ಅಂಬೇಡ್ಕರ್ ಜೀವನಾಧಾರಿತ ಅಪರೂಪದ ಹಾಗೂ ಸಂಗ್ರಹಯೋಗ್ಯ ದಿನದರ್ಶಿಕೆ ಬಿಡುಗಡೆ

Ambedkar Lifetime Rare & Collectable Diary Released

ಅಂಬೇಡ್ಕರ್ ಜೀವನಾಧಾರಿತ ಅಪರೂಪದ ಹಾಗೂ ಸಂಗ್ರಹಯೋಗ್ಯ ದಿನದರ್ಶಿಕೆ ಬಿಡುಗಡೆ  

ವಿಜಯಪುರ 07 : ಬೌದ್ಧ ವಿಹಾರ ನಿರ್ಮಾಣ ಸಮಿತಿ ಪ್ರಕಟಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನಾಧಾರಿತ "ಧಮ್ಮಚಕ್ರ ಪರಿವರ್ತನ" ಎಂಬ ಹೆಸರಿನ ಬಹಳ ವಿಶೇಷ, ಅಪರೂಪದ ಹಾಗೂ ಸಂಗ್ರಹಯೋಗ್ಯ 2025ರ ದಿನದರ್ಶಿಕೆಯನ್ನು ನಗರದ ಜಲನಗರದಲ್ಲಿರುವ ಬುದ್ಧವಿಹಾರದಲ್ಲಿ ಬಿಡುಗಡೆಗೊಳಿಸಲಾಯಿತು. 

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಕಾಂಗ್ರೇಸ್ ಯುವನಾಯಕಿಯೂ ಆಗಿರುವ ಕು.ಆರತಿ ಶಹಾಪೂರ ಅವರು ಮಾತನಾಡಿ ಇದೊಂದು ಬಹಳ ಅಪರೂಪದ ಹಾಗೂ ಸಂಗ್ರಹಯೋಗ್ಯ ದಿನದರ್ಶಿಕೆಯಾಗಿದ್ದು, ಇಂತಹ ಪ್ರಯತ್ನ ನಿಜಕ್ಕೂ ಪ್ರಶಂಸನೀಯವಾಗಿದೆ. ಇದು ಒಂದರ್ಥದಲ್ಲಿ ಅಂಬೇಡ್ಕರ್ ನಿತ್ಯಸ್ಮರಣೆಗೂ ಸಾಕ್ಷಿಯಾಗಿದೆ ಎಂದು ಅವರು ಮುಕ್ತಕಂಠದಿಂದ ಶ್ಲಾಘಿಸಿದರು. 

2006 ರಿಂದಲೂ ಇಂತಹದೊಂದು ಬಹಳ ವಿಶೇಷವಾದ ದಿನದರ್ಶಿಕೆಯನ್ನು ಪ್ರಕಟಿಸಲಾಗುತ್ತಿದ್ದು, ವರ್ಷದ 365 ದಿನಗಳೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಟುವಟಿಕೆಯ ಮಾಹಿತಿ ಹೊಂದಿರುವುದು ಈ ದಿನದರ್ಶಿಕೆಯ ವೈಶಿಷ್ಠ್ಯವಾಗಿದೆ. ಇದು ಪ್ರತಿ ಅಂಬೇಡ್ಕರ್ ಅನುಯಾಯಿ ಹಾಗೂ ಅಭಿಮಾನಿಯ ಮನೆಯಲ್ಲೂ ಇರಲೇಬೇಕಾದ ದಿನದರ್ಶಿಕೆಯಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಬಾಬುಗೌಡ ಬಿರಾದಾರ, ಹಮೀದ್ ಮುಷ್ರೀಫ್, ಜಕ್ಕಪ್ಪ ಎಡವೆ, ಸೋಮನಾಥ ಕಳ್ಳಿಮನಿ, ಫಯಾಜ ಕಲಾದಗಿ, ಅಡಿವೆಪ್ಪ ಸಾಲಗಲ್ಲ, ಶ್ರೀನಾಥ ಪೂಜಾರಿ, ಸುಭಾಸ ಗುಡಿಮನಿ, ಸುರೇಶ ಗೊಣಸಗಿ, ಇರ್ಫಾನ್ ಶೇಖ, ಪ್ರೊ. ಎಂ.ಬಿ. ಯಂಕಂಚಿ, ಮಲ್ಲು ಬಿದರಿ, ರಮೇಶ ಆಸಂಗಿ, ವಿನಾಯಕ ಗುಣಸಾಗರ, ಸಂಜು ಕಂಬಾಗಿ, ಅಶೋಕ ಚಲವಾದಿ, ಶರಣು ಸಿಂಧೆ, ಸಿದ್ದು ರಾಯಣ್ಣವರ, ಸಿದ್ಧಲಿಂಗ ಬಾಗೇವಾಡಿ, ಭರತಕುಮಾರ, ಕುಮಾರ ಶಹಾಪುರ, ನಾಗರಾಜ ಲಂಬು, ಬಿ.ಎಸ್‌. ಗಸ್ತಿ, ಅನೀಲ ಹೊಸಮನಿ, ಸಂಘರ್ಷ ಹೊಸಮನಿ, ರಾಜು ತೊರವಿ, ಆನಂದ ಓದಿ, ಸುನೀಲ ಸೂರ್ಯವಂಶಿ, ಮಂಜುನಾಥ.ಎಸ್‌.ಕಟ್ಟಿಮನಿ ಸೇರಿದಂತೆ ಮುಂತಾದವರು ಇದ್ದರು.