ಮಹಾಲಿಂಗಪುರ 18: ನಗರದಲ್ಲಿ ಸತತವಾಗಿ ನಾಲ್ಕು ದಿವಸಗಳವರೆಗೆ ಸಹಜಯೋಗಿ ಸದ್ಗುರು ಶ್ರೀ ಸಹಜಾನಂದ ಶ್ರೀಗಳ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವು ಬಹಳ ವಿಜ್ರಂಭಣೆಯಿಂದ ಸ್ಥಳೀಯ ಶ್ರೀ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.
ಕೊನೆಯ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಬೀದರ ಸಹಜಾನಂದ ಶ್ರೀಗಳ ಕುರಿತು ಮಾತನಾಡುತ್ತ ಶ್ರೀಗಳು ಶೈಕ್ಷಣಿಕವಾಗಿ ಬಹಳಷ್ಟು ಕಲಿತಿಲ್ಲವಾದರೂ ಕೂಡಾ ಸತ್ಸಂಗದ ಪರಿಸರದಿಂದ ಹಲವಾರು ಧರ್ಮ ಗ್ರಂಥಗಳನ್ನು ಬಹಳ ಶ್ರದ್ಧೆ, ಭಕ್ತಿಯಿಂದ ಹಿಂದಿ ಭಾಷೆಯಲ್ಲಿದ್ದಂತಹ ಧರ್ಮಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕಷ್ಟಸಾಧ್ಯವಾದಂತ ಕೆಲಸವಾದರೂ ಸಹ ಬಹಳ ಅಚ್ಚುಕಟ್ಟತೆಯಿಂದ ಮಾಡಿ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಆಯುರ್ರಾರೋಗ್ಯ ಶ್ರೀ ಸಿದ್ಧಾರೂಢರು ದಯಪಾಲಿಸಲಿ ಎಂದರು.
ಶ್ರೀ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ವತಿಯಿಂದ ಸಹಜಾನಂದ ಶ್ರೀಗಳನ್ನು ತುಲಾಭಾರ ಮಾಡುವ ಮುಖಾಂತರ ಗೌರವಿಸಲಾಯಿತು.
ಮೊದಲನೆ ದಿವಸ ಸಕಲ ವಾದ್ಯಗಳೊಂದಿಗೆ ಹಾಗೂ ಸುಮಂಗಲೆಯರಿಂದ ಆರತಿ, ಕುಂಭ ಮೇಳ, ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಹಲವಾರು ಗ್ರಂಥಗಳ ಹಾಗೂ ನೂರಾರು ಸ್ವಾಮೀಜಿಗಳನ್ನು ಅಶ್ವರಥಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಕರೆದು ತರುವ ಸಂಭ್ರಮ ಮಹಾಲಿಂಗಪುರದ ಜನರಲ್ಲಿ ಭಕ್ತಿಯ ದೀವಿಗೆಯನ್ನು ಹಚ್ಚಿದಂತಾಯಿತು. ನಂತರದ ದಿನಗಳಲ್ಲಿ ಸಾಂಸ್ಕೃತಿಕ ಭವನದಲ್ಲಿ 7 ವಿಷಯಗಳ ಮೇಲೆ ಹಲವಾರು ಖ್ಯಾತಿವೆತ್ತ ಸ್ವಾಮೀಜಿಗಳು, ಧರ್ಮಚಿಂತಕರು ಪ್ರವಚನದ ಮೂಲಕ ತಮ್ಮ ಅಮೂಲ್ಯ ವಾಣಿಯನ್ನು ಸದ್ಭಕ್ತರಿಗೆ ಉಣಬಡಿಸಿದರು.
ಈ ಶುಭ ಸಂದರ್ಭದಲ್ಲಿ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹೊಸದುರ್ಗ, ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಮುಚಳಂಬಾ, ಶ್ರೀ ಸಹಜಾನಂದ ಅವಧೂತ ಮಹಾಸ್ವಾಮಿಗಳು ಜಮಖಂಡಿ, ಶ್ರೀ ಪ್ರಭಾನಂದ ಮಹಾಸ್ವಾಮಿಗಳು ಬೆಳಗಾವಿ, ಶ್ರೀ ಅತ್ಯಾನಂದ ಮಹಾಸ್ವಾಮಿಗಳು ಗೋಕಾಕ, ಮಾತಾಶ್ರೀ ಲಕ್ಷ್ಮೀ ತಾಯಿಯವರು ಕಲಬುಗರ್ಿ, ಮಾತಾಶ್ರೀ ಅಕ್ಕಮಹಾದೇವಿಯವರು ಗದಗ, ಮಾತಾಶ್ರೀ ಸಿದ್ಧೇಶ್ವರಿ ಮಾತಾಜಿ ಬೀದರ, ಮಾತಾಶ್ರೀ ಯೋಗೀಶ್ವರಿ ತಾಯಿಯವರು ಬುಣಾಪೂರ, ಶ್ರೀ ನಿತ್ಯಾನಂದ ಮಹಾಸ್ವಾಮಿಗಳು ರೂಗಿ, ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಮುನವಳ್ಳಿ ಹಾಗೂ ಹಲವಾರು ಹಾಲಿ-ಮಾಜಿ ಜನಪ್ರತಿನಿಧಿಗಳು, ವಿಧಾನ ಪರಿಷತ್ ಸದಸ್ಯರುಗಳು, ಜಿಲ್ಲಾಡಳಿತದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ವಿಶೇಷ ಆಮಂತ್ರಿತರು, ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ದಿ. 18 ರವಿವಾರ ದಿವಸ ಇದೇ ಸಾಂಸ್ಕೃತಿಕ ಭವನದಲ್ಲಿ ಸಮಾರೋಪ ಸಮಾರಂಭವು ಕೂಡಾ ಜರುಗಿ ಬಂದಿತು. ಈ ಸಮಾರಂಭದಲ್ಲಿ ಸತ್ಕಾರ ಸಮಾರಂಭವನ್ನು ಕೂಡಾ ಸೇರಿದ ಎಲ್ಲ ಶ್ರೀಗಳ ಮುಖಾಂತರ ಕೈಗೊಳ್ಳಲಾಯಿತು. ಇದರಲ್ಲಿ ಹಲವಾರು ಸ್ವಾಮೀಜಿಗಳನ್ನು ಕೂಡಾ ಈ ಕಾರ್ಯಕ್ರಮದ ಕಮೀಟಿ ವತಿಯಿಂದ ಸತ್ಕರಿಸಲಾಯಿತು.
ಇಡೀ ಈ ಕಾರ್ಯಕ್ರಮದ ರೂಪು-ರೇಷೆಯನ್ನು ಎಳೆ ಎಳೆಯಾಗಿ ಜನರಿಗೆ ಪತ್ರಿಕಾ ಮಾಧ್ಯಮದ ಮುಖಾಂತರ ತಿಳಿಸಿದ ಪತ್ರಿಕಾ ವರದಿಗಾರರನ್ನು ಮತ್ತು ನಗರದ ಸರ್ವ ಸಮಾಜದ ಹಿರಿಯರು ಹಾಗೂ ಸದ್ಗುರು ಸದನ ಕಟ್ಟಡ ದಾನಿಗಳು, ಮಹಾತ್ಮರ ಪಾದಪೂಜೆ ಮಾಡಿದ ದಂಪತಿಗಳು, ಗ್ರಂಥ ಮುದ್ರಣ ದಾನಿಗಳು, ಮಹಾಪ್ರಸಾದ ದಾನಿಗಳು, ರುದ್ರಾಕ್ಷಿ ಕಿರಿಟ ದಾನಿಗಳು ಹಾಗೂ ಮಹೋತ್ಸವದ ಇನ್ನಿತರ ದಾನಿಗಳು, ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು ಕೂಡಾ ಈ ಸಂದರ್ಭದಲ್ಲಿ ಸನ್ಮಾನಿಸಿ ಹಾರೈಸಲಾಯಿತು.
ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶಂಕರಾರೂಢ ಮಹಾಸ್ವಾಮಿಗಳು, ಅಧ್ಯಕ್ಷರಾದ ಸದಾಶಿವ ಗುರೂಜಿ, ಕಾರ್ಯದಶರ್ಿಗಳಾದ ಮಾರುತಿ ಶರಣರು, ಸದಸ್ಯರುಗಳಾದ ಡಾ|| ಬಸವರಾಜ ಡಿ. ಸೋರಗಾಂವಿ, ಅಲ್ಲಪ್ಪ ಗುಂಜಿಗಾಂವಿ, ಬಾಬುಮೇಸ್ತ್ರಿ ಹಾದಿಮನಿ, ಚಂದ್ರಶೇಖರ ಮೋರೆ, ಮಲ್ಲಪ್ಪ ಭಾಂವಿಕಟ್ಟಿ, ಶಾಮಾನಂದ ಪೂಜೇರಿ, ಗುರುಪಾದ ಅಂಬಿ, ಎಸ್. ಕೆ. ಗಿಂಡೆ, ಲಕ್ಕಪ್ಪ ಚಮಕೇರಿ, ಮಲ್ಲಪ್ಪ ಕಟಗಿ, ಗೋಲೇಶ ಅಮ್ಮಣಗಿ, ಅಶೋಕ ಬಾಣಕಾರ, ಸಿದ್ದಪ್ಪ ಧಡೂತಿ, ಮಹಾಲಿಂಗಪ್ಪ ಜಿಟ್ಟಿ, ಪರಪ್ಪ ಬೆಳಗಲಿ, ಮಹೇಶ ಬಡಿಗೇರ, ಕಾರ್ಯಕ್ರಮದ ಯಶಸ್ವಿಗೆ ಪರೋಕ್ಷ ಹಾಗೂ ಅಪರೋಕ್ಷ ಎಲ್ಲರಿಗೂ ಈ ಮೂಲಕ ಕಾರ್ಯಕ್ರಮದ ಸಂಚಾಲಕರಾದ ಶರಣಶ್ರೀ ಗಣೇಶಾನಂದರು ಹಾಗೂ ಪದ್ಮಶ್ರೀ ಇಬ್ರಾಹೀಂ ಸುತಾರ ಕೃತಜ್ಞತೆಯನ್ನು ಸಲ್ಲಿಸಿದರು