ಎಲಿಷಾ ಎಲಕಪಾಟಿಗೆ ಅಂಬೇಡ್ಕರ್ ಫೆಲೋಶಿಪ್ ನ್ಯಾಶನಲ್ ಅವಾರ್ಡ

ಕಾರವಾರ 14: ಕನರ್ಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಅವರಿಗೆ ಭಾರತಿಯ ದಲಿತಾ ಸಾಹಿತ್ಯ ಅಕಾಡೆಮಿ ನೀಡುವ ಡಾ.ಅಂಬೇಡ್ಕರ್ ಫೆಲೋಶಿಲ್ ನ್ಯಾಶನಲ್ ಅವಾರ್ಡ ನೀಡಲಾಗಿದೆ. ಈಚೆಗೆ ನವದೆಹಲಿಯಲ್ಲಿ ನಡೆದ  34 ನೇ ಭಾರತಿಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎಲಿಷಾ ಅವರಿಗೆ ನೇಪಾಳದ ಸಂಸ್ಕೃತಿ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು. 

ಕೇಂದ್ರದ ಸಚಿವರು, ಶ್ರೀಲಂಕಾದ ಸಂಸ್ಕೃತಿ ಸಚಿವರು ಹಾಗೂ  ಭಾರತಿಯ ದಲಿತಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಸ್.ಪಿ. ಸುಮನ್ಕಶೇಕರ ಇದ್ದರು. ಎಲಿಷಾ ಅವರಿಗೆ  ದಲಿತರ ಪರ ಭೂಮಿ, ವಸತಿ ಮತ್ತು ಜಾಗೃತಿ ಹೋರಾಟ ಹಾಗೂ ದಲಿತರಲ್ಲಿ ಶಿಕ್ಷಣದ ಅರಿವು ಮೂಡಿಸುವುದಕ್ಕಾಗಿ ಶ್ರಮಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. 

ಉತ್ತರ ಕನ್ನಡದಲ್ಲಿ ದಲಿತರ ಸಂಘಟನೆ ಮತ್ತು ಒಗ್ಗಟ್ಟು ಮೂಡಿಸಲು ಸತತ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಎಲಿಷಾ ಎಲಕಪಾಟಿ ಶ್ರಮಜೀವಿಯಾಗಿದ್ದು, ಹಂತ ಹಂತವಾಗಿ ಮೇಲೆ ಬಂದಿರುವುದನ್ನು ಗಮನಿಸಿ ಡಾ.ಅಂಬೇಡ್ಕರ್ ಫೆಲೋಶಿಪ್ ನ್ಯಾಶನಲ್ ಅವಾರ್ಡಗೆ ಆಯ್ಕೆ ಮಾಡಲಾಗಿತ್ತು. 

ಡಿ.9-10 ರಂದು ನವದೆಹಲಿಯಲ್ಲಿ ನಡೆದ   34 ನೇ ಭಾರತಿಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ.