ಕ್ರೀಡಾಕೂಟದಲ್ಲಿ ಢವಳನಾಥ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಲೋಕದರ್ಶನವರದಿ

ಮಹಾಲಿಂಗಪುರ: ಸಮೀಪದ ನಂದಗಾಂವ ಗ್ರಾಮದಲ್ಲಿ ಸೋಮವಾರ ಹಾಗೂ ಮಂಗಳವಾರ ನಡೆದ ಎಮ್ಪಿಎಸ್ ಮಹಾಲಿಂಗಪುರ ಕೇಂದ್ರ ಮಟ್ಟದ ಕ್ರೀಡಾಕೂಟ 2019-2020ದಲ್ಲಿ ಢವಳನಾಥ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ   ಢವಳೇಶ್ವರ ಶಾಲೆಯ ವಿದ್ಯಾಥರ್ಿಗಳು  ಗುಂಪು ಆಟದಲ್ಲಿ  ಖೋಖೋ ಸತತ 14 ವರ್ಷಗಳಿಂದ ಪ್ರಥಮ(ಗಂಡು), ಥ್ರೋ ಬಾಲ್ ಗಂಡು ದ್ವಿತೀಯ, ಬಾಲಕಿಯರ ವ್ಹಾಲಿಬಾಲ್ ದ್ವಿತೀಯ, ರಿಲೇ ಬಾಲಕಿ ಪ್ರಥಮ, ಗಂಡುಮಕ್ಕಳ ವ್ಯಯಕ್ತಿಕ ಆಟದಲ್ಲಿ ಸುದರ್ಶನ ತಳವಾರ 100ಮೀ.ಓಟದಲ್ಲಿ ದ್ವಿತೀಯ, ದುಂಡಪ್ಪ ಇಟ್ನಾಳ ಗುಂಡು ಎಸೆತ ದ್ವಿತೀಯ,  ಚೇತನ ಬಾಗಲಿ ಅಡೆತಡೆ ಓಟ ದ್ವಿತೀಯ, ಶಿವು ತಲ್ಲೂರ ಎತ್ತ ಜಿಗಿತ ತೃತೀಯ, ಹೆಣ್ಣು ಮಕ್ಕಳ ವ್ಯಯಕ್ತಿಕ ವಿಭಾಗದಲ್ಲಿ ಚೈತ್ರಾ ಚನ್ನದಾಸರ 600 ಮೀ ಓಟದಲ್ಲಿ ಪ್ರಥಮ, ಎತ್ತರ ಜಿಗಿತ ದ್ವಿತಿಯ,ಪೂಜಾ ಹಂದಿಗುಂದ ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ, ತೇಜಸ್ವಿನಿ ಹವಾಲ್ದಾರ ಉದ್ದ ಜಿಗಿತ ದ್ವಿತೀಯ, 400 ಮೀ ಓಟದಲ್ಲಿ ಪ್ರಥಮ,  ಐಶ್ವರ್ಯ ಪಟ್ಟಣಶೆಟ್ಟಿ 200ಮೀ ಓಟದಲ್ಲಿ ಪ್ರಥಮ ವಿದ್ಯಾಥರ್ಿಗಳ ಸಾಧನೆಗೆ ಶಾಲೆಯ ಅಧ್ಯಕ್ಷರಾದ ಪಿ.ಬಿ.ಬಂಗಿ ,ತರಬೇತಿ ನೀಡಿದ ದೈಹಿಕ ಶಿಕ್ಷಕ ಸಿ.ವಿ.ದಾದನಟ್ಟಿ, ಮುಖ್ಯಗುರು ಕೆ.ಜಿ.ನೇಗಿನಾಳ ಹರ್ಷ ವ್ಯಕ್ತಪಡಿಸಿದ್ದಾರೆ.