ಲೋಕದರ್ಶನ ವರದಿ
ಯಲಬುಗರ್ಾ 10: ಪ್ರತಿ ಕೇಂದ್ರಕ್ಕೆ ಇನ್ನೋಬ್ಬ ಸಹಾಯಕಿಯರನ್ನು ನೇಮಿಸಬೇಕು ಹಾಗೂ ಅದಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನ ಒದಗಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹೇಳಿದರು.
ಪಟ್ಟಣದಲ್ಲಿ ನಡೆದ ಅಂಗನವಾಡಿ ರಾಜ್ಯ ನೌಕರರ ಸಂಘದ 8ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಮಾತೃಪೂರ್ಣ ಯೋಜನೆ ಅತ್ಯಂತ ದೊಡ್ಡ ಹೋರೆಯಾಗಿದೆ ಯಾಕೆಂದರೆ ಒಬ್ಬ ಸಹಾಯಕಿ ಎರಡೆರಡು ಸಾರಿ ಅಡುಗೆ ಮಾಡಬೇಕು ಅವರ ಮನೆಗೆ ತಲುಪಿಸಬೇಕು. ಆಗಾದರೆ ಮಕ್ಕಳ ಕಡೆ ಗಮನ ಕೊಡುವದು ಯಾವಾಗ ಮಕ್ಕಳಿಗೆ ಏನಾದರು ಆದರೆ ಅದಕ್ಕೆ ನಾವೇ ಹೋಣೆ ಆದ್ದರಿಂದ ಯೋಜನೆ ಸಫಲವಾಗಬೇಕಾದರೆ
ಅಂಗನವಾಡಿ ಕೇಂದ್ರಗಳು ಬಡತನದಲ್ಲಿರುವ ಮಕ್ಕಳಿಗೆ ದಾರಿ ದೀಪವಾಗಿದ್ದು ಅವುಗಳಿಗೆ ಸೂಕ್ತ ಸೌಲಭ್ಯಗಳನ್ನ ಒದಗಿಸಿ ಶಿಶು ಪಾಲನ ಕೇಂದ್ರಗಳಾಗಿ ಮಾಡಲು ಅವಕಾಶ ನೀಡಿ.
ಮೂಲಭೂತ ಸೌಲಭ್ಯ ಒದಗಿಸುವ ಕಡೆ ಗಮನ ನೀಡದೆ ನಮಗಿರುವ ಅನುಧಾನವನ್ನು ಕಡಿತ ಮಾಡುತ್ತಿದ್ದಾರೆ ಕೇಂದ್ರ ಸರಕಾರ ನಮ್ಮ ಬಾಳಿನ ಜೊತೆ ಆಟ ಆಡುತ್ತಿದೆ ಯಾಕೆಂದರೆ ಅಂಗನವಾಡಿಗಿರುವ ಅನುಧಾನದಲ್ಲಿ 75%ರಷ್ಟು ಅನುಧಾನವನ್ನು ಕಡಿತ ಮಾಡಿದ್ದಾರೆ ನಮಗೆ ವೇತನ ನೀಡಲು ಇವರಲ್ಲಿ ಹಣ ಇಲ್ಲಾ ಆದರೆ ಶ್ರೀಮಂತರಿಗೆ ಸಾಲ ನೀಡಲು ಹಾಗೂ ಅವರ ಸಾವಿರಾರು ಕೋಟಿ ರೂಗಳ ಸಾಲಮನ್ನಾ ಮಾಡಲು ಮಾತ್ರ ಹಣವಿದೆ, ನಮ್ಮ ದೇಶದಲ್ಲಿ ಶೇ, 65% ರಷ್ಟು ಕುಟುಂಬಗಳ ವಾಷರ್ಿಕ ವರಮಾನ ಹತ್ತು ಸಾವಿರದ ಒಳಗಡೆ ಇದೆ ಎಂದು ವರದಿ ಒಂದು ಹೇಳುತ್ತದೆ ಇಗಿನ ಪ್ರಧಾನಿಗಳು ಹೇಳುತ್ತಾರೆ ಅಚ್ಚೇದಿನ್ ಅಂತಾ ಅದು ಕೇವಲ ದೊಡ್ಡ ಉದ್ದಿಮೆದಾರರಿಗೆ ಮಾತ್ರ ನಮ್ಮಂಥವರಿಗಲ್ಲಾ ನೋಟ್ ಅಮಾನ್ಯಕರಣದಿಂದ 70 ಲಕ್ಷ ಉದ್ಯೋಗ ಕಡಿತವಾಗಿದೆ. ನಾವು ಕೇವಲ ನಮ್ಮ ವೇತನ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಿಲ್ಲಾ ಸಮಗ್ರ ಶಿಶು ಯೋಜನೆ ಉತ್ತಮಗೋಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಇದನ್ನು ಸರಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸರಕಾರ ಹೇಳಿದಂತೆ ನಡೆಯಲಿ: ಕುಮಾರಸ್ವಾಮೀಯವರು ಅಧಿಕಾರಕ್ಕೆ ಬಂದರೆ ವೇತನ ಹೆಚ್ಚು ಮಾಡುವದಾಗಿ ಘೋಷಣೆ ಮಾಡಿದ್ದರು ಆದರೆ ಅವರೆ ಮುಖ್ಯಮಂತ್ರಿಯಾಗಿದ್ದು ಅವರು ಈ ಬಗ್ಗೆ ಮಾತನ್ನೆ ಆಡುತ್ತಿಲ್ಲಾ ಎಂದರು.
ಅಂಗನವಾಡಿಗಳು ಬಂದ್: ಬರುವ ಜನೇವರಿ 8 ಮತ್ತು 9 ರಂದು ನಮ್ಮ ಅಂಗನವಾಡಿಗಳನ್ನ ಸಂಪೂರ್ಣವಾಗಿ ಬಂದ್ ಮಾಡಲಾಗುವದು ಹಾಗೂ ರಾಜ್ಯ ಸಮ್ಮೇಳನ ನಡೆಸಲಾಗುವದು ನಮ್ಮ ಬೇಡಿಕೆ ಇಡೆರದಿದ್ದರೆ ಈ ಹಿಂದೆ ಬೆಂಗಳೂರಲ್ಲಿ ನಡೆಸಿದಂತೆ ಮತ್ತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಹಾಗೂ ಜೇಷ್ಠತಾ ಆಧಾರದ ಮೇಲೆ ಹಿರಿಯ ಅಂಗನವಾಡಿ ಕಾರ್ಯಕತರ್ೆಯರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕು ಇದಕ್ಕೆ ಸಂಬಂದಿಸಿದಂತೆ 2015 ರಲ್ಲಿ ಆದೇಶ ಬಂದಿದ್ದರು ಇಲ್ಲಿಯವರೆಗೆ ಕಾರ್ಯರೂಪಕ್ಕೆ ತಂದಿರುವದಿಲ್ಲಾ ಆದಷ್ಟು ಶೀಘ್ರದಲ್ಲಿ ಜಾರಿಗೆ ತರಬೇಕು.
ಅಂಗನವಾಡಿಯಲ್ಲೆ ಇಂಗ್ಲೀಷ್ ಪ್ರಾರಂಬಿಸಿ: ರಾಜ್ಯ ಸರಕಾರ ಹೇಳುತ್ತದೆ ಸರಕಾರಿ ಶಾಲೆಯಲ್ಲಿ ಎಲ್ಕೆಜಿ/ಯುಕೆಜಿ ಪ್ರಾರಂಭ ಮಾಡಲಾಗುವದು ಎಂದು ಆಗಾದರೆ ಅಂಗನವಾಡಿಗಳ ಗತಿಯೇನು ನಮ್ಮಲ್ಲಿಯೇ ಹೆಚ್ಚು ಶಿಕ್ಷಣ ಪಡೆದ ಕಾರ್ಯಕತರ್ೆಯರು ಇದ್ದಾರೆ ಅವರಿಗೆ ತರಬೇತಿ ನೀಡಿ ನಮಲ್ಲಿನೇ ಇಂಗ್ಲೀಷ್ ಪ್ರಾರಂಭಿಸಿ ಎಂದರು.
ರಾಜ್ಯ ಕಾರ್ಯದಶರ್ಿ ಸುನಂದಾ, ಸಿಐಟಿಯು ಜಿಲ್ಲಾ ಅದ್ಯಕ್ಷ ನಿರುಪಾದಿ, ಅಂಗನವಾಡಿ ನೌಕರರ ಜಿಲ್ಲಾ ಅಧ್ಯಕ್ಷೆ ಮಹಾಂತಮ್ಮಾ, ಲಕ್ಷ್ಮೀ ಸೋನಾರ ಅಕ್ಷರ ದಾಸೋಹ ಜಿಲ್ಲಾ ಅದ್ಯಕ್ಷರು, ಖಾಸಿಂ ಸರದಾರ, ಶಿವನಗೌಡ, ಎಸ್ಎಪ್ಐ ತಾಲೂಕ ಅದ್ಯಕ್ಷ ಸಿದ್ದಪ್ಪ ಅಂಗನವಾಡಿ ನೌಕರರ ತಾಲೂಕ ಅದ್ಯಕ್ಷರಾಧ ಯಲಬುಗರ್ಾದ ಲಲಿತಾ ಅರಳಿ, ಗಂಗಾವತಿಯ ಸಾವಿತ್ರಿ, ಕಾರಟಗಿಯ ಅಮರಮ್ಮ, ಕೊಪ್ಪಳದ ಅನ್ನಪೂರ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಅಂಗನವಾಡಿ ನೌಕರರು ಹಾಜರಿದ್ದರು.