ಬೆಳಗಾವಿ : ಬೆಳಗಾವಿಯ ಕಣಬಗರ್ಿ ನಗರದ ಅಂಬೇಡ್ಕರ ಗಲ್ಲಿಯಲ್ಲಿ ಸಮಾಜ ಮಂಧಿರ ಕಟ್ಟಬೇಕು ಮತ್ತು ಇಲ್ಲಿಯ ದಲಿತ ವರ್ಗದವರ ನೀರಿನ ಕರ ಮನ್ನಾ ಮಾಡಬೇಕು ಎಂದು ಬಾಬಾ ಸಾಹೇಬ ಅಂಬೇಡ್ಕರ್ ಯುವಕ ಮಂಡಳ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ನಗರದ ಮಹಾನಗರ ಪಾಲಿಕೆಗೆ ತೆರಳಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವ ಮೂಲಕ ಕಣಬರಗಿಯ ಅಂಬೇಡ್ಕರ್ ಗಲ್ಲಿಯಲ್ಲಿ ದಲಿತ ಸಮುದಾಯದ 60 ಕುಟುಂಬಗಳಿದ್ದು ಯಾವುದೇ ಸಮಾರಂಭ ಮಾಡಬೇಕೆಂದರೆ ಸಮುಧಾಯ ಭವನವಿಲ್ಲ ಒಂದು ಸಮುಧಾಯ ಭವನವನ್ನು ನಮರ್ಿಸಿಕೊಢಬೇಕು ಮತ್ತು ಇಲ್ಲಿಯ ಕುಟುಂಬದವರು ಕಡು ಬಡವರಾಗಿದ್ದು ನೀರಿನ ಕರವನ್ನು ಮಹಾನಗ ಪಾಲಿಕೆಯವರೇ ತುಂಬಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಪ್ರಕಾಶ ದೊಡ್ಡಮನಿ,ಲಕ್ಷಮಣ ದೊಡ್ಡಮನಿ,ಚೇತನ,ಸುಮನ,ಶಂಕರ,ಯಲ್ಲಪ್ಪ,ರವಿ ಕಾಂಬ್ಳೆ,ಮಾರುತಿ ಕೊಲ್ಕಾರ ಮುಂತಾದವರು ಉಪಸ್ಥಿತರಿದ್ದರು.