ನಯಾನಗರ ಸರ್ಕಾರಿ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ
ಬೈಲಹೊಂಗಲ 09: ಮಕ್ಕಳು ನಿರ್ದಿಷ್ಠ ಸ್ಪಷ್ಟ ಗುರಿ ಹಾಗೂ ಏಕಾಗ್ರತೆ, ಶಿಸ್ತುಬಧ್ದತೆಯಿಂದ ಶ್ರಮಪಟ್ಟು ವಿದ್ಯಾರ್ಜನೆ ಮಾಡಿದ್ದಾದರೆ ಸಾಧಕರಾಗಿ ಸಮಾಜ ಸೇವೆ ಮಾಡಲು ಸಾದ್ಯ ಎಂದು ನಿವೃತ್ತ ಡಿಡಿಪಿಐ ಎ.ಸಿ.ಗಂಗಾಧರ ನುಡಿದರು. ಅವರು ತಾಲೂಕಿನ ನಯಾನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರಿ್ಡಸಿದ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಹಾಗೂ 2000-01 ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಇಂದಿನ ಮಕ್ಕಳಿಗೆ ವೈಜ್ಞಾನಿಕ ಯುಗದ ಶಿಕ್ಷಣ ಪದ್ದತಿ ಜೊತೆಗೆ ಗುರುಕುಲ ಮಾದರಿಯ ನೈತಿಕ ಶಿಕ್ಷಣದ ಅವಶ್ಯಕತೆ ತುಂಬಾ ಇದೆ. ಪ್ರೌಢ ಹಂತದಲ್ಲಿರುವ ಮಕ್ಕಳಾದ ತಾವುಗಳು ಸದೃಢ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯೊಂದಿಗೆ ಗುರು ಹಿರಿಯರಿಗೆ ಗೌರವ, ಅಬಲರಿಗೆ ಸಹಾಯ, ಸಹಕಾರ, ನೈತಿಕತೆ ಹಾಗೂ ಪರೋಪಕಾರ ಗುಣಗಳನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಂಡು, ಬದುಕಿನಲ್ಲಿ ಒಳ್ಳೆಯ ಗುರಿ ಹಾಗೂ ಉದ್ದೇಶ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದೊಂದಿಗೆ ಮುಂದುವರೆದಿದ್ದಾದರೆ ಉನ್ನತ ಪ್ರಗತಿ ಹೊಂದಲು ಸಾದ್ಯ ಎಂದರು. ಅಧ್ಯಕ್ಷತೆ ವಹಿಸಿದ ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ, ಶಿಕ್ಷಣ ಪ್ರೇಮಿ ನಾರಾಯಣ ನಲವಡೆ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಎಲ್ಲಾ ಒಳ್ಳೆಯ ಬೆಳವಣಿಗಗೆ ನಯಾನಗರ ಜನತೆ ಹಾಗೂ ಜ್ಞಾನ ಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿರುವ ಗುರುಬಳಗವೇ ಕಾರಣ ಎಂದರು. ಮಹಾಂತೇಶ ಮರೆಕ್ಕನವರ ಇವರು ಮಾತನಾಡಿ ನಾವು ಕಲಿತ ಶಾಲೆಗೆ, ನಮಗೆ ಕಲಿಸಿದ ಗುರುಗಳ ಮುಂದೆ ಸೇವೆ ಮಾಡಲು ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ ಎಂದರು. ನಿವೃತ್ತ ಪ್ರಾಚಾರ್ಯ ಎಂ.ಬಿ.ಇಂಗಳಗಿ, ಸುವರ್ಣಾ ಅಂಗಡಿ, ಉಪನ್ಯಾಸಕ ಪಿ.ಎಂ.ಅಯಾಚಿತ ಮುಖ್ಯೋಪಾದ್ಯಾಯರುಗಳಾದ ಎಸ್.ವ್ಹಿ.ಯರಡ್ಡಿ, ಎಂ.ಐ.ಪೆಂಟೇದ, ಶ್ರೀಮತಿ ಎಸ್.ಟಿ.ದಾಸರ, ಸುಪರಿಟೆಂಡಂಟ್ ಸುರೇಶ ಬೆಟಗೇರಿ, ಬಿ.ವ್ಹಿ.ಪತ್ತಾರ, ಬ್ರಹ್ಮಾನಂದ ಕಡ್ಲಿಬುಡ್ಡಿ, ಪಿ.ಪಿ.ಸೊಂಟಕ್ಕಿ, ಜಿ.ಬಿ.ಪಟ್ಟಣಶಟ್ಟಿ, ಎಸ್.ಜಿ.ಹಿರೇಮಠ, ಪಂಚಮಸಾಲಿ ಸಮಾಜ ತಾಲೂಕ ಅಧ್ಯಕ್ಷ ಚಂದ್ರು ದೇವಲಾಪೂರ, ಪ್ರಕಾಶ ಅಡಕಿ, ಗೌರವಾನ್ವಿತ ಅತಿಥಿಗಳಾಗಿ ಹಿರಿಯರಾದ ಗಂಗಯ್ಯಾ ಹಿರೇಮಠ, ದೇಮನಗೌಡ ಶೀಲವಂತರ, ಕಲ್ಲಪ್ಪ ಏಣಗಿ, ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಏಣಗಿ, ಉಪಾಧ್ಯಕ್ಷೆ ಗೀತಾ ಚಂದರಗಿ, ಎಸ್ಡಿಎಂಸಿ ಸದಸ್ಯರಾದ ನಿಂಗಪ್ಪ ಅಳಗೋಡಿ, ರವಿ ಬಡಿಗೇರ, ಸೋಮನಿಂಗ ಅಡಕಿ, ಬಾಬು ಮಾಳಗಿ, ಭೀಮಪ್ಪ ಹಲ್ಕಿ, ಪಂಚಾಯತ ಸದಸ್ಯರಾದ ಉಮೇಶ ಹುಲಮನಿ, ನಾರಾಯಣ ಶಿರೋಮನಿ, ರವಿ ಹುಡೇದ, ಮೌನೇಶ ಪತ್ತಾರ, ಮಾಜಿ ಉಪಾಧ್ಯಕ್ಷರಾದ ಶ್ರೀಕಾಂತಗೌಡ ಪಾಟೀಲ, ಮಲ್ಲಪ್ಪ ಕಾಂಬಳೆ, ಮಾಜಿ ಗ್ರಾ.ಪಂ ಅಧ್ಯಕ್ಷ ಬೀಮಪ್ಪ ಕರಿದೇಮನ್ನವರ, ಶಿಕ್ಷಕ ಈರ್ಪ ಉಜ್ಜಿನಕೊಪ್ಪ. ಮುಖ್ಯೋಪಾದ್ಯಾಯ ನಾಗೇಶ ಮಾಳನ್ನವರ ಮುಖ್ಯೋಪಾದ್ಯಾಯ ಎಂ.ಎಂ.ಸಂಗೊಳ್ಳಿ, ಮುದಕಪ್ಪ ತೋಟಗಿ, ಮುಂತಾದವರಿದ್ದರು. ಶಾಲೆಯ ಆದರ್ಶ ವಿದ್ಯಾರ್ಥಿಯಾಗಿ ಆದರ್ಶ ಈರ್ಪ ಉಜ್ಜಿನಕೊಪ್ಪ ಹಾಗೂ ಆದರ್ಶ ವಿದ್ಯಾರ್ಥಿನಿಯಾಗಿ ಅಕ್ಷತಾ ಕಲಬಾವಿ ಇವಳು ಆಯ್ಕೆಯಾಗಿ ಬಹಮಾನಗಳನ್ನು ಪಡೆದರು. ಉಳಿದ ಮಕ್ಕಳು ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ನಗದು, ಪದಕ ಪುರಸ್ಕಾರಗಳನ್ನು ಪಡೆದು ಸಂಭ್ರಮಿಸಿದರು, ಮಕ್ಕಳು ಕಾರ್ಯಕ್ರಮದಲ್ಲಿ ದೇಸಿಯ ಸೊಗಡನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಶಿಕ್ಷಕ ಸಿದ್ದಯ್ಯಾ ಹಿರೇಮಠ ಶೈಕ್ಷಣಿಕ ವರ್ಷದಲ್ಲಿ ಶಾಲೆ ನಡೆದು ಬಂದ ದಾರಿಯ ಬಗ್ಗೆ ವರದಿ ವಾಚನ ಮಾಡಿದರು. ನಗದು ಪುರಸ್ಕಾರ ಕಾರ್ಯಕ್ರಮವನ್ನು ಮಂಜುನಾಥ ಬೈಲಪ್ಪನವರ ಹಾಗೂ ಸಾಂಕೃತಿಕ ಕಾರ್ಯಕ್ರಮವನ್ನು ಶಿಕ್ಷಕ ಶಿವಾನಂದ ಕೊಳ್ಳಿ ನಡೆಸಿಕೊಟ್ಟರು. ಹಿರಿಯ ಶಿಕ್ಷಕ ಬಸವರಾಜ ಪತ್ತಾರ ಸ್ವಾಗತಿಸಿದರು, ಶಿಕ್ಷಕ ರವಿಂದ್ರಕುಮಾರ ಹಾದಿಮನಿ ನಿರೂಪಿಸಿದರು, ಶಿಕ್ಷಕಿ ಎಸ್.ಆರ್.ಪತ್ತಾರ ವಂದಿಸಿದರು.