ಲೋಕದರ್ಶನ ವರದಿ
ವಿಜಯಪುರ 14: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಕ ಮಾಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ವತಿಯಿಂದ ಶುಕ್ರವಾರ ವಿಜಯಪುರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಂಚಾಲಕ ಸಚೀನ ಕುಳಗೇರಿ ಮಾತನಾಡಿ, ವಿದ್ಯಾಥರ್ಿ ಜೀವನದ ಮುಖ್ಯ ಘಟಕಗಳು ಎಂದರೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ. ಈ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸುವುದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ. ವಿಪಯರ್ಾಸವೆಂದರೆ ಸಕರ್ಾರದ ಒಳಜಗಳಗಳಿಂದ ತೆರವಾದ ಮಂತ್ರಿ ಸ್ಥಾನವನ್ನು ಇಲ್ಲಿಯವರೆಗೆ ಭತರ್ಿ ಮಾಡದೇ ಈ ರಾಜ್ಯ ಸಕರ್ಾರ ನಿರ್ಲಕ್ಷ್ಯ ತಾಳಿದೆ. ಕಳೆದ 2 ವರ್ಷಗಳ ಹಿಂದೆ ಪಿಯು ಬೋಡರ್್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತೀವ್ರ ಮುಖಭಂಗ ಅನುಭವಿಸಿತ್ತಲ್ಲದೇಲಕ್ಷಾಂತರ ವಿದ್ಯಾಥರ್ಿಗಳ ಮದ್ಯೆ ಗೊಂದಲ ಸೃಷ್ಟಿಸಿತ್ತು. ಇನ್ನೇನು ದ್ವಿತಿಯ ಪಿಯುಸಿ ಪರೀಕ್ಷೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಇಲ್ಲಿಯವರೆಗೂ ಖಾಯಂ ನಿದರ್ೇಶಕರನ್ನು ನೇಮಕ ಮಾಡದೇ ಸಕರ್ಾರ ವಿದ್ಯಾಥರ್ಿಗಳಲ್ಲಿ ಆತಂಕ ಸೃಷ್ಟಿಸಿದೆ ಎಂದರು.
2016ನೇ ಸಾಲಿನ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಂಧಿತನಾಗಿದ್ದ ಶಿವಕುಮಾರ್ ಲಕ್ಷಾಂತರ ಬಡ ಪ್ರತಿಭಾವಂತ ವಿದ್ಯಾಥರ್ಿಗಳ ಜೀವನದ ಜೊತೆ ಚೆಲ್ಲಾಟವಾಡಿ, ರಾಜ್ಯದ ಹಾಗೂ ಪಿಯು ಬೋರ್ಡನ ಮಯರ್ಾದೆ ತೆಗೆದ ವ್ಯಕ್ತಿ ಮತ್ತೆ ಕಳೆದ ವಾರವಷ್ಟೇ ನಡೆದ ಕೆಎಸ್ಸಿಪಿ(ಪೊಲೀಸ್ ಕಾನ್ಸ್ಟೇಬಲ್) ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವಲ್ಲಿ ಬಂಧಿತನಾಗಿದ್ದಾನೆ. ಈ ರೀತಿ ಶಿಕ್ಷಣದ ಪವಿತ್ರತೆಯನ್ನು ಹಾಳು ಮಾಡುತ್ತಿರುವ ಶಿವಕುಮಾರನ ಬಗ್ಗೆ ಮೃದು ಧೋರಣೆ ತಾಳುತ್ತಿರುವುದು ತೀವ್ರ ಖಂಡನೀಯ. ರಾಜ್ಯ ಸಕರ್ಾರ ಕೂಡಲೇ ಗಂಭೀರ ಕ್ರಮ ಜರುಗಿಸಿ ಈ ರೀತಿ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಾ ಸಹ ಸಂಚಾಲಕ ಪಾಂಡು ಮೋರೆ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರನ್ನು ತಕ್ಷಣವೇ ನೇಮಕ ಮಾಡಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ನಿದರ್ೇಶಕರನ್ನು ಕೂಡಲೇ ನೇಮಿಸಬೇಕು. ಕಿಂಗ್ಪಿನ್ ಶಿವಕುಮಾರ್ಗೆ ಸೂಕ್ತ ಶಿಕ್ಷೆ ವಿಧಿಸಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಪಿಯುಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾಥರ್ಿಗಳು, ಪೋಷಕರು ಆತಂಕದಲ್ಲಿ ಪರೀಕ್ಷೆಯನ್ನು ಎದುರು ನೋಡುವುದನ್ನು ತಪ್ಪಿಸಿ, ಕಟ್ಟುನಿಟ್ಟಿನ ಕ್ರಮದೊಂದಿಗೆ ಪರೀಕ್ಷೆಯನ್ನು ನಡೆಸುವಂತೆ ಪಿಯು ಬೋಡರ್್ ಕ್ರಮ ತೆಗೆದುಕೊಳ್ಳಬೇಕು. ಸಿ.ಐ.ಡಿ ಉಲ್ಲೇಖಿಸಿರುವ ಸಂಸ್ಥೆಗಳ, ಕಾಲೇಜುಗಳ ಮಾನ್ಯತೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ತಿಳಿಸಿದರು.
ಮನವಿಯ ಕೊಡುವುದಕ್ಕಿಂತ ಮುಂಚಿತವಾಗಿ ನಗರದ ಗಾಂಧಿಚೌಕದಲ್ಲಿ ರಾಜ್ಯ ಸರಕಾರದ ವಿರುದ್ದ ವಿದ್ಯಾಥರ್ಿಗಳು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲುಕ ಸಂಚಾಲಕ ಬಸವರಾಜ ಪೂಜಾರಿ, ವಿನೋದ ಮನ್ನವಡ್ಡರ,ಸುಮಾ ಬಿರಾದಾರ, ಐಶ್ವರ್ಯ ಕುಲಕಣರ್ಿ, ಲಕ್ಷ್ಮೀ ,ಶ್ರೀದೇವಿ, ವಷರ್ಾ, ಸಹನಾ ಬಿರಾದಾರ, ಶೃಷ್ಠಿ ಬಿರಾದಾರ ಇನ್ನಿತರರು ಉಪಸ್ಥಿತರಿದ್ದರು.