ಕೃಷಿಕರ ಭವಿಷ್ಯಕ್ಕಾಗಿ ಮತ್ತೊಂದು ಬೆಳಕು ಚಂದೂರದಲ್ಲಿ ಸವಳು ಜವಳು ಕಾಮಗಾರಿಗೆ ಭೂಮಿಪೂಜೆ
ಚಿಕ್ಕೋಡಿ 24: ಚಂದೂರ ಗ್ರಾಮದಲ್ಲಿ 1.50 ಕೋಟಿ ರೂಪಾಯಿ ವೆಚ್ಚದ, ಸವಳು ಜವಳು ಕಾಮಗಾರಿಗೆ ಸ್ಥಳೀಯ ಮುಖಂಡರಾದ ಅನಿಲ ಮಾನೆ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಅನಿಲ ಮಾನೆ ಮಾತನಾಡಿ ಅವರು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ಈ ಭಾಗದ ಶಾಸಕರಾದ ಗಣೇಶ ಹುಕ್ಕೇರಿ ಅವರ ಸಂಕಲ್ಪ ಮತ್ತು ಪ್ರಯತ್ನದಿಂದ ಮಾಂಜರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿಯ 370 ಹೆಕ್ಟೇರ್ ಸವಳು ಜವಳು ಜಮೀನು ನಿರ್ಮೂಲನೆಗೆ ಒಟ್ಟು 4 ಕೋಟಿ 62 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ ಇಂದು ನಮ್ಮ ಚಂದೂರ ಗ್ರಾಮದಲ್ಲಿ 1.50 ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಈ ಮಹತ್ವದ ಯೋಜನೆಯು ರೈತರ ಬದುಕಿನಲ್ಲಿ ಹೊಸ ದಾರಿಗಳನ್ನು ತೆರೆದಿಡಲಿದೆ, ರೈತರ ಸಮೃದ್ಧಿಗಾಗಿ ನಮ್ಮ ಶಾಸಕರ ನೇತೃತ್ವದಲ್ಲಿ ಅಭಿವೃದ್ಧಿಯ ಹಸಿರು ಕ್ರಾಂತಿ ಮುಂದುವರಿಯಲಿದೆ ಎಂದು ಹೇಳಿದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಕಾಂಬಳೆ ಮಾತನಾಡಿ ಈ ಯೋಜನೆಯ ಮೂಲಕ 120 ಹೆಕ್ಟೇರ್ ಕೃಷಿ ಜಮೀನು ಫಲವತ್ತಾಗಿ, ರೈತರು ಉತ್ತಮ ಬೆಳೆ ಬೆಳೆಸಲು ಸಾಧ್ಯವಾಗುತ್ತದೆ. 361 ರೈತರು ನೇರ ಲಾಭ ಪಡೆಯಲಿದ್ದು, ಅವರ ಆರ್ಥಿಕ ಭದ್ರತೆ ಮತ್ತಷ್ಟು ಬಲಪಡಲಿದೆ. ಉತ್ತಮ ಬೆಳೆ ಉತ್ಪಾದನೆಯೊಂದಿಗೆ ರೈತರ ಆದಾಯ ಹೆಚ್ಚುವ ಸಾಧ್ಯತೆ ಇದ್ದು, ಇದು ಕೃಷಿ ಚೇತರಿಕೆಗೆ ಪ್ರಮುಖ ಹೆಜ್ಜೆಯಾಗಲಿದೆ ಎಂದು ಹೇಳಿ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದ ಹೇಳಿದರು.ಅನಿಲ ಪಾಟೀಲ, ಶರದ ಪಾಟೀಲ, ಶಶಿಕಾಂತ ಪಾಟೀಲ, ಚಂದ್ರಕಾಂತ ಪಾಟೀಲ, ಅಶೋಕ ಜಮದಾಡೇ, ಸಿದ್ದು ಮಗದುಮ್ಮ, ವಿಷ್ಣು ಪಾಟೀಲ, ಮಾರುತಿ ಕಾಂಬಳೆ, ಪಾಪಾ ಮದ್ಯಾಪ್ಗೊಳ, ಸಂತೋಷ್ ಕುಂಬಾರ ಮುಂತಾದ ಗಣ್ಯರು ಉಪಸ್ಥಿತರಿದ್ದರು.