ಪೋಷಕರ ಪತ್ತೆಗೆ ಮನವಿ
ಬಳ್ಳಾರಿ 08:ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಇಮಡಾಪುರ ಹತ್ತಿರ ಅನುನ್ ತಂದೆ ವರುಣ್(ಅರುಣ್) ಎನ್ನುವ 08 ವರ್ಷದ ಬಾಲಕನು ಪತ್ತೆಯಾಗಿದ್ದು, ಬಳ್ಳಾರಿಯ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲು ಮಾಡಿಕೊಳ್ಳಲಾಗಿದೆ. ಪೋಷಕರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿಯ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಮನವಿ ಮಾಡಿದ್ದಾರೆ.ಬಾಲಕನು ಮಹಾರಾಷ್ಟ್ರದ ಮಾನ್‌ಗಾವ್‌ನ ಜವುಲಿ ಗ್ರಾಮ ಎಂದು ಹೇಳುತ್ತಾನೆ. ಕಪ್ಪು ಮೈ ಬಣ್ಣ, ಬಲ ಹೆಬ್ಬೆಟ್ಟಿನ ಉಗುರು ಕಪ್ಪಾಗಿದ್ದು, ಹಿಂದಿ ಭಾಷೆ ಮಾತನಾಡುತ್ತಾನೆ.
ಎತ್ತರ 132 ಸೆಂ.ಮೀ., ತೂಕ 24.5 ಗ್ರಾಂ ಇದ್ದು, ಬಾಲಕನು ದೊರೆತಾಗ ಧರಿಸಿದ ಬಟ್ಟೆ ಬಿಳಿಶರ್ಟ್, ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಬಾಲಕನ ಪೋಷಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿಯ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರ ಮೊ.9743343138 ಅಥವಾ ಕಂಟೋನ್‌ಮೆಂಟ್‌ನ ಶಾಂತಿಧಾಮ ಆವರಣದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂ.08392-297436, ಆಪ್ತ ಸಮಾಲೋಚಕರ ಮೊ.8880466645 ಹಾಗೂ ಗೃಹಪಾಲಕರ ಮೊ.9538177767 ಮಾಹಿತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.