ವೈ.ಬಿ.ಕಡಕೋಳರಿಗೆ ಅಕ್ಷರಲೋಕದ ನಕ್ಷತ್ರ ಪ್ರಶಸ್ತಿ

ಲೋಕದರ್ಶನ ವರದಿ

ಸವದತ್ತಿ 03:  ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಐಇಆರ್ಟಿ ಯಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳರಿಗೆ ಇತ್ತೀಚಿಗೆ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಮೇದಕ ಗ್ರಾಮದಲ್ಲಿ ಜರುಗಿದ ಮೂರನೆಯ ಕಲ್ಯಾಣ ಕನರ್ಾಟಕ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರ ಕೃತಿ ಚರಿತ್ರೆಗೊಂದು ಕಿಟಕಿ(ಸ್ಥಳನಾಮ ಅಧ್ಯಯನ) ಗೆ ಅಕ್ಷರ ಲೋಕದ ನಕ್ಷತ್ರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷೆ ಡಾ.ಚಂದ್ರಕಲಾ ಬಿದರಿ, ಸಂತೋಷಿ ರಾಣಿ ತೇಲ್ಕೂರ, ಗುರುಮಿಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಂಪಿಯ ಸಮ್ಮೇಳನದ ಮಾರ್ಗದರ್ಶಕ ಸಂಘಟಕ ಕೆ.ಮೊಗಲಪ್ಪ ಯಾನಾಗುಂದಿ, ಲಕ್ಷ್ಮೀ ಮೊಗಲಪ್ಪ, ಬಸವರಾಜ ಕಲೆಗಾರ, ಮಲ್ಲಿಕಾಜರ್ುನ ಪಾಟೀಲ, ಡಾ.ಲಿಂಗಣ್ಣ ಗೋನಾಳ, ಅಕ್ಬರ್ ಕಾಲಿಮಿಚರ್ಿ, ನಿಂಗಣ್ಣ ದೇಸಾಯಿ, ಮೆಹಬೂಬ್ ಪಾಶಾ ಮಕಾನದಾರ ಮೊದಲಾದವರು ಉಪಸ್ಥಿತರಿದ್ದರು.