ಅಮೃತ ಜೀವನ ಅಭಿನಂದನಾ ಗ್ರಂಥ ಸಮರ್ಪಣೆ

ಮಹಾಲಿಂಗಪೂರ17: ಸಹಜಯೋಗಿ ಸದ್ಗುರು ಸಹಜಾನಂದ ಶ್ರೀಗಳ ಅಮೃತ ಮಹೋತ್ಸವದ 2ನೇ ದಿನದ ಸಮಾರಂಭದಲ್ಲಿ ವಿಜಯಪುರದ ಸಿದ್ದೇಶ್ವರ ಶ್ರೀಗಳು ಸಹಜಾನಂದ ಶ್ರೀಗಳ ಅಮೃತ ಜೀವನ ಅಭಿನಂದನಾ ಗ್ರಂಥ ಸಮರ್ಪಣೆ ಮಾಡಿದ ಈ ಸಂದರ್ಭದಲ್ಲಿ ಅಂತರಂಗ ಬಹಿರಂಗ ಶುದ್ಧಿ ಮಾಡಿಕೊಂಡು ಯಾವುದೇ ಒಳ್ಳೆಯ ಕಾರ್ಯವನ್ನು ಮಾಡಿದ್ದೆ ಆದರೆ ಅದರಲ್ಲಿ ಯಶಸ್ಸು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಉದಾಹರಣೆ ಸಹಜಾನಂದ ಶ್ರೀಗಳು, ನೂರಾರು ವರ್ಷಗಳ ಕಾಲ ಬಾಳಿಬದುಕಿ ಆಧ್ಯಾತ್ಮ ಲೋಕಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಹರಸಿ ಹಾರೈಸಿದರು. 

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು  ಅದೃಶ್ಯ ಕಾಡಸಿದ್ದೇಶ್ವರ ಶ್ರಿಗಳು  ವಹಿಸಿಕೊಂಡು ಆಶೀರ್ವಚನ ನೀಡುತ್ತ ನಮ್ಮ ಭಾರತ ದೇಶದ ಕೃಷಿ ಪದ್ಧತಿಯ ಬಗ್ಗೆ ಸ- ವಿಸ್ತಾರವಾಗಿ ರೈತರಿಗೆ ಕಿವಿಮಾತು ಹೇಳಿದರು. ನಾವೆಲ್ಲ ಪಾಶ್ಚಾತ್ಯ ವ್ಯವಸಾಯ ಪದ್ಧತಿಗೆ ಕಟಿಬಿದ್ದು ನಮ್ಮ ಪಸಲು ನೀಡುವ ಜಮೀನುಗಳನ್ನು ನಾವು ಹಾಳು ಮಾಡಿಕೊಂಡಿದ್ದೇವೆ. ಹೇಗೆ ಹಾಳು ಮಾಡಿಕೊಂಡಿದ್ದೇವೆ ಎಂದು ಸೇರಿದ ಎಲ್ಲರಿಗೂ ತಿಳಿಹೇಳಿದರು.

ಹಾಗೂ ನಮ್ಮಲ್ಲಿಯೇ ಇರತಕ್ಕಂತಹ ದೇಶಿ ಆಕಳುಗಳನ್ನು ಸಾಕಿ ಅವುಗಳ ತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸುವದರಿಂದ ಉತ್ತಮ ಫಸಲನ್ನು ಪಡೆಯಬಹುದು ಎಂದರು. ಹಾಗೂ ಸಹಜಾನಂದ ಶ್ರೀಗಳಿಗೆ ಹಾರೈಸುತ್ತಾ ಇನ್ನು ಹಲವಾರು ಆಧ್ಯಾತ್ಮ ಪ್ರಪಂಚದ ಮುನ್ನುಡಿಗೆ ಕಾರಣೀಭೂತರಾಗಬೇಕು ಎಂದರು. 

ಅಧ್ಯಾತ್ಮ ಪ್ರಪಂಚಕ್ಕೆ ದೊಡ್ಡ ಕೊಡುಗೆಯನ್ನು ನೀಡಿರುವಂತ ಶ್ರೀ ಸಹಜಾನಂದ ಸ್ವಾಮಿಗಳ ಗುಣಗಾನ ಮಾಡಿದರು. ಅವರು ಮಾಡಿರುವುಂತಹ ಆಧ್ಯಾತ್ಮ ಕಾರ್ಯ ಮಾನವ ಕುಲಕ್ಕೆ ಮಾದರಿಯಾಗಿದೆ. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಕನ್ನೇರಿಮಠ, ನೇತೃತ್ವವನ್ನು  ಮಲ್ಲಯ್ಯ ಶ್ರೀಗಳು ಗೋಡಗೇರಿ, ರುದ್ರಮುನಿ ಶಿವಾಚಾರ್ಯರು ಆಲಮಟ್ಟಿ,  ಬಸವಲಿಂಗ ಶ್ರೀಗಳು ವಿಜಯಪುರ,  ಕೈವಲ್ಯಾನಂದ ಶ್ರೀಗಳು ಗೋಡಗೇರಿ,   ಹಷರ್ಾನಂದ ಶ್ರೀಗಳು ಹುಲ್ಯಾಳ,  ಡಾ. ಶೃದ್ಧಾನಂದ ಶ್ರೀಗಳು ಸದಲಗಾ, ಸದ್ಗುರು ಶ್ರೀ ಆತ್ಮಾನಂದ ಶ್ರೀಗಳು ಕಮಕೇರಿ, ಮಾತೋಶ್ರೀ ಸುನಂದಮ್ಮಾ ಭೂಪಾಳಿ ಸುತ್ತೂರು ಹೀಗೆ ಹಲವಾರು ಮಹಾತ್ಮರು ವೇದಿಕೆಯ ಮೇಲೆ ಆಶೀನರಾಗಿದ್ದರು. 

 ಶರಣ ಗಣೇಶಾನಂದರು ಹಾಗೂ ಶರಣ ಇಬ್ರಾಹೀಂ ಸುತಾರ ಕಾರ್ಯಕ್ರಮದ ಉಪಾಧ್ಯಕ್ಷ ಡಾ. ಬಿ.ಡಿ. ಸೋರಗಾಂವಿ, ಅಲ್ಲಪ್ಪ ಗುಂಜಿಗಾಂವಿ, ಚಂದ್ರು ಮೋರೆ, ಮಲ್ಲಪ್ಪ ಭಾವಿಕಟ್ಟಿ, ಮಹಾಲಿಂಗಪ್ಪ ಜಿಟ್ಟಿ, ಗೋಲಪ್ಪ ಅಮ್ಮಣಗಿ ಇನ್ನು ಹಲವಾರು ಗಣ್ಯರಿದ್ದರು.