ಕಾಳಿ ನದಿಯ ಹಳೆಯ ಸೇತುವೆ ಅವಶೇಷ ತೆಗೆಯುವಾಗ ಅವಘಡ
ಕಾರವಾರ 14 : ಕಳೆದ ವರ್ಷ ಅಗಸ್ಟ 7 ರಂದು ಕುಸಿದುಬಿದ್ದಿದ್ದ , 45 ವರ್ಷ ಹಳೆಯದಾದ ಕಾಳಿ ಸೇತುವೆಯ ಅವಶೇಷ ತೆಗೆವಾಗ ಇಂದು ಬೆಳಗಿನ ಜಾವ ಅವಘಡ ಸಂಭವಿಸಿದೆ. ಹೆಚ್ಚಿನ ಅನಾಹುತವಾಗಿಲ್ಲ. ಸೇತುವೆಯ ಅವಶೇಷ ತೆಗೆವ ಕಾರ್ಯ ಕಳೆದ ವರ್ಷದ ಅಕ್ಟೋಬರ್ ನಿಂದ ಜಾರಿಯಲ್ಲಿದೆ. ಕುಸಿದ ಸೇತುವೆಯ ಶೇ. 70 ರಷ್ಟು ಅವಶೇಷ ತೆರವು ಮಾಡಲಾಗಿದೆ. ಈ ಕಾರ್ಯ ಚಾಲನೆಯಲ್ಲಿದ್ದು ಹಗಲು ರಾತ್ರಿ ಕೆಲಸ ನಡೆಯುತ್ತಿದೆ. ಇಂದು ನಸುಕಿನಲ್ಲಿ ಸೇತುವೆ ಕತ್ತರಿಸುವಾಗ ಪಿಲ್ಲರ್ ಒಂದು ಭಾಗ ಕುಸಿದು ಸ್ಲ್ಯಾಬ್ ಮೇಲೆದ್ದಿದೆ. ಅನಾಹುತ ಸಂಭವಿಸಿಲ್ಲ. ಪಕ್ಕದಲ್ಲಿ ಇರುವ ಹೊಸ ಸೇತುವೆಗೆ ಹಳೆಯ ಸೇತುವೆ ಸ್ಲ್ಯಾಬ್ ತಾಗಿದ್ದರೆ , ಹೊಸ ಸೇತುವೆಗೆ ಧಕ್ಕೆ ಆಗುತ್ತಿತ್ತು. ಈಗ ಮೇಲಕ್ಕೆದ್ದ ಸ್ಲ್ಯಾಬ್ ನ್ನು ಸುರಕ್ಷಿತವಾಗಿ ಕತ್ತರಿಸುವುದು ಸವಾಲಿನ ಕೆಲಸವಾಗಿದೆ. ಇದನ್ನು ಇಂಜಿನಿಯರ್ಸ ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ.ಘಟನೆಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ಕಾಳಿ ನದಿಯ ಹಳೆಯ ಸೇತುವೆ ಅವಶೇಷಗಳನ್ನು ಅತ್ಯಂತ ಸುರಕ್ಷಿತವಾಗಿ ತೆಗೆಯಲಾಗುತ್ತಿದೆ. ಇಂದು ಬೆಳಗಿನ ಜಾವ ಪಿಲ್ಲರ್ ವಾಲಿದೆ. ಆಗ ಒಂದು ಕಡೆ ಸ್ಲ್ಯಾಬ್ ವಾಲಿದೆ. ಇದನ್ನು ತಂತ್ರಜ್ಞರು ನಿಧಾನಕ್ಕೆ ತೆಗೆಯುತ್ತಾರೆ. ಯಂತ್ರಗಳು ಅಧುನಿಕವಾಗಿವೆ. ಮಾರ್ಚ ಅಂತ್ಯಕ್ಕೆ ಅವಶೇಷ ಎತ್ತುವ ಕೆಲಸ ಮುಗಿಯಲಿದೆ. 8 ಸ್ಪ್ಯಾನ್ ಪೈಕಿ , ಎರಡು ಸ್ಪ್ಯಾನ್ ಮಾತ್ರ ಉಳಿದಿವೆ. ಜನರು ಭಯಪಡುವ ಅಗತ್ಯ ಇಲ್ಲ. ಕಾಳಜಿಯಿಂದ ಅವಶೇಷ ತೆಗೆಯಲಾಗುವುದು ಎಂದರು.ಆರು ಸ್ಪ್ಯಾನ್ ಸುರಕ್ಷಿತವಾಗಿ ತೆಗೆಯಲಾಗಿದೆ ಎಂದರು. ನಂತರ ವಾಸ್ಕೋ ಏರ್ೋರ್ಟ್ ರಸ್ತೆಯಲ್ಲಿ ಬರುವ ಮಾದರಿಯ ಸೇತುವೆಯ ಸ್ಬರೂಪದ ಸೇತುವೆಯನ್ನು ಕಾಳಿ ನದಿಗೆ ಕಟ್ಟಲಾಗುವುದು ಎಂದರು........