ಅಲ್ಲಮಪ್ರಭು ಆಧ್ಯಾತ್ಮಿಕ ಲೋಕದ ಚಿಂತಕ: ತಡವಲ
ದೇವರಹಿಪ್ಪರಗಿ 31: ಅಲ್ಲಮಪ್ರಭು ಆಧ್ಯಾತ್ಮಿಕ ಲೋಕದ ಚಿಂತಕ ಎಂದು ಬಸವ ಶರಣ ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ಸಂಗಪ್ಪ.ಎನ್. ತಡವಲ ಹೇಳಿದರು.
ಪಟ್ಟಣದ ಕರಿದೇವರ ದೇವಸ್ಥಾನದ ಆವರಣದಲ್ಲಿ ಅಲ್ಲಮಪ್ರಭು ಜಯಂತಿ ಹಾಗೂ ಯುಗಾದಿ ಹಬ್ಬದ ಆಚರಣೆಯ ಪ್ರಯುಕ್ತ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಲಮಪ್ರಭು ದೇವರು 12ನೇ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು ಹಾಗೂ ಶಿವಶರಣರಲ್ಲಿ ಅಲ್ಲಮಪ್ರಭು ಪ್ರಮುಖರು. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವ ಮಂಟಪದ ಶೂನ್ಯ ಸಿಂಹಾಸನದ ಅಧ್ಯಕ್ಷರಾಗಿದ್ದರು. ಬಸವಣ್ಣನವರ ಸಮಕಾಲೀನನಾದ ಇವರು, ತಮ್ಮ ವಚನಗಳಲ್ಲಿ ಗಹನವಾದ ಅಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ತಿಳಿಸಿದರು.
ಪಟ್ಟಣದ ಪ್ರಮುಖರಾದ ಮಲ್ಲು ಹಡಪದ, ಮಲ್ಲಪ್ಪ ಅಗಸರ, ಅರುಣ ಬದ್ರಗೊಂಡ, ಶ್ರೀಶೈಲ ಮಂಗಳೂರು, ಕಿರಣ್ ವಂದಾಲ, ಬಸಪ್ಪ ಕುಂಬಾರ, ಅನಿಲ್ ಜಡಗೊಂಡ, ರಾಗು ಬಾವಿಮನಿ, ಗಣೇಶ್ ಮಿಂಚಿನಾಳ ಸೇರಿದಂತೆ ಪಟ್ಟಣದ ಗಣ್ಯರು, ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.