ಅಂಗನವಾಡಿ ನೌಕರರ ಗೋಕಾಕ ತಾಲೂಕಾ 4ನೇ ಸಮ್ಮೇಳನ

ಗೋಕಾಕ 11: ರಾಜ್ಯದಲ್ಲಿ ಸರಕಾರ ನಡೆಸುವ ಯಾವುದೇ ಪಕ್ಷಗಳು ಅಂಗನವಾಡಿ ನೌಕರರ ಹಿತ ಕಾಯುವಲ್ಲಿ ಮೀನಾಮೇಷ ಮಾಡುತ್ತಿದ್ದು ಸಮಾನ ಕೆಲಸಕ್ಕೆ ಸಮಾನ ವೇತನ, ಸೇರಿದಂತೆ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷವಹಿಸುತ್ತಿವೆ. ಆದ್ದರಿಂದ ನಾವು ಹೋರಾಟದಿಂದಲೇ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪರಿಸ್ಥಿತಿ ನಿಮರ್ಾಣವಾಗಿದೆ ಎಂದು ಕನರ್ಾಟಕ ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಗೈಬುಸಾಬ ಜೈನೇಖಾನ ಹೇಳಿದರು.

ಅವರು ಶನಿವಾರದಂದು ನಗರದ ಬಿರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಂಗನವಾಡಿ ನೌಕರರ ಗೋಕಾಕ ತಾಲೂಕಾ 4ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಅಂಗನವಾಡಿ, ಗ್ರಾಮ ಪಂಚಾಯತ, ಕಟ್ಟಡ ಕಾಮರ್ಿಕರ, ಸೇರಿದಂತೆ ಕೆಳಸ್ಥರದ ಹಲವಾರು ನೌಕರರಿಗೆ ಸುಪ್ರೀಮ್ ಕೋರ್ಟ ಆದೇಶದನ್ವಯ ಸಮಾನ ಕೆಲಸಕ್ಕೆ ಸಮಾನ ವೇತನದ ನೀಡಲು ಹಿಂದೇಟು ಹಾಕಿ ಬಂಡವಾಳ ಶಾಹಿಗಳ ಜೇಬು ತುಂಬುತ್ತಿದ್ದಾರೆಂದು ಆರೋಪಿಸಿ ಜನೇವರಿ 8 ಹಾಗೂ 9 ರಂದು ದೇಶಾದ್ಯಂತ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜೇರಿ ಮಾತನಾಡಿ ನೌಕರರ ಬೇಡಿಕೆಗಳ ಬಗ್ಗೆ ಹಾಗೂ ಸಂಘಟನೆಯ ಮೂಲಕ ಆದ ಕೆಲಸಗಳ ಬಗ್ಗೆ ವಿವರವಾಗಿ ಹೇಳಿದರು. ತಾಲೂಕಾ ಮಟ್ಟದ ಅಂಗನವಾಡಿ ನೌಕರರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

  ಹಮಾಲಿ ಕಾಮರ್ಿಕರ ಸಂಘದ ಅಧ್ಯಕ್ಷ ಬಸವರಾಜ ಆರ್ಯನ್ನವರ, ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾದ್ಯಕ್ಷ ಟಿ.ಎ.ಬಾಬಗೌಡ, ತಾಲೂಕಾದ್ಯಕ್ಷ ಮಡ್ಡೆಪ್ಪ ಭಜಂತ್ರಿ. ಕಲ್ಲಪ್ಪ ಮಾದರ, ರಮೇಶ ಹೋಳಿ, ಮುಖಂಡರಾದ ಮಹೇಶ ಕರಣೂರೆ, ವಿದ್ಯಾ ಕಂಬಾರ, ಚನ್ನಮ್ಮ ಗಡಕರಿ, ಆಯಿಶಾ ದೇಸಾಯಿ, ಪ್ರವೀಣ ಶಿಪ್ರಿ, ವೇದಿಕೆ ಮೇಲೆ ಹಾಜರಿದ್ದರು. ಗೋಕಾಕ ತಾಲೂಕಿನ ಎಲ್ಲ ಅಂಗನವಾಡಿ ನೌಕರರು ಉಪಸ್ಥಿತರಿದ್ದರು.