ಮುಂಬೈ, ಮೇ 8 ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ "ಸೂರ್ಯವಂಶಿ" ಚಿತ್ರದ ಚಿತ್ರೀಕರಣ ಶುರುವಾಗಿದೆ.
ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ "ಸೂರ್ಯವಂಶಿ" ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದು, ಎಟಿಎಸ್ ಮುಖ್ಯಸ್ಥ ವೀರ, ಸೂರ್ಯವಂಶಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಕೂಡ ಅಭಿನಯಿಸುತ್ತಿದ್ದು, ಪೊಲೀಸ್ ಅಧಿಕಾರಿಗಳ ಕುರಿತು ಚಿತ್ರ ನಿಮರ್ಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶೆಟ್ಟಿ ಈ ಕುರಿತ ಒಂದು ಫೊಟೋ ಶೇರ್ ಮಾಡಿಕೊಂಡಿದ್ದು, "ಈ ರೀತಿ ನಮ್ಮ ಸೌರಮಂಡಲದ ವಿಸ್ತಾರವಾಯಿತು. ನಮ್ಮ ಆಟ ಆರಂಭವಾಗಿದೆ" ಎಂದು ಬರೆದುಕೊಂಡಿದ್ದಾರೆ. ಫೊಟೋ ದಲ್ಲಿ ರೋಹಿತ್ ಶೆಟ್ಟಿ ಜೊತೆ ಆನ್ ಸ್ಕ್ರೀನ್ ಪೊಲೀಸ್ ಅಧಿಕಾರಿಗಳಾದ ರಣವೀರ್ ಸಿಂಗ್, ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.
"ಸೂರ್ಯವಂಶಿ" ಚಿತ್ರೀಕರಣ ಮುಂಬೈ ನಲ್ಲಿ 10ರಿಂದ 12 ದಿನಗಳ ವರೆಗೆ ನಡೆಯಲಿದ್ದು, ಇದಾದ ನಂತರ ಎಂಟ್ರಿ ಸೀನ್ಗಾಗಿ ಅಕ್ಷಯ್ ಕುಮಾರ್ ಅವರು ರೋಹಿತ್ ಕುಮಾರ್ ಜೊತೆ ಬ್ಯಾಂಕಾಕ್ಗೆ ಹೋಗಲಿದ್ದಾರೆ. ನಂತರ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ ಹಾಗೂ ಗೋವಾದಲ್ಲಿ ನಡೆಯುವ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕತ್ರಿನಾ ಕೈಫ್ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.