ಲೋಕದರ್ಶನ ವರದಿ
ಕಾಗವಾಡ 26: ಕೆಲವರು ಮತದಾನ ಯಂತ್ರಗಳಲ್ಲಿ ಲೋಪವಿದೆ ಎಂಬ ಶಂಖೆ ವ್ಯಕ್ತಪಡಿಸುತ್ತಾರೆ. ಅದು ಸುದ್ದ ಸುಳ್ಳು. ಮತದಾರರು ಮತಯಂತ್ರಗಳು ಪರಿಶೀಲಿಸಿರಿ. ಮತ ಚಲಾಯಿಸಿದ ಬಳಿಕ ನಿಮಗೆ ದಾಖಲೆ ದೊರೆಯುತ್ತದೆ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಉಗಾರದಲ್ಲಿ ಹೇಳಿದರು.
ಸೋಮವಾರ ಬೆಳಿಗ್ಗೆ ಉಗಾರ ಖುರ್ದ ಪಟ್ಟಣದ ಗ್ರಾಮಲೇಕ್ಕಾಧಿಕಾರಿ ಕಚೇರಿಯಲ್ಲಿ ಮತದಾರರಿಗೆ ಮತಯಂತ್ರಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಜರುಗಿತು. ಈ ವೇಳೆ ಬಿಇಒ ಎ.ಎಸ್.ಜೋಡಗೇರಿ ಮತದಾರರಿಗೆ ಮಾಹಿತಿ ನೀಡಿದರು.
ನೀವು ಚಲಾಯಿಸಿದ ಮತ ಯಾರಿಗೆ ಎಂಬ ಮಾಹಿತಿ ನಿಮಗೆ ಇದೇ ಯಂತ್ರದಲ್ಲಿ ನೀಡುವ ವ್ಯವಸ್ಥೆ ಇದೆ. ಇದನ್ನು ಪರಿಶೀಲಿಸ ಬಹುದು. ಎಲ್ಲ ಯುವ ಮತದಾರರು ಅದರಲ್ಲಿ ಮಹಿಳಾ ಮತದಾರರು ಬಹಳಷ್ಟು ಜನ ಮತ ಚಲಾಯಿಸುವದಿಲ್ಲಾ. ಇದು ತಪ್ಪು. ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತಚಲಾಯಿಸಬೇಕು. ನಿಮಗೆ ನೀಡಿದ ಒಂದು ವಿಶೇಷ ಅಧಿಕಾರದ ಸದುಪಯೋಗ ಪಡೆದುಕೊಳ್ಳಬೇಕು. ದೇಶದ ಅಭಿವೃದ್ಧಿಗಾಗಿ ಮತಚಲಾಯಿಸಿರಿ ಎಂದು ಬಿಇಒ ಎ.ಎಸ್.ಜೋಡಗೇರಿ, ಪರವೇಕ್ಷಕ ಸಿ.ಎಂ.ಸಾಂಗಲೆ, ಗ್ರಾಮಲೇಕ್ಕಾಧಿಕಾರಿ ಎಂ.ಎನ್.ಕನಕನ್ನವರ ಮತದಾರರಿಗೆ ಮಾಹಿತಿ ನೀಡಿ, ಅಹ್ವಾನಿಸಿದರು.