ಲೋಕದರ್ಶನ ವರದಿ
ಮುಧೋಳ: ದಿ. ಜಿ.ಆರ್.ಕಾಳಗಿ ಅವರು ಆದರ್ಶ ಶಿಕ್ಷಕರಾಗಿ ಲಕ್ಷಾಂತರ ವಿದ್ಯಾಥರ್ಿಗಳ ಜ್ಞಾನದಾಹ ತಿರಿಸಿ ಜನ ಮೆಚ್ಚಿಗೆಯ ಶಿಕ್ಷರಾಗಿದ್ದರೆಂದು ದಾನಮ್ಮದೇವಿ ಮಹಿಳಾ ಕಾಲೇಜಿನ ನಿ. ಪ್ರಾಚಾರ್ಯ ಡಾ.ಎನ್.ಎಂ ತೋಟದ ಹೇಳಿದರು.
ಅವರು ನಗರದ ಟಂಕಸಾಲಿ ಭವನದಲ್ಲಿ ನಡೆದ ಕಾಳಗಿ ಸ್ಮರಣೋತ್ಸವದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ತಮ್ಮ ಕೊನೆಯುಸಿರು ಇರುವರೆಗೊ ಕಾಳಗಿ ಅವರು ಅತ್ಯಂತ ಪ್ರಾಮಾಣಿಕವಾಗಿ ಶಿಕ್ಷಣ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದರೆಂದು ತೋಟದ ಅವರು ಅಭಿಮಾನದಿಂದ ಹೇಳಿದರು.
ಇದೇ ವೇಳೆ ಮಕ್ಕಳ ಸಾಹಿತಿ ಅಣ್ಣಾಜಿ ಪಡತಾರೆ ಅವರನ್ನು ಕಾಳಗಿ ಪ್ರತಿಷ್ಠಾನದಡಿ ಸನ್ಮಾನಿಸಲಾಯಿತು. ಸನ್ಮಾನೋತ್ತರವಾಗಿ ಪಡತಾರೆ ಅವರು ಮಾತನಾಡಿ,ಕಾಳಗಿ ಅವರು ನನಗೂ ಕೂಡಾ ಗುರುಗಳಾಗಿದ್ದರೆಂದು ಹೇಳಿ, ಅವರೊಬ್ಬ ಶಿಕ್ಷಣ ಪ್ರೇಮಿ ಆಗಿದ್ದರೆಂದು ಹೇಳಿದರು.
ಸಾನಿದ್ಯವನ್ನು ವಹಿಸಿದ್ದ ಕಸಬಾ ಜಂಬಗಿಯ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕಾಳಗಿ ಅವರು ಸಲ್ಲಿಸಿದ ಗಣನೀಯ ಸೇವೆಂನ್ನು ಬಣ್ಣಿಸಿದರು. ಅಧ್ಯಕ್ಷತೆಯನ್ನು ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿ ವಹಿಸಿ, ಕಾಳಗಿ ಶಿಕ್ಷಕರು ಈಗಿನ ಶಿಕ್ಷಕರಿಗೆ ಅನುಕರಣಿಯರಾಗಿದ್ದರೆಂದರು.
ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್, ರಾಮತೀರ್ಥ ಸ್ವಾಗತಿಸಿದರು. ಪ್ರ.ಕಾ. ಡಾ.ಸಂಗಮೇಶ ಕಲ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಕೆ ಹಂಚಾಟೆ ನಿರೂಪಿಸಿ ದರು. ರುದ್ರಪ್ಪ ಜಾಡರ ವಂದಿಸಿದರು. ಕಾಳಗಿ ಕುಟುಂಬದವರು, ಶಿಷ್ಯ ವರ್ಗ ಹಾಗೂ ಅಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.