ಲಂಡನ್ 14: ಲಾಡ್ಸ್ರ್ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಬ್ಬರಿಸುತ್ತಿದ್ದರೆ, ಅತ್ತ ಕ್ರಿಕೆಟ್ ಕಾಶಿ ಲಾಡ್ರ್ಸ ಕ್ರಿಕೆಟ್ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತ್ರಿಶತಕದ ಮಹಾನ್ ಸಾಧನೆ ಮಾಡಿದ್ದಾರೆ.
ವಿಕೇಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರಸಿಂಗ್ ಧೋನಿ ತ್ರಿಶತಕ ಬಾರಿಸಿದ್ದಾರೆ... ಅದು ಬ್ಯಾಟ್ ಮೂಲಕ ಅಲ್ಲ.... ವಿಕೆಟ್ ಹಿಂದೆ ನಿಂತು ಆ ದಾಖಲೆ ಬರೆದಿದ್ದಾರೆ. ಧೋನಿ ಈ ಪಂದ್ಯದ ಮೂಲಕ 300 ಕ್ಯಾಚ್ಗಳ ದಾಖಲೆ ನಿಮರ್ಿಸಿದ್ದಾರೆ.
ಉಮೇಶ್ ಯಾದವ್ ದಾಳಿಯಲ್ಲಿ ಜೋಸ್ ಬಟ್ಲರ್ ಕ್ಯಾಚ್ ಹಿಡಿಯುವ ಮೂಲಕ ಮಾಹಿ ಈ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 300 ಕ್ಯಾಚ್ಗಳನ್ನು ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಇಂದಿನ ಈ ಸಾಧನೆ ಮೂಲಕ ಎಂ.ಎಸ್. ಧೋನಿ ಒನ್ ಡೇ ಇಂಟನ್ಯರ್ಾಷನಲ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದಿರುವ ವಿಕೆಟ್ ಕೀಪರ್ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಒಟ್ಟು 417 ಕ್ಯಾಚ್ಗಳನ್ನು ಪಡೆದಿರುವ ಆಸ್ಟ್ರೇಲಿಯಾದ ದಿ ಗ್ರೇಟ್ ವಿಕೆಟ್ ಕೀಪರ್ ಆ್ಯಡಂ ಗಿಲ್ಕ್ರಿಸ್ಟ್ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕದ ಆಟಗಾರ ಮಾಕರ್್ ಬೌಚರ್ ಒಟ್ಟು 403 ಕ್ಯಾಚ್ಗಳ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಶ್ರೀಲಂಕಾದ ಕುಮಾರ ಸಂಗಕ್ಕರ 402 ಕ್ಯಾಚ್ಗಳನ್ನು ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.