ಲೋಕದರ್ಶನ ವರದಿ
ಗೋಕಾಕ: ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ 2018-19ನೇ ಸಾಲಿನ ವಾಷರ್ಿಕ ಸರ್ವಸಾಧಾರಣ ಮಹಾಸಭೆ ಯಶಸ್ವಿಯಾಗಿ ಬುಧವಾರ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ವಾರ್ಷಿಕ ವರದಿ ಮಂಡಿಸಿ ಸಂಘವು ಸನ್2018-19 ನೇಯ ಸಾಲಿನಲ್ಲಿ 19,80053ರೂ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರ ಸದಸ್ಯರಿಗೆ ಶೇ20 ರಷ್ಟು ಡಿವ್ಹಿಡೆಂಡ್, ಶೇ 65ರಷ್ಟು ಒಟ್ಟು 9,18,941ರೂ ಬೋನಸ್ ಸದಸ್ಯರಿಗೆ ವಿತರಿಸಲಾಗುವದು ಎಂದರು.
ಸಂಘದ ಅಧ್ಯಕ್ಷ ಹನುಮಂತ ಪಾಟೀಲ ವಾಷರ್ಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಎಮ್.ವಿ.ಲಕ್ಕಣ್ಣವರ ಮಾತನಾಡಿದರು. ಸಂಘದ ಶೇರ ಸದಸ್ಯರು, ಗ್ರಾಹಕರು ಜೋತೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ಸಂಘದ ಸಮಗ್ರ ಪ್ರಗತಿಯ ಕುರಿತು ಈ ವೇಳೆ ಚಚರ್ಿಸಿದರು.
ಬಹುಮಾನ ವಿತರಣೆ: ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಸನ್2018-19ನೇಯ ಸಾಲಿನಲ್ಲಿ ಅತಿ ಹೆಚ್ಚು ಹಾಲು ನೀಡಿದ ಆಕಳು ಹಾಲು ವಿಭಾಗದಲ್ಲಿ ಬಸವ್ವ ಕೋಣಿ, ದುಂಡಪ್ಪ ದಂಡಿನ ಪ್ರಥಮ, ವಿಜಯ ಮಠದ ದ್ವೀತಿಯ, ಮಹಾದೇವ ಹೊಂಗಲ ತೃತೀಯ ಹಾಗೂ ಎಮ್ಮೆ ಹಾಲು ವಿಭಾಗದಲ್ಲಿ ಈರಪ್ಪ ಮುಧೋಳ ಪ್ರಥಮ, ಸತ್ತೆಪ್ಪ ಜಟ್ಟೆಪ್ಪಗೋಳ ದ್ವೀತಿಯ, ಗೌರವ ನಂದಿ ತೃತೀಯ ಸ್ಥಾನ ಪಡೆದ ಸಂಘದ ಸದಸ್ಯರಿಗೆ ತ್ರಾಮದ ಹಾಂಡೆ ಸೇರಿದಂತೆ ಗೃಹೋಪಯೋಗಿ ಉಪಕರಣ ಹಾಗೂ ಎರಡು ಸಾವಿರಕ್ಕಿಂತ ಹೆಚ್ಚು ಬೋನಸ್ ಪಡೆದ ಸಂಘಕ್ಕೆ ಹಾಲು ನೀಡುವ 167 ಸದಸ್ಯರಿಗೆ 5ಲೀಟರ್ನ ಹಾಲಿನ ಕ್ಯಾನ್ಗಳನ್ನು ಸಂಘದ ಅಧ್ಯಕ್ಷ ಹನುಮಂತ ಪಾಟೀಲ ಬಹುಮಾನ ರೂಪದಲ್ಲಿ ನೀಡಿ ಸನ್ಮಾನಿಸಿದರು.
ಗೋಕಾಕ ಉಪ ಕೇಂದ್ರದ ವಿಸ್ತರಣಾಧಿಕಾರಿ ಎಸ್.ಬಿ.ಕರಬಣ್ಣವರ, ಬೀರೇಶ ಖಿಲಾರಿ, ಡಾ.ವೀರಣ್ಣ ಕೌಜಲಗಿ, ಸಂಜೀವ ಪೂಜೇರಿ, ದುಂಡಪ್ಪ ಕಂಬಿ, ಸತ್ಯಪ್ಪ ಹೊರಟ್ಟಿ, ರಾಚಪ್ಪ ಮುರಗೋಡ, ರವಿ ಉಪ್ಪಾರ, ವಿಜಯ ಮಠದ, ಉದ್ದಪ್ಪ ಆಶೆಪ್ಪಗೋಳ, ರಾಮಣ್ಣ ದೇಯಣ್ಣವರ, ಸಿದ್ದಪ್ಪ ಬಾಣಸಿ, ಸುನಂದಾ ದೇಯಣ್ಣವರ, ರುಕ್ಮವ್ವ ಕೋಣಿ, ಯಮನಪ್ಪ ತಳವಾರ, ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಶೇರ ಸದಸ್ಯರು, ಗ್ರಾಹಕರು, ಇತರರು ಇದ್ದರು.