ಲೋಕದರ್ಶನ ವರದಿ
ಚಿಕ್ಕೋಡಿ 25: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ5ನೇ ತರಗತಿಗೆ ಸೀಮಿತಗೊಳಿಸಿದ್ದರಿಂದ 6 ರಿಂದ 8 ನೇ ತರಗತಿ ಶಿಕ್ಷಕರಿಗೆ ನೀಡುವ ತರಬೇತಿಗಳನ್ನು ಬಹಿಷ್ಕರಿಸುವುದಾಗಿ ಆಗ್ರಹಿಸಿ ಪದವೀಧರ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೆಕಣಮರಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸರಕಾರದ ನಿಯಮಗಳು ಅಸ್ಪಷ್ಟತೆಯಿಂದ ಕೂಡಿರುವುದರಿಂದ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕಡೆಗಣಿಸಲಾಗುತ್ತಿದೆ. ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5ನೇ ತರಗತಿಗಳಿಗೆ ಸೀಮಿತಗೊಳಿಸಿದ್ದರಿಂದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತುಂಬಾ ಅನ್ಯಾಯವಾಗಿದೆ. ಇದರಿಂದ ಶಿಕ್ಷಕ ಸಮೂಹಕ್ಕೆ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.
ಆದ್ದರಿಂದ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು (ಜಿಪಿಟಿ)ಎಂದು ಪರಿಗಣಿಸುವವರೆಗೂ 6 ರಿಂದ 8 ನೇ ತರಗತಿಯ ಶಿಕ್ಷಕರಿಗೆ ನೀಡುವ ತರಬೇತಿಗಳನ್ನು ಬಹಿಸ್ಕರಿಸುತ್ತೇವೆ. ಹಾಗೂ ಜುಲೈ 1 ರಿಂದ 6 ರಿಂದ 8 ನೇ ತರಗತಿಗಳನ್ನು ಸಹ ಬಹಿಸ್ಕರಿಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಪದವೀಧರ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಂ.ಕಾಂಬಳೆ, ತಾಲೂಕಾ ಅಧ್ಯಕ್ಷ ಎಸ್.ಎ.ಖಡ್ಡ, ಆರ್.ಕೆ.ಕಾಂಬಳೆ, ಎಸ್.ಎನ್.ಬೆಳಗಾವಿ, ಸಿ.ಬಿ.ಅರಭಾಂವಿ, ಎಸ್.ಎಂ.ಮಾನೆ, ಪಿ.ಡಿ.ಮಜಲಟ್ಟಿ, ಎನ್.ಜಿ.ಪಾಟೀಲ, ಆರ್.ಜಿ.ರುದ್ರಗೌಡರ, ಎಸ್.ಜಿ.ಮೋಮಿನ, ಎಸ್.ಎಂ.ಕಮತೆ, ಪ್ರವೀಣ ಸಾಮಕ, ಆರ್.ವಿ.ಪೋತದಾರ, ಆರ್.ಎಸ್.ಧನವಾಡೆ, ವಾಣಿ ಕೆ.ಎಸ್., ಪುಷ್ಪಾ ಕುಂಬಾರ, ಆರ್.ಎನ್.ಜಾಧವ, ಆರ್.ಜಿ.ಪಾಟೀಲ, ಸಿ.ಎಸ್.ಹತ್ತಿ ಮುಂತಾದವರು ಉಪಸ್ಥಿತರಿದ್ದರು.