ಗದಗ27: ಜನರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ತ್ವರಿತ ನ್ಯಾಯ ಒದಗಿಸಲು ಸರ್ವ ಪ್ರಯತ್ನಗಳು ನಡೆಯುತ್ತಿದ್ದು ಗದುಗಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಒಂದು ಉತ್ತಮ ಹೆಜ್ಜೆಯಾಗಿದೆ ಎಂದು ಕನರ್ಾಟಕ ಉಚ್ಛ ನ್ಯಾಯಾಲಯದ ಹಾಗೂ ಗದಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂತರ್ಿಗಳಾದ ಆರ್. ದೇವದಾಸ್ ನುಡಿದರು.
ಗದುಗಿನ ಹುಬ್ಬಳ್ಳಿ ರಸ್ತೆಯಲ್ಲಿ ಗದಗ ಜಿಲ್ಲಾ ನ್ಯಾಯಾಲಯದ ಮುಖ್ಯ ಕಟ್ಟಡಕ್ಕೆ 7.63 ಕೋಟಿ ವೆಚ್ಚದಲ್ಲಿ ನಿಮರ್ಾಣಗೊಂಡ 2ನೇ ಹಾಗೂ 3 ಮಹಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೇಶದ ನ್ಯಾಯ ವ್ಯವಸ್ಥೆ ಹಲವಾರು ಕೊರತೆಗಳ ಮಧ್ಯೆಯೂ ಉತ್ತಮ ನ್ಯಾಯದಾನಕ್ಕೆ ಪ್ರಯತ್ನಗಳು ನಡೆದಿವೆ. ಮೂಲಭೂತ ಸೌಕರ್ಯಗಳ ಒದಗಿಸುವುದರ ಜೊತೆಗೆ ಜನರಲ್ಲಿ ಕಾನೂನು ಜಾಗೃತಿ ಕಾರ್ಯಗಳು ಜರುಗುತ್ತಿರುವುದು. ನ್ಯಾಯ ವ್ಯವಸ್ಥೆ ಚುರುಕಾಗಲು ಪೂರಕವಾಗಿವೆ. ಜನರ ಕಷ್ಟ ಕಾರ್ಪಣ್ಯಗಳಿಗೆ ರಾಜ್ಯ ಸಕರ್ಾರದ ಆಡಳಿತ ವ್ಯವಸ್ಥೆ ಜೊತೆಗೆ ನ್ಯಾಯಾಂಗವೂ ಕೂಡಾ ತೀವ್ರವಾಗಿ ಸ್ಪಂದಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದ ನ್ಯಾಯಮೂತರ್ಿ ಆರ್. ದೇವದಾಸ್ ಗದಗ ಜಿಲ್ಲಾ ನ್ಯಾಯಾಲಯದ ಮೂಲಭೂತ ಸೌಲಭ್ಯಗಳ ಒದಗುವಿಕೆಯಿಂದ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ ಜಿಲ್ಲಾ ನ್ಯಾಯಾಲಯದ 2ನೇ ಮತ್ತು 3 ನೇ ಅಂತಸ್ತಿನ ಕಾಮಗಾರಿ ಪೂರ್ಣಗೊಳ್ಳುವಿಕೆಯಿಂದ 6 ನ್ಯಾಯಾಲಯಗಳು ನ್ಯಾಯದಾನ ಮಾಡಲು ಅಗತ್ಯ ಮೂಲ ಸೌಲಭ್ಯ ಒದಗಿಸಿದಂತಾಗಿದೆ. ಈ ಸಂಕೀರ್ಣದಲ್ಲಿ ನಿಮರ್ಿಸಲಾದ ಸಾಕ್ಷಿದಾರರ ಕಟ್ಟಡ ಬಳಕೆಯಾಗದೇ ಇರುವುದು ಸರಿಯಲ್ಲ. ಇಡೀ ನ್ಯಾಯದಾನದ ವ್ಯವಸ್ಥೆಯ ಸತ್ಯ ನ್ಯಾಯ ಶೋಧನೆಗೆ ಮುಖ್ಯರಾದ ಸಾಕ್ಷಿದಾರರಿಗೆ ಅನುಕೂಲವಾಗುವಂತೆ ವಿಟ್ನೆಸ್ ಲಾಂಚ್ ದಲ್ಲಿ ತಕ್ಷಣವೇ ಅಗತ್ಯದ ಮೂಲಸೌಲಭ್ಯ ಒದಗಿಸುವ ಮೂಲಕ ಉದ್ದೇಶ ಈಡೇರಬೇಕು. ಜಿಲ್ಲಾ ನ್ಯಾಯವಾದಿಗಳ ಸಂಘದ ಕಟ್ಟಡದ 2 ನೇ ಮಹಡಿ ಕಟ್ಟಡಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಅಗತ್ಯ ಅನುದಾನ ಬಿಡುಗಡೆಗೆ ಹಾಗೂ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ನೀರು ಪೂರೈಕೆ ವ್ಯವಸ್ಥೆಗೆ ಪ್ರಯತ್ನಿಸುವುದಾಗಿ ಎಚ್.ಕೆ.ಪಾಟೀಲ ನುಡಿದರು.
ಆರಂಭದಲ್ಲಿ ಸರ್ವರನ್ನು ಸ್ವಾಗತಿಸಿದ ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಹಾಗೂ ನ್ಯಾಯವಾದಿಗಳ ಕಟ್ಟಡಗಳಿಗೆ ಅಗತ್ಯವಿರುವ ಹೆಚ್ಚುವರಿ ಸೌಲಭ್ಯಗಳ ಕುರಿತು ಬೇಡಿಕೆ ಮಂಡಿಸಿದರು.
ಗದುಗಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್. ಸಂಗ್ರೇಶಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಉಪಸ್ಥಿತರಿದ್ದರು. ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ನರಸಿಂಸಾಎಮ್.ವಿ. ಅವರು ಸೇರಿದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಸಿ.ಎಚ್. ಸಮಿಉನ್ನಿಸಾ ಅಬ್ರಾರ, ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಕಾರ್ಯದಶರ್ಿ ರೇಣುಕಾ ಕುಲಕಣರ್ಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಆರ್.ಕೆ. ಕಾಗದಗಾರ, ಖಜಾಂಚಿ ಎಮ್.ಎಸ್. ಕಾರಡಗಿ, ಜಂಟಿ ಕಾರ್ಯದಶರ್ಿ ವೈ. ಡಿ. ತಳವಾರ, ರೋಣ ತಾಲೂಕಾ ನ್ಯಾಯವಾದಿಗಳ ಸಂಘದ, ಹಿರಿಯ ನ್ಯಾಯವಾದಿಗಳು, ಗ್ರಾಹಕರ ವೇದಿಕೆ ರಾಜ್ಯ ಪರಿಷತ್ತಿನ ಸದಸ್ಯ ಆರ್ .ಸಿ. ವಾಲಿ, ಸಕರ್ಾರಿ ಅಭಿಯೋಜಕರು, ಕಕ್ಷಿದಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ನಾಡಗೀತೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ನ್ಯಾಯವಾದಿಗಳಾದ ಸಿ.ಎಸ್. ಶೆಟ್ಟರ್, ಕುಮಾರಿ ರೂಪಾ ಅತಿಥಿ ಪರಿಚಯ ನೀಡಿದರು. ನ್ಯಾಯವಾದಿಗಳಾದ ಆರ್.ಬಿ. ಚಳ್ಳಮರದ ವಂದಿಸಿದರು.