ಅನಂತಕುಮಾರ ಚಾಣಾಕ್ಷ ರಾಜಕಾರಣಿ: ಮುನಿಯಪ್ಪ

ಲೋಕದರ್ಶನ ವರದಿ

ಯಲಬುಗರ್ಾ 12: ನಮ್ಮ ರಾಜ್ಯ ಕಂಡ ಅತ್ಯಂತ ಅನುಭವಿ ಹಾಗೂ ಧೀಮಂತ ನಾಯಕ ದಿ. ಅನಂತಕುಮಾರವರು ಅವರನ್ನು ಕಳೆದುಕೊಂಡ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕನರ್ಾಟಕ ರಕ್ಷಣಾ ವೇದಿಕೆಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಕನ್ನಡ ನೆಲ ಜಲ ಭಾಷೆಗೆ ಕುತ್ತು ಬಂದಾಗ ಯಾವ ಪಕ್ಷವನ್ನು ಲೆಕ್ಕಿಸದೆ ಅದರ ವಿರುದ್ಧ ಧ್ವನಿ ಎತ್ತುವ ಮೂಲಕ ನಮ್ಮ ರಾಜ್ಯಕ್ಕೆ ಆಗುತ್ತಿದ್ದ ಅನ್ಯಾಯವನ್ನು ತಡೆಗಟ್ಟುವಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾದದು, ಅದರ ಜೊತೆಗೆ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಹಲವಾರು ಜನಪರ ಯೋಜನೆಗಳು ದೊರೆಯುವಲ್ಲಿ ಇವರ ಪಾತ್ರ ಬಹಳ ಮಹತ್ವದ್ದಾಗಿದೆ ಇವರ ಅಗಲಿಕೆಯಿಂದ ಒಬ್ಬ ಕನ್ನಡ ಮಾತೆಯ ವೀರ ಪುತ್ರನನ್ನು ಕಳೆದುಕೊಂಡಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಶೀವಕುಮಾರ ನಾಗನಗೌಡ್ರ, ತೋಟಪ್ಪ ತರಲಕಟ್ಟಿ, ಕೋಟೇಶ ಭೂತೆ, ಮಾನಪ್ಪ ಬಡಿಗೇರ, ಸೇರಿದಂತೆ ಅನೇಕರು ಹಾಜರಿದ್ದರು.