ಗ್ರಾಮಾಡಳಿತ ಅಧಿಕಾರಿಗಳು ಬೇಡಿಕೆಗೆ ಮುಷ್ಕರ ಶಾಸಕರಿಗೆ ಮನವಿ
ಹೂವಿನಹಡಗಲಿ 13: ಗ್ರಾಮಾಡಳಿತ ಅಧಿಕಾರಿಗಳಿಗೆ ಆಯಾ ಗ್ರಾಮಗಳಲ್ಲಿ ಕಚೇರಿ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.ಪಟ್ಟಣದ ತಹಸಿಲ್ ಕಚೇರಿ ಮುಂಭಾಗದಲ್ಲಿ ಗ್ರಾಮಾಡಳಿತ ಸಂಘದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು. ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರಕ್ಕೆ ನನ್ನ ಬೆಂಬಲವಿದೆ. ಬೇಡಿಕೆಗಳನ್ನು ಸರ್ಕಾರದ ಮುಂದಿಡ ಲಾಗುವುದು. ತಂತ್ರಜ್ಞಾನದ ಬಳಕೆಯಿಂದ ಬಹುಬೇಗನೆ ಸಾರ್ವಜನಿಕರ ಕೆಲಸಗಳನ್ನು ಪೂರ್ಣಗೊಳಿಸಬಹುದು. ರೈತರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಿ ಎಂದರು. ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಡಿ.ಜಿ.ಮಲ್ಲೇಶ್ ನಾಯ್ಕಮಾತನಾಡಿ, ಅನೇಕ ಒತ್ತಡಗಳ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಾಡಳಿತ ಅಧಿಕಾರಿ ಗಳಿಗೆ ಸರ್ಕಾರ ಸೌಲಭ್ಯ ಗಳನ್ನು ಒದಗಿಸಿದರೆ ಅನಕೂಲವಾಗುತ್ತದೆ. ಇಲಾಖೆಯ ಇತರ ಸಿಬ್ಬಂದಿಗೆ ಅನ್ವಯವಾಗುವ ನಿಯಮ ಜಾರಿಗೆ ತರಬೇಕು ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್, ಮಾಜಿ ಸದಸ್ಯ ತೋಟಾನಾಯ್ಕ ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಹಣ್ಣಿ ಶಶಿಧರ್, ಮೀರಾಬಾಯಿ. ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಉಪಾಧ್ಯಕ್ಷ ಸಿದ್ದಲಿಂಗೇಶ, ಕಾರ್ಯದರ್ಶಿ ಸೋಮಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲೇಶ್ . ಗ್ರಾಮಾಡಳಿತ ಅಧಿಕಾರಿಗಳಾದ ಜಗದೀಶ, ಪ್ರವೀಣ್, ಅಶೋಕ, .ಪ್ರೇಮಲತಾ, ಮಂಜುಳಾ ಇದ್ದರು.