ಅರ್ಥಗರ್ಭಿತವಾಗಿ ನೆರವೇರಿದ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸ್ವರ ಶ್ರಧ್ಧಾಂಜಲಿ ಕಾರ್ಯಕ್ರಮ
ಕೊಟ್ಟೂರು 14: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಿರಿಬಿ ರಸ್ತೆಯಲ್ಲಿರುವ ಇಂದು ಕಾಲೇಜ್ ನ ಸಭಾಂಗಣದಲ್ಲಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿಯಿಂದ ಆಯೋಜಿಸಿದ್ದ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಹದಿನೈದನೇ ವರ್ಷದ ಸ್ವರ ಶ್ರಧ್ಧಾಂಜಲಿ ಕಾರ್ಯಕ್ರಮ ಅರ್ಥಗರ್ಭಿತವಾಗಿ ಅತ್ಯಂತ ಯಶಸ್ವಿಯಾಗಿ ನಡೆಯಿತು ಪ್ರತಿ ವರ್ಷದಂತೆ ಈ ವರ್ಷ ಸಹ ಪುಟ್ಟರಾಜ ಗವಾಯಿಗಳವರ ಸ್ವರ ನಮನ ಸಲ್ಲಿಸಲಾಯಿತು, ಮೊದಲಿಗೆ ವೇದಿಕೆ ಕಾರ್ಯಕ್ರಮ ಜರುಗಿತು. ಕಾಲೇಜಿನ ಆಡಳಿತಾಧಿಕಾರಿಗಳಾದ ಹೆಚ್.ಎನ್. ವೀರಭದ್ರ್ಪ ರವರು ಮಾತನಾಡಿ ಸಂಗೀತಕ್ಕೆ ಸಾವನ್ನು ಗೆಲ್ಲುವ ಶಕ್ತಿ ಇದ್ದು ಸಾಹಿತ್ಯ ಸಂಗೀತದ ಆಸಕ್ತಿಯನ್ನು ವಿದ್ಯಾರ್ಥಿಗಳೆಲ್ಲರೂ ಬೆಳಿಸಿಕೊಳ್ಳಬೇಕು, ಈ ಕಾರ್ಯಕ್ರಮದಿಂದ ಪ್ರೇರಿತರಾಗಿ ನಾನು ಸಹ ಮುಂದೊಂದು ದಿನ ಗಾಯಕ ,ಗಾಯಕಿಯಾಗುತ್ತೇನೆ ಎಂಬ ಛಲ ಮನೋಭಾವ ಬಂದು ಉತ್ತಮ ಗಾಯಕರಾಗಬೇಕು ಅದಕ್ಕಿಂತ ಮೊದಲು ಅತ್ಯುತ್ತಮ ಕೇಳುಗರಾಗಬೇಕು ಸಂಗೀತಾಸಕ್ತಿ ಬೆಳೆಸಿಕೊಳ್ಳಬೇಕು ಎಂಬ ಆಶಯ ಈ ಕಾರ್ಯಕ್ರಮದಾಗಿದೆ ಎಂದರು.
ಸಮಿತಿಯ ಅಧ್ಯಕ್ಷರಾದ ಸುಧಾಕರಪಾಟೀಲ್ ಅವರು ಮಾತನಾಡುತ್ತಾ ಪುಟ್ಟರಾಜ ಗವಾಯಿಗಳವರ ಸಾವಿರಾರು ಅಂಧ ಮಕ್ಕಳಿಗೆ ಬೆಳಕಾದವರು ಅವರಿಗೆ ವಿದ್ಯೆ ಹೇಳಿಕೊಟ್ಟು ಬದುಕು ರೂಪಿಸಿದ ಮಹಾನುಭಾವರು ಎಂದು ಭಾವುಕರಾದರು. ಈ ಕಾರ್ಯಕ್ರಮದಲ್ಲಿ ಗಾಯಕಿ ವಾಣಿಹರೀಶ್ ಕಾರ್ಯಕ್ರಮದ ಪ್ರಾರ್ಥನಗೀತೆ ಹಾಡುವುದರ ಮೂಲಕ ನೆರದಿದ್ದ ಪ್ರೇಕ್ಷಕರನ್ನು ವಿದ್ಯಾರ್ಥಿಗಳನ್ನು, ಗವಾಯಿಗಳವರ ಶಿಷ್ಯಂದಿರನ್ನು ತೆಲೆತೂಗುವಂತೆ ಮಾಡಿದರು. ಅವರು ನಿರೂಪಿಸಿದರು. ಈ ಸಂಧರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಸ್ವಾದಿಸಿದರು. ಕಾಲೇಜಿನ ಉಪಪ್ರಾಂಶುಪಾಲರು ಮಹೇಶ್ .ಹೆಚ್. ಕಲಾವಿಭಾಗದ ಎ.ಧನುಂಜಯ ವೇದಿಕೆಯಲ್ಲಿದ್ದರು.
ಕಾರ್ಯಕ್ರಮವನ್ನು ರಂಗೇರುವಂತೆ ಮಾಡಿದ ಕನ್ನಡ ಕೋಗಿಲೆ ಕಾರ್ಯಕ್ರಮ ಖ್ಯಾತಿಯ ಗಾಯಕಿ ಕಲಾವತಿದಯಾನಂದ್ ಮತ್ತು ಸರಿಗಮಪ ಸೀಸನ್ 13ರ ಗಾಯಕಿ ಪೂಜಾ ವಿಭೂತಿಮಠ್ ಸೇರಿ ಸಂಗೀತ ರಸದೌತಣವನ್ನು ಉಣಬಡಿಸಿದ್ದರು, ಇವರ ಹಾಡುಗಳಿಗೆ ಗಾಯನಕ್ಕೆ ಇಡೀ ಸಭಾಂಗಣವೇ ಕೇಕೇ, ಚಪ್ಪಾಳೆ, ಶಿಳ್ಳೇಗಳ ಮೂಲಕ ಗಾಯಕರಿಗೆ ಉತ್ತೇಜನ ಮಾಡಿದರು. ಕೆ.ಅಯ್ಯನಹಳ್ಳಿ ಗ್ರಾಮದ ಯುವಕ ವಿನಯ್ ಗ್ರಾಮ ಲೆಕ್ಕಾಧಿಕಾರಿ ಜಗಳೂರು ಇವರು ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ಹೊತ್ತು ಸೊಗಸಾಗಿ ನಿಭಾಯಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಬಹಳ ಅಚ್ಚುಕಟ್ಟಾಗಿ ನೆರವೇರಿದ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸ್ವರ ಶ್ರಧ್ಧಾಂಜಲಿ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಅಪ್ಪಾಜಿ, ಪಟ್ಟಣಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಮಶೆಟ್ಟಿ ಕೊಟ್ರೇಶಿ, ವಿನುತಾಪಾಟೀಲ್ ಶಿವಪ್ರಿತಮ್, ಬಿ.ಯಸ್.ಪ್ರಶಾಂತ್, ಜರ್ನಾಧನಶೆಟ್ಟಿ, ಎನ್.ಎಂ.ಕೊಟ್ರಯ್ಯ ಎನ್.ಎಂ.ಹೇಮಾ, ಕೊಟ್ರೇಶ್‌ಪಾಟೀಲ್, ಸಂತೋಷ್, ವಿನಯ್, ಸಚಿನ್, ಸೇರಿದಂತೆ ಅನೇಕರು ಕಾರ್ಯಕ್ರಮ ಯಶ್ವಸ್ವಿಯಾಗಲು ಹಗಲಿರುಳು ಸಾಕಷ್ಟು ಶ್ರಮಿಸಿದ್ದಾರೆ.