ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ: ಅಲ್ಲಮಪ್ರಭು ಪಾಟೀಲ
ಸಿಂದಗಿ 17: ಜ.21 ರಂದು ಕುಂದಾನಗರಿ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಎಂಬು ಯೋಧಗೋಷದೊಂದಿಗೆ ಗಾಧಿಜಿಯವರ ಮರು ಸ್ಮರಿಸಬೇಕು ಎನ್ನುವ ನಿಟ್ಟಿನಲ್ಲಿ ಭ್ರಹತ್ ಸಮಾವೇಶ ಹಮ್ಮಿಕೊಂಡಿದ್ದು ಕಾರಣ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಶಾಸಕಾಂಗ ಪಕ್ಷದ ಕಾರ್ಯದರ್ಶಿ ಹಾಗೂ ಕಲಬುರ್ಗಿ ಶಾಸಕ ಅಲ್ಲಮಪ್ರಭು ಪಾಟೀಲ ಮನವಿ ಮಾಡಿಕೊಂಡರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬೆಳಗಾವಿ ಸಮಾವೇಶದ ಕುರಿತು ಪೂರ್ವಭಾವಿಯಾಗಿ ಹಮ್ಮಿಕೋಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧಿಯವರು 1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ 100 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಳೇದ ಡಿಸೆಂಬರ್ 27-28 ರಂದು ಬೆಳಗಾವಿಯ ಸಿ.ಪಿ.ಎಡ್ ಮೈದಾನದಲ್ಲಿ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮವು ಅಂದು ನಮ್ಮ ದೇಶದ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ನಿಧನರಾದ ಪ್ರಯಕ್ತ ಕಾರ್ಯಕ್ರಮವನ್ನು ಮೂಂದೂಡಲಾಗಿತ್ತು ಅದನ್ನು ಮತ್ತೆ ಈ ಐತಿಹಾಸಿಕ ಕ್ಷಣವನ್ನು ಮತ್ತೊಮ್ಮೆ ನಮ್ಮ ನಾಡಿನಲ್ಲಿ ಮರುಕಳಿಸುವಂತೆ ಮಾಡಲು ಹಾಗೂ ಬಾಪುಜಿಯವರ ಪರಿಕಲ್ಪನೆ ಇಂದಿನ ಪಿಳಿಗೆಗೆ ತಿಳಿಸುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಜ.21 ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಬೀಮ, ಜೈ ಸಂವಿಧಾನ ಎನ್ನುವ ವೇಧಗೋಷದೊಂದಿಗೆ ಹಮ್ಮಿಕೊಳ್ಳಲಾದ ಸಮಾವೇಶದಲ್ಲಿ ಬಾಪುಜಿಯವರು ಈ ದೇಶಕ್ಕಾಗಿ ನೀಡದ ಕೊಡುಗೆಗೆಗಳೇನು, ಡಾ. ಅಂಬೇಡ್ಕರ ಅವರು ಸಂವಿದಾನದ ಮೂಲಕ ನೀಡಿದ ಸೌಲಭ್ಯಗಳು ಎಷ್ಟು ಫಲಪ್ರಧವಾಗಿವೆ ಎನ್ನುವ ಇತಿಹಾಸವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸುವ ಸಲುವಾಗಿ ಹಮ್ಮಿಕೊಂಡ ಸಮಾವೇಶಕ್ಕೆ ಈ ಕ್ಷೇತ್ರದ ಪ್ರತಿ ಭೂತಿನಿಂದ 2 ನೂರರಂತೆ 2 ಸಾವಿರಕ್ಕೆ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಕಾರಣ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ಸುರೇಶ ಮಳಲಿಯವರು ಪಕ್ಷದ ಪರವಾಗಿ ಪ್ರಕಟಿಸಿದ 2025ರ ಕ್ಯಾಲೇಂಡರರನ್ನು ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ ಅವರು ಬಿಡುಗಡೆಗೊಳಿಸಿದರು.
ಈ ಗೋಷ್ಠಿಯಲ್ಲಿ ಜಿಪಂ ಮಾಜಿ ಉಪಾದ್ಯಕ್ಷ ಮಲ್ಲಣ್ಣ ಸಾಲಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಖತೀಬ, ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ, ಆಲಮೇಲ ಅದ್ಯಕ್ಷ ಸಾಧಿಕ ಸುಂಬಡ, ಮುಖಂಡ ವೈ.ಸಿ.ಮಯೂರ, ಸುರೇಶ ಮಳಲಿ ಇದ್ದರು.