ಮಿಲೇನಿಯಂ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭ

Anniversary function of Millennium Public School

ಮಿಲೇನಿಯಂ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭ

ಕೊಪ್ಪಳ 07: ಕೊಪ್ಪಳದ ಮಿಲೇನಿಯಂ ಪಬ್ಲಿಕ್ ಸ್ಕೂಲ್ ’ತರಂಗ’ ಎಂಬ ಶಿರ್ಷಿಕೆಯ ಅಡಿಯಲ್ಲಿ  3/1/ 2025 ರಂದು ವಾರ್ಷಿಕೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿತ್ತು. ಗವಿಸಿದ್ದೇಶ್ವರ ಮಹಾಸ್ವಾಮಿಗಳು ಜಾತ್ರಾ  ಕಾಯಕದ ಒತ್ತಡದಲ್ಲಿದ್ದರೂ ಕೂಡ ತರಂಗ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಂಜಾನೆಯೇ ಆಗಮಿಸಿ ನಮ್ಮೆಲ್ಲಾ ಪಾಲಕ ಪೋಷಕರಿಗೂ ಮುದ್ದು ಮಕ್ಕಳಿಗೂ  ಆಶೀರ್ವದಿಸಿದರು. 

ಅವರ ಕೃಪಾಶೀರ್ವಾದದಿಂದ ನಮ್ಮ ತರಂಗ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಶಾಲೆಯ ಪ್ರಾಚಾರ್ಯರಾದ ಸಪ್ನಾರವರು ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ಷ.ಬ್ರ.108 ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ  ವಹಿಸಿದ್ದರು. 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಂಸದ ಸಂಗಣ್ಣ ಕರಡಿರವರು ಮೊದಲ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆ ರವರ ಬಗ್ಗೆ ಮತ್ತು ಶಿಕ್ಷಣದ ಮಹತ್ವ ಕುರಿತು ತಿಳಿಸಿದರು. ಮುಖ್ಯ ಅತಿಥಿಗಳಾದ ಆರ್‌. ವಿ. ಗುಮಾಸ್ತೆ ರವರು "ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ" ಅಂತಹ ಉನ್ನತ ದರ್ಜೆಯ ಶಿಕ್ಷಣವನ್ನು ನೀಡುತ್ತಿರುವ ಶಾಲೆ ಈ ಮಿಲೇನಿಯಂ ಪಬ್ಲಿಕ್ ಸ್ಕೂಲ್ ಎಂದು ಶಾಲೆಯ ಕಾರ್ಯ ವಿಧಾನವನ್ನು ಶ್ಲಾಘಿಸಿದರು.  

ಮತ್ತೊರ್ವ ಅತಿಥಿಗಳಾದ  ಪಿ. ನಾರಾಯಣ ರವರು  ಮಿಲೇನಿಯಂ ಪಬ್ಲಿಕ್ ಶಾಲೆಯು ಕೈಗೊಂಡ ಸಾಮಾಜಿಕ ಕಾರ್ಯಗಳ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಶಾಲೆಯ ಅಧ್ಯಕ್ಷರಾದ  ಗೀರೀಶ್ ಕಣವಿ ರವರು "ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ನಾವು ಕಂಕಣಬದ್ಧರಾಗಿದ್ದೇವೆ" ಎಂಬ ಭರವಸೆಯ ಮಾತುಗಳನ್ನು ನೀಡಿದರು. ಶಾಲೆಯ ಶಿಕ್ಷಕ ವರ್ಗದವರು,ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಅತ್ಯಂತ ಸಂತಸದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.