶಾಸಕರ ಗಮನಕ್ಕೂ ತರಬೇಕೆಂದು ಲಿಖಿತವಾಗಿ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರಿಗೆ ಪತ್ರ ನೀಡಿ ಮನವಿ ಮಾಡಿಕೊಂಡಿದ್ದಾರೆ.     ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ಅದ್ಯಕ್ಷತೆ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಉಪಾಧ್ಯಕ್ಷೆ ಶಾಂತಾಭಾಯಿ ಸುಭೇದಾರ, ಸ್ಥಾಯಿ ಸಮಿತಿ ಅದ್ಯಕ್ಷೆ ಅನುರಾಧಾ ಮಾಳವಾದೆ ಸೇರಿದಂತೆ ಸದಸ್ಯರು, ನಾಮ ನಿರ್ದೇಶಕ ಸದಸ್ಯರು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.