ಬೆಳಗಾವಿಯಲ್ಲಿ ಸ್ಯಾಂಡ್ ಕಾಸ್ಟಿಂಗ್ ಘಟಕ ಸ್ಥಾಪನೆ ಏಕಸ್-ಮಗೆಲ್ಲನ್ ಏರೋಸ್ಪೇಸ್ ಪಾಲುದಾರಿಕೆ
ಬೆಳಗಾವಿ(ಟೊರೊಂಟೊ, ಒಂಟಾರಿಯೊ) 06: ಮಗೆಲ್ಲನ್ ಏರೋಸ್ಪೇಸ್ ಕಾರ್ೊರೇಷನ್ (ಮಗೆಲ್ಲನ್) ಸಂಸ್ಥೆಯು ಬೆಳಗಾವಿ ಏರೋಸ್ಪೇಸ್ ಕ್ಲಸ್ಟರ್‌ನಲ್ಲಿ (ಬಿಎಸಿ) 50/ 50 ಜಂಟಿ ಮಾಲೀಕತ್ವದ ಏರೋಸ್ಪೇಸ್ ಸ್ಯಾಂಡ್ ಕಾಸ್ಟಿಂಗ್ ಘಟಕ ಸ್ಥಾಪಿಸಲು ಉದ್ಯಮ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಏಕಸ್ ಪ್ರೈವೇಟ್ ಲಿಮಿಟೆಡ್ (ಏಕಸ್) ಕಂಪನಿ ಜೊತೆಗೆ ಇಂದು ತಿಳಿವಳಿಕೆ ಪತ್ರಕ್ಕೆ (ಎಂಓಯು) ಸಹಿ ಮಾಡಿದೆ.
ಉದ್ದೇಶಿತ ಘಟಕವು ಬೆಳೆಯುತ್ತಿರುವ ಏರೋಸ್ಪೇಸ್ ಉದ್ಯಮದ ಸ್ಯಾಂಡ್ ಕಾಸ್ಟಿಂಗ್ ಬೇಡಿಕೆಗಳನ್ನು ಪೂರೈಸುವ ಗುರಿ ಹೊಂದಿದೆ. ಈ ಹೆಚ್ಚುವರಿ ಸ್ಯಾಂಡ್ ಕಾಸ್ಟಿಂಗ್ ಸಾಮರ್ಥ್ಯವು ವಾಣಿಜ್ಯ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಸಹಾಯ ಮಾಡಲಿದೆ.
ಪ್ರಸ್ತುತ, ಭಾರತದಲ್ಲಿ ಏರೋಸ್ಪೇಸ್- ಪ್ರಮಾಣೀಕೃತ ಎನ್‌ಎಡಿಸಿಎಪಿ ಸ್ಯಾಂಡ್ ಕಾಸ್ಟಿಂಗ್ ಘಟಕಗಳ ಸಂಖ್ಯೆ ಬಹಳ ಕಡಿಮೆ ಇದೆ. ಈ ಹೊಸ ಯೋಜನೆಯು ಆಗ್ನೇಯ ಏಷ್ಯಾ ಭಾಗದಲ್ಲಿ ಸ್ಯಾಂಡ್ ಕಾಸ್ಟಿಂಗ್ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿದೆ. ಮಗೆಲ್ಲನ್ ಕಂಪನಿ ಈಗಾಗಲೇ ಉತ್ತರ ಅಮೆರಿಕಾದಲ್ಲಿ ಸ್ಯಾಂಡ್ ಕಾಸ್ಟಿಂಗ್ ನ ಅತ್ಯುತ್ಕೃಷ್ಟ ಕೇಂದ್ರ ಹೊಂದಿದೆ. ಅಲ್ಲಿ ಮಗೆಲ್ಲನ್ ಸಂಸ್ಥೆಯು ರಾಸಾಯನಿಕ ಆಧರಿತ ಸ್ಯಾಂಡ್ ಪ್ರೊಸೆಸ್ ಬಳಸಿಕೊಂಡು ಸಂಕೀರ್ಣ ಆಕಾರಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದೆ. ಉತ್ತರ ಅಮೆರಿಕಾದ ಘಟಕಗಳು 3ಡಿ ಸ್ಯಾಂಡ್ ಪ್ರಿಂಟಿಂಗ್, ರೋಬೊಟಿಕ್ಸ್, ಡಿಜಿಟಲ್ ರೇಡಿಯೊಗ್ರಫಿ ಮತ್ತು ಅಟೋಮೇಟೆಡ್ ಡಿಫರೆನ್ಷಿಯಲ್ ಪ್ರೆಷರ್ ಬಾಟಮ್ ಪೋರಿಂಗ್ ಮುಂತಾದ ನವೀನ ತಂತ್ರಜ್ಞಾನಗಳಲ್ಲಿ ಅದ್ಭುತ ಪರಿಣತಿ ಹೊಂದಿವೆ.
ಕಳೆದ ಒಂದು ದಶಕದಲ್ಲಿ ಭಾರತದ ಏರೋಸ್ಪೇಸ್ ಕ್ಷೇತ್ರವು ಭಾರಿ ಬೆಳವಣಿಗೆ ಕಂಡಿದೆ. ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಉಡಾನ್ ಯೋಜನೆಗಳು, ಖಾಸಗಿ ಕ್ಷೇತ್ರದಲ್ಲಿ ಉಂಟಾಗಿರುವ ಅಭಿವೃದ್ಧಿ ಮತ್ತು ಹೆಚ್ಚುತ್ತಿರುವ ವಿಮಾನ ಯಾನ ಬೇಡಿಕೆ ಏರೋಸ್ಪೇಸ್ ಕ್ಷೇತ್ರದ ಬೆಳವಣಿಗೆಗೆ ಮೂಲ ಕಾರಣವಾಗಿವೆ. ಭಾರತದಲ್ಲಿ ವಿಮಾನ ಪ್ರಯಾಣಕ್ಕೆ ಬೇಡಿಕೆ ಜಾಸ್ತಿಯಾಗಿದ್ದು, ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ.
ಈ ಹೊಸ ಎಂಓಯು ಬಗ್ಗೆ ಮಾತನಾಡಿರುವ ಏಕಸ್ನ ಅಧ್ಯಕ್ಷ ಮತ್ತು ಸಿಇಓ ಅರವಿಂದ್ ಮೆಲ್ಲಿಗೇರಿ, ನಮ್ಮ ದೀರ್ಘಕಾಲದ ಪಾಲುದಾರರಾದ ಮಗೆಲ್ಲನ್ ಏರೋಸ್ಪೇಸ್ ಜೊತೆಗೆ ಬೆಳಗಾವಿ ಏರೋಸ್ಪೇಸ್ ಕ್ಲಸ್ಟರ್ ನಲ್ಲಿ ಸ್ಯಾಂಡ್ ಕಾಸ್ಟಿಂಗ್ ಘಟಕ ಸ್ಥಾಪಿಸುವ ಈ ಪ್ರಸ್ತಾವನೆಯು, ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಉತ್ಪಾದನಾ ಪ್ರಕ್ರಿಯೆ ಮತ್ತು ತಂತ್ರಜ್ಞಾನಗಳನ್ನು ಒದಗಿಸುವ ನಮ್ಮ ಉದ್ದೇಶದ ಜೊತೆ ಸರಿಹೊಂದುತ್ತದೆ. ಜೊತೆಗೆ ಈ ಸಹಯೋಗವು ಏಕಸ್ ಈ ಕ್ಲಸ್ಟರ್ ನಲ್ಲಿ ಈಗಾಗಲೇ ಹೊಂದಿರುವ ಉತ್ಪಾದನಾ ಘಟಕದ ಸಾಮರ್ಥ್ಯ ಹೆಚ್ಚಳಕ್ಕೂ ಸಹಾಯ ಮಾಡಲಿದೆ. ಸ್ಯಾಂಡ್ ಕಾಸ್ಟಿಂಗ್ ತಂತ್ರಜ್ಞಾನದಲ್ಲಿ ಉಂಟಾಗಿರುವ ಪ್ರಗತಿಯಿಂದಾಗಿ ಏರೋಸ್ಪೇಸ್ ಉದ್ಯಮ ಬಯಸುವ ಕಠಿಣ ಮಾನದಂಡಗಳನ್ನು ಪಾಲಿಸುವ ಲೈಟ್ ವೇಯ್ಟ್ ಮತ್ತು ಬಲಿಷ್ಠ ಭಾಗಗಳನ್ನು ಒದಗಿಸಲು ಸಾಧ್ಯವಾಗಿದೆ ಎಂದರು.
ಈ ಕುರಿತು ಮಾತನಾಡಿದ ಮಗೆಲ್ಲನ್ ಏರೋಸ್ಪೇಸ್ ನ ಅಧ್ಯಕ್ಷ ಮತ್ತು ಸಿಇಓ ಫಿಲಿಪ್ ಅಂಡರ್ ವುಡ್, ಏರೋಸ್ಪೇಸ್ ಮತ್ತು ವಾಯುಯಾನ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧು ಕಂಡು ಬಂದಿದ್ದು, ಭಾರತದ ಕರ್ನಾಟಕದಲ್ಲಿನ ಈ ಉದ್ದೇಶಿತ ಹೊಸ ಸ್ಯಾಂಡ್ ಕಾಸ್ಟಿಂಗ್ ಘಟಕ ಯೋಜನೆಯು ಮೂಲಸೌಕರ್ಯ ಅಭಿವೃದ್ಧಿ, ವೆಚ್ಚ ಪ್ರಯೋಜನಗಳು, ಸಾಮರ್ಥ್ಯ ಹೆಚ್ಚಳ ಮತ್ತು ಕಾರ್ಯತಂತ್ರದ ಉಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಈ ಯೋಜನೆಗಳು ಈ ಕ್ಷೇತ್ರದ ಜಾಗತಿಕ ಸಾಮರ್ಥ್ಯವನ್ನು ಜಾಸ್ತಿ ಮಾಡಲು ಅತ್ಯಗತ್ಯವಾಗಿವೆ. ಮಗೆಲ್ಲನ್ ಸಂಸ್ಥೆಯು ಭಾರತದಲ್ಲಿ ಈ ವಿಭಾಗವನ್ನು ಅಭಿವೃದ್ಧಿಗೊಳಿಸಲು ಬದ್ಧವಾಗಿದೆ. ನಮ್ಮ ಗ್ರಾಹಕರ ಬೆಳೆಯುತ್ತಿರುವ ಬೇಡಿಕೆಗಳನ್ನು ವೆಚ್ಚ- ಪರಿಣಾಮಕಾರಿ ಮತ್ತು ಗುಣಮಟ್ಟದ ಉತ್ಪನ್ನಗಳ ಮೂಲಕ ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.