ಎತ್ತುಗಳ ಕಳ್ಳತನ: ಆರೋಪಿಗಳ ಬಂಧನ ವಾಹನ ಸೇರಿ ಮೂರು ಲಕ್ಷಕ್ಕೂ ಅಧಿಕ ವಶ

ಲೋಕದರ್ಶನ ವರದಿ

ರಾಣೇಬೆನ್ನೂರು 22: ಎತ್ತುಗಳ ಕಳವಿನ ಪ್ರಕರಣಕ್ಕೆ ಸಂಭಂದಿಸಿದಂತೆ ಸ್ಥಳೀಯ ಶಹರ ಪೊಲೀಸರು ಇರ್ವರು ಆರೋಪಿತರನ್ನು ಮಾಲುಗಳ ಸಮೇತ ವಶಪಡಿಸಿಕೊಂಡಿರುವ ಘಟನೆ ಬುಧವಾರ ನಗರದ ದನದ ಮಾರುಕಟ್ಟೆ ಬಳಿ ನಡೆದಿದೆ. 

    ಬಂಧಿತರನ್ನು ಮುಂಡಗೋಡ ತಾಲೂಕಿನ ಕೊಡಂಬಿಯ ರುದ್ರೇಶ ಈರಪ್ಪ ಮತ್ತೂರ ಮತ್ತು ರುದ್ರಸ್ವಾಮಿ ವೀರಯ್ಯ ಹಿರೇಮಠ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಅಶೋಕ ವೀರಭದ್ರಪ್ಪ ಸಕ್ಕನಹಳ್ಳಿ ತಲೆಮರೆಸಿಕೊಂಡಿದ್ದಾನೆ.

    ಬಂಧಿತರಿಂದ 80,000 ರು ಮೌಲ್ಯದ ಎರಡು ಎತ್ತುಗಳು, 3,20,000 ರು ಮೊತ್ತದ ವಾಹನ ಸೇರಿ ಒಟ್ಟು 4 ಲಕ್ಷ ರು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂದ ಹಣದಲ್ಲಿ ಈ ಆರೋಪಿಗಳು ಜೂಜಾಟ, ಓಸಿ, ಸರಾಯಿ ಕುಡಿಯುವುದನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

      ಡಿವೈಎಸ್ಪಿ ಟಿವಿ ಸುರೇಶ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯಕ್ಕೆ ತಂಡ ರಚನೆ ಮಾಡಲಾಗಿತ್ತು.  ಶಹರ ಸಿಪಿಐ ಲಿಂಗನಗೌಡ್ರ ನೆಗಳೂರ, ಪಿಎಸ್ಐ ಟಿ ಮಂಜಣ್ಣ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು. ಈ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.