ಸಂಪಗಾವಿ 14: ಈ ಹಿಂದೆ 1990ರಲ್ಲಿ ವಿಧ್ಯಾಥರ್ಿಗಳ ಪರೀಕ್ಷೆ ಬರೆಯುವ ದಿನದಂದೇ ಅವರ ಮುಂದಿನ ತರಗತಿಯ ವಿದ್ಯಾಥರ್ಿಗಳ ಪುಸ್ತಕಗಳನ್ನು ಅರ್ಧ ಬೆಲೆಗೆ ಮುಂಗಡವಾಗಿ ಖರೀದಿಸುತ್ತಿದ್ದರು. ಆ ಪರಿಸ್ಥಿತಿಯಲ್ಲಿ ಓದಿ ಬಹಳ ಜನ ಸಾಧನೆ ಮಾಡಿದರು. ಆದರೆ ಈಗ ಸಕರ್ಾರ ವಿದ್ಯಾಥರ್ಿಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡಿದರೂ ಯಾರೂ ಸಾಧನೆ ಮಾಡುತ್ತಿಲ್ಲ ಎಂಬುದು ಅತಿ ಕಳವಳದ ವಿಷಯ ಎಂದು ಶಿಕ್ಷಕ ಶಹಾಪೂರಮಠ ವಿಷಾದ ವ್ಯಕ್ತಪಡಿಸಿದರು.
ಅವರು ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗ, ತಾಲೂಕಾ ಕಾನೂನು ಸೇವೆ, ವಕೀಲರ ಸಂಘ, ಶಿಕ್ಷಣ ಇಲಾಖೆ ಬೈಲಹೊಂಗಲ ಇವರ ಸಹಯೋಗದೊಂದಿಗೆ ಶಾರದಾ ವಿದ್ಯಾಲಯ, ಕಠಾಪೂರಿಮಠ ಆವರಣ ಸಂಪಗಾವಿಯಲ್ಲಿ ಇತ್ತೀಚೆಗೆ ಜರುಗಿದ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾನವ ಹಕ್ಕು ಮತ್ತು ಜವಾಬ್ದಾರಿ ಬಗ್ಗೆ ಉದಾಹರಣೆ ಮೂಲಕ ಮಾಮರ್ಿಕವಾಗಿ ಮಾತನಾಡಿದರು. ಉದ್ಘಾಟಕರಾಗಿ ಸಕರ್ಾರಿ ಕಾನೂನು ಅಭಿಯೋಜಕರಾದ ರಂಜನಾ ಪಾಟೀಲ, ವಕೀಲ ಸಂಘದ ಅಧ್ಯಕ್ಷರು ಎಮ್.ಆರ್. ಮೆಳವಂಕಿ ಸಕರ್ಾರಿ ವಕೀಲ ಆರ್.ಎಸ್. ಕೋಲಕಾರ, ಗದಗ, ವಿಜಯಲಕ್ಷ್ಮೀ ಹಿರೇಮಠ, ಸೊಪ್ಪಿನ ಆಗಮಿಸಿದ್ದರು. ರಂಜನಾ ಪಾಟೀಲರು ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರು.
ಮಾನವರಿಂದಲೇ ಮಾನವರ ಮೇಲೆ ದೌರ್ಜನ್ಯ ಕಾಣಿಸಿಕೊಂಡಾಗ ಮಾನವ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಮಾನವ ಹಕ್ಕುಗಳ ಕಾನೂನುಗಳನ್ನು ಮಾಡಿ, ಅದರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಎಂದು ಮಕ್ಕಳ ಹಕ್ಕುಗಳ ಬಗ್ಗೆ ಸಂಪನ್ಮೂಲ ಅಧಿಕಾರಿ ಎಸ್.ಎಸ್.ದೇಶನೂರ ಶಿಕ್ಷಕರು ವಿವರಿಸಿದರು.
ಎಲ್ಲಿಯಾದರೂ ಮಾನವ ಹಕ್ಕುಗಳ ಬಗ್ಗೆ ಉಲ್ಲಂಘನೆ ಕಂಡುಬಂದರೆ ನಾಗರಿಕರು ಮಾನವ ಹಕ್ಕುಗಳ ಆಯೋಗ ಇವರಿಗೆ ಪತ್ರದ ಮೂಲಕ ತಿಳಿಸಬಹುದು ಎಂದು ಆರ್.ಎಸ್.ಕೋಲಕಾರ ಸಕರ್ಾರಿ ವಕೀಲರು ವಿವರಿಸಿದರು.
ಗದಗ ವಕೀಲರು ಮಾತನಾಡಿ, ಸೊಪ್ಪಿನ ವಕೀಲರು ವಿದ್ಯಾಥರ್ಿ ಜೀವನದಲ್ಲಿ ಯಾವುದೇ ಚಟಗಳಿಗೆ ದಾಸರಾಗದೇ ಆದರ್ಶ ವಿಧ್ಯಾಥರ್ಿಗಳಾಗಿ ಮತ್ತು ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ಮಾಹಿತಿ ಇರಲಿ ಎಂದು ನಗೆಹನಿಯ ಮೂಲಕ ವಿಧ್ಯಾಥರ್ಿಗಳನ್ನು ರಂಜಿಸಿದರು.
ಕಾರ್ಯಕ್ರಮ ಸಂಯೋಜಕ ಚನ್ನಬಸಯ್ಯ ಕಠಾಪೂರಿಮಠ, ಕಾರ್ಯಕ್ರಮ ತಡವಾಗಿ ಶುರುವಾಗಿದ್ದಕ್ಕೆ ಕ್ಷಮೆ ಕೇಳಿದರು. ಸಭಿಕರು ಬಿಸಿಲಿನಲ್ಲಿ ಕುಳಿತಿದ್ದು ಒಳ್ಳೆಯದು, ಬೇಜಾರು ಮಾಡಿಕೊಳ್ಳಬೇಡಿ ಎಂದು ವಿನಂತಿಸಿದರು. ಭೂಮಿ ಸದಾ ಸೂರ್ಯನ ಬಿಸಿಲನ್ನು ಅನುಭವಿಸುತ್ತಿದೆ, ಮಾನವರಾದ ನಾವು ಕೂಡ ಬಿಸಿಲಿನಲ್ಲಿ ಬೆಳೆಯಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಮೆಳವಂಕಿ 70 ವರ್ಷಗಳಿಂದ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನವ ಹಕ್ಕುಗಳ ಅರಿವು ಎಲ್ಲರಿಗೆ ಇರಬೇಕು. ಸಕರ್ಾರ ಜನರಿಗಾಗಿ ಹಲವಾರು ಯೋಜನೆೆ ಮತ್ತು ಕಾನೂನುಗಳನ್ನು ಒದಗಿಸಿಕೊಡುತ್ತದೆ. ಉದಾಹರಣೆಗಾಗಿ ಉಚಿತ/ಕಡ್ಡಾಯ ಶಿಕ್ಷಣ ಹೊಂದುವ ಹಕ್ಕು, ಉಚಿತವಾದ, ಆರೋಗ್ಯ, ಆಹಾರ, ವಸತಿ, ಸಂವಿಧಾನದ ಬದುಕುವ, ಬದುಕಿಸುವ ಹಕ್ಕನ್ನು ಕೊಟ್ಟಿದೆ, ಬಡವರಿಗಾಗಿ ಉಚಿತ ಕಾನೂನು ಸೇವೆಯನ್ನು ಪಡೆಯಬಹುದು ಎಂದು ವಿವರಿಸಿದರು.
ಕೆ. ಈ. ಗಡಾದ ಪ್ರಾರ್ಥನೆ ಮಾಡಿದರು. ಅಂಗನವಾಡಿಯ ಕಾರ್ಯಕತರ್ೆ ಗೀತಾ ಭಜಂತ್ರಿ ಸ್ವಾಗತ ಗೀತೆಯ ಮೂಲಕ ಸ್ವಾಗತಿಸಿದರು. ಯು.ಬಿ. ತಲ್ಲೂರ ಶಿಕ್ಷಕರು ನಿರೂಪಣೆ ಮಾಡಿದರು. ಕುಮಾರಿ ಉಳ್ಳೆಗಡ್ಡಿ ಶಿಕ್ಷಕರು ವಂದನಾರ್ಪಣೆಯನ್ನು ಮಾಡಿದರು.
ಕಲಾವತಿ ಹಿರೇಮಠ ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು, ಸರಕಾರಿ ಕಾಲೇಜು ವಿಧ್ಯಾಥರ್ಿಗಳು, ಆರ್.ಇ.ಎಸ್. ಹೈಸ್ಕೂಲ, ಶಾರಧಾ ವಿಧ್ಯಾಲಯದ ವಿಧ್ಯಾಥರ್ಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎಲ್ಲರಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು.