ಕೊಪ್ಪಳ 29: ಕೊಪ್ಪಳ ಅಲ್ಪಸಂಖ್ಯಾತರ ಸಮುದಾಯದವರಿಗೆ ಇರುವ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸುವಂತೆ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅನುಷ್ಠಾನ ಜಿಲ್ಲಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕೊಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಸಕ್ತ ಸಾಲಿನ 2ನೇ ತ್ರೈಮಾಸಿಕ ಪ್ರಗತಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಮುಖಾಂತರ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲೆಗೆ ಒದಗಿಸಲಾದ ಅನುದಾನದಲ್ಲಿ ಶೇಕಡಾ 15% ರಷ್ಟನ್ನು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಅನುದಾನದಲ್ಲಿ ವಿವಿಧ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಬೇಕು. ಕಳೆದ ಮತ್ತು ಈ ವರ್ಷದದಲ್ಲಿ ತಮ್ಮ ಇಲಾಖೆಗಳಿಂದ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಸೌಲಭ್ಯಗಳ ವಿವರದ ಹಾಗೂ ಅರ್ಹ ಫಲಾನುಭವಿಗಳ ಆಯ್ಕೆ ಪಟ್ಟಿಯ ವರದಿಯನ್ನು ಸಲ್ಲಿಸಬೇಕು. ಇಲಾಖೆಯಿಂದ ಅಲ್ಪಸಂಖ್ಯಾತರಿಗೆ ಒದಗಿಸುವ ಯೋಜನೆ/ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ನೀಡಬೇಕು. ಅಲ್ಲದೇ ಸೌಲಭ್ಯಕ್ಕಾಗಿ ಅಜರ್ಿ ಸಲ್ಲಿಸದೇ ಇದ್ದಲ್ಲಿ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಬೇಕು. ಕಾರ್ಯಕ್ರಮದಡಿಯಲ್ಲಿ ದ್ವಿತೀಯ ತ್ರೈಮಾಸಿಕದಲ್ಲಿ ಫಲಾನುಭವಿಗಳಿಗೆ ನೀಡಿದ ಸೌಲಭ್ಯಗಳ ಕುರಿತು ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಾತನಾಡಿ, ಸ್ವಯಂ ಉದೋಗ್ಯ ಯೋಜನೆ ಹಾಗೂ ಇತರೆ ಯೋಜನೆಗಳಲ್ಲಿ ಸ್ವೀಕರಿಸಿದ ಅಜರ್ಿಗಳು ಆಯ್ಕೆ ಸಮಿತಿ ಮೂಲಕ ಆಯ್ಕೆ ಪ್ರಕ್ರೀಯೆ ಪ್ರಗತಿಯಲ್ಲಿದೆ ಎಂದರು. ಡಿ.ಯು.ಡಿ.ಸಿ ಯೋಜನಾ ನಿದರ್ೆಶಕರು ಮಾತನಾಡಿ, 2ನೇ ತ್ರೈಮಾಸಿಕ ಅಂತ್ಯಕ್ಕೆ ದೀನ್ದಯಾಳ ಅಂತ್ಯೋದಯ ಯೋಜನೆ ಅಭಿಯಾನದಡಿ ಜಿಲ್ಲಾ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮ ಹಾಗೂ ಕೌಶಲ್ಯ ಅಭಿವೃಧ್ಧಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪ ಘಟಕಗಳಲ್ಲಿ ಸ್ವೀಕೃತಿಯಾದ ಅಜರ್ಿಗಳನ್ನು ಸಾಲ ಮಂಜೂರಾತಿಗಾಗಿ ಬ್ಯಾಂಕಗಳಿಗೆ ಸಲ್ಲಿಸಲಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕರು ಮಾತನಾಡಿ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಪ್ರತಿ ತಿಂಗಳು ಮಗುವಿನ ತೂಕ ಪರೀಕ್ಷಿಸಿ ಅಪೌಷ್ಠಿಕತೆ ಪ್ರಮಾಣವನ್ನು ಕಡಿಮೆ ಮಾಡಲು ವಾರದಲ್ಲಿ 5 ದಿನ ಹಾಲು ಮತ್ತು 5 ದಿನ ಕೋಳಿ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ ಅಲ್ಪಸಂಖ್ಯಾತರು ಸೇರಿ ಎಲ್ಲಾ ಮಕ್ಕಳು ಒಳಗೊಂಡಿದ್ದಾರೆ ಎಂದರು. ಸಮಿತಿಯ ನಾಮ ನಿದರ್ೇಶಿತ ಸದಸ್ಯರಾದ ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ ಇನ್ನೂ 4 ಹೊಸ ಅಂಗನವಾಡಿ ಕೇಂದ್ರಗಳನ್ನು ತರೆಯಲು ಅವಕಾಶವಿದ್ದು, ಶೀಘ್ರದಲ್ಲಿಯೇ ಅಂಗನವಾಡಿ ಕೇಂದ್ರಗಳನ್ನು ನೀಮರ್ಿಸಬೇಕೆ ಎಂದರು. ಪಶು ಪಾಲನ ಮತ್ತು ಪಶು ವೈದೈಕೀಯ ಸೇವಾ ಇಲಾಖೆ ಉಪನಿದರ್ೆಶಕರು ಮಾತನಾಡಿ, ಅರ್ಹ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಗಿರಿರಾಜ ಕೋಳಿಗಳನ್ನು ಸಾಕಾಣಿಕೆ ಮಾಡಲು ಒದಗಿಸುವ ಪ್ರಕ್ರೀಯೆ ಹಾಗೂ ಪಶುಭಾಗ್ಯ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರೀಯೆ ಪ್ರಗತಿಯಲ್ಲಿದೆ ಎಂದರು. ಜೆಸ್ಕಾಂ ಕಾರ್ಯನಿವರ್ಾಹಕ ಅಭಿಯಂತರರು ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ 10 ಫಲಾನುಭವಿಗಳಿಗೆ ಬೋರ್ವೆಲ್ ಹಾಗೂ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅನುಷ್ಠಾನದ ಜಿಲ್ಲಾ ಸ್ಥಾಯಿ ಸಮಿತಿಯ ಸದಸ್ಯ ಕಾರ್ಯದಶರ್ಿಯಾಗಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪ್ರೀ ಮೆಟ್ರಿಕ್-25189, ಪೋಸ್ಟ್ ಮೆಟ್ರಿಕ್-4228 ಹಾಗೂ ಎಮ್.ಸಿ.ಎಮ್ 355 ವಿದ್ಯಾಥರ್ಿಗಳಿಂದ ವಿದ್ಯಾಥರ್ಿ ವೇತನಕ್ಕೆ ಅಜರ್ಿ ಸಲ್ಲಿಕೆಯಾಗಿದ್ದು, ವಿದ್ಯಾಥರ್ಿ ನಿಲಯದಲ್ಲಿ ಪ್ರವೇಶ ದೊರಕದ ವಿದ್ಯಾಥರ್ಿಗಳಿಗೆ ವಿದ್ಯಾಸಿರಿ ಯೋಜನೆಯಡಿಯಲ್ಲಿ 495 ವಿದ್ಯಾಥರ್ಿಗಳು ಅಜರ್ಿ ಸಲ್ಲಿಸಿದ್ದು ಅಜರ್ಿ ಪರಿಶೀಲನಾ ಹಂತದಲ್ಲಿದೆ. ಹಾಗೂ ಬಿದಾಯಿ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಮಾತ್ರ ಅಜರ್ಿಯನ್ನು ಆನ್ಲೈನ್ನಲ್ಲಿ ಅಜರ್ಿ ಸಲ್ಲಿಸಲು ಮಾತ್ರ ಅವಕಾಶವಿದ್ದು ಮದುವೆ ದಿನಾಂಕದಿಂದ 07 ದಿನಗಳ ಮುಂಚಿತವಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಛೇರಿಗೆ ಅಜರ್ಿ ಸಲ್ಲಿಸಿ ಸ್ವೀಕೃತಿ ಪಡೆಯ ಬಹುದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿಯ ನಾಮ ನಿದರ್ೆಶಿತ ಸದಸ್ಯ ಸಿರಾಜುದ್ದಿನ ಕರಮುಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.