ರಾಯಬಾಗ 18: ಕಬ್ಬು ತುಂಬಿಕೊಂಡು ಸಕ್ಕರೆ ಕಾಖರ್ಾನೆಗೆ ಹೋಗುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಟ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ವಿಭಜಕ(ಡಿವೈಡರ್) ಕಿತ್ತು ಹೋಗಿ, ಬೀದಿ ದೀಪ ಕಂಬ ನೆಲಕ್ಕೆ ಉರಳಿದ ಘಟನೆ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಮಹಾವೀರ ಭವನ ಹತ್ತಿರದ ರಾಯಬಾಗ-ಅಂಕಲಿ ಮುಖ್ಯರಸ್ತೆಯಲ್ಲಿ ಅಳವಡಿಸಿರುವ ರಸ್ತೆ ವಿಭಜಕಕ್ಕೆ ಕಬ್ಬು ತುಂಬಿದ ಟ್ಯಾಕ್ಟರ್ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಟ್ಯಾಕ್ಟರ್ ಡಿಕ್ಕಿ ಹೊಡೆದ ರಭಸಕ್ಕೆ ವಿಭಜಕ ಕಿತ್ತು ಹೋಗಿ, ಅಲ್ಲಿ ಅಳವಡಿಸಿದ್ದ ಬೀದಿ ದೀಪ ಕಂಬ ನೆಲಕ್ಕೆ ಉರಳಿದೆ. ಬೆಳಿಗಿನ ಜಾವ ಈ ಘಟನೆ ಸಂಭವಿಸಿದ್ದರಿಂದ ಜನರ ಸಂಚಾರ ವಿರಳವಾಗಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಬಿದ್ದಿರುವ ಕಬ್ಬನ್ನು ಬೇರೆ ವಾಹನದ ಮೂಲಕ ತುಂಬಿ ಸಾಗಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.